ವಿದ್ಯುತ್ ಆಕ್ಸೆಸಬಿಲಿಟಿ: ವಿಶ್ವಸಂಸ್ಥೆ ಪಟ್ಟಿಯಲ್ಲಿ 73 ಸ್ಥಾನ ಏರಿಕೆ ಕಂಡ ಭಾರತ
ನವದೆಹಲಿ, ಮೇ 15: ವಿಶ್ವಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ 'ವಿಶ್ವ ವಿದ್ಯುತ್ ಆಕ್ಸೆಸಬಿಲಿಟಿ' ಪಟ್ಟಿಯಲ್ಲಿ ಭಾರತ 73 ಸ್ಥಾನಗಳ ಏರಿಕೆ ಕಂಡಿದೆ ಎಂದು ಕೇಂದ್ರ ಇಂಧನ ಸಚಿವ ಫಿಯೂಶ್ ಗೋಯಲ್ ತಿಳಿಸಿದ್ದಾರೆ.
2014ರಲ್ಲಿ ಬಿಡುಗಡೆಯಾಗಿದ್ದ ಇದೇ ಪಟ್ಟಿಯಲ್ಲಿ ಭಾರತ 99ನೇ ಸ್ಥಾನದಲ್ಲಿತ್ತು, ಈ ವರ್ಷ ಬಿಡುಗಡೆಯಾದ ಪಟ್ಟಿಯಲ್ಲಿ ಭಾರತ 26ನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಪ್ರತಿಯೊಂದು ಮನೆಗೆ ವಿದ್ಯುತ್ ನೀಡುವ ಯೋಜನೆಯಲ್ಲಿ ಭಾರತ ಸಾಧಿಸಿರುವ ಪ್ರಗತಿ, ನಾಗರಿಕರಿಗೆ ವಿದ್ಯುತ್ತಿನ ಪ್ರಯೋಜನಗಳನ್ನು ತಲುಪಿಸುವ ಗುರಿಯ ಸಾಧನೆಯಲ್ಲಿನ ಪ್ರಗತಿಗಳ ಆಧಾರದ ಮೇರೆಗೆ ಈ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದು ಹೇಳಿದ ಗೋಯೆಲ್, ಈ ನಿಟ್ಟಿನಲ್ಲಿ ಭಾರತದ ಸಾಧನೆ ತೃಪ್ತಿಕರವಾಗಿದೆ ಎಂದು ವಿಶ್ಲೇಷಿಸಿದರು.












Click it and Unblock the Notifications