ಅಮೆರಿಕದಿಂದ ಭಾರತ 700 ಕೋಟಿ ವೆಚ್ಚದಲ್ಲಿ 72,400 ರೈಫಲ್ ಖರೀದಿ

ನವದೆಹಲಿ, ಫೆಬ್ರವರಿ 12: ಅಮೆರಿಕದಿಂದ 72,400 ಹಗುರ ರೈಫಲ್ಸ್ ಗಳನ್ನು 700 ಕೋಟಿ ವೆಚ್ಚದಲ್ಲಿ ಖರೀದಿಸಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಈ ರೈಫಲಲ್ ಗಳನ್ನು ಅಮೆರಿಕ ಸೇನೆ ಸೇರಿದಂತೆ ಯುರೋಪ್ ನ ಇತರ ದೇಶಗಳಲ್ಲಿ ಬಳಸಲಾಗುತ್ತಿದೆ.

ತ್ವರಿತ ಗತಿಯಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದ್ದು, ಸಿಗ್ ಸೌರ್ ಅಸಾಲ್ಟ್ ರೈಫಲ್ಸ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತವು ‌7.62 ಎಂಎಂ 72,400 ರೈಫಲ್ಸ್ ಅನ್ನು ಇನ್ನು ಒಂದು ವರ್ಷದೊಳಗೆ ಖರೀದಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಫಲ್ಸ್ ಗಳಿಗೆ ಏಳು ನೂರು ಕೋಟಿ ರುಪಾಯಿ ವೆಚ್ಚವಾಗಲಿದೆ.

ಸದ್ಯಕ್ಕೆ ಭಾರತೀಯ ಸೇನೆಯು 5.56X45 ಎಂಎಂ INSAS ರೈಫಲ್ ಬಳಸುತ್ತಿದೆ. ಸದ್ಯಕ್ಕೆ ತುರ್ತಾಗಿ ಅದನ್ನು ಬದಲಿಸಬೇಕಿದೆ. ಅದರ ಬದಲಿಗೆ 7.6X51 ಎಂಎಂ ಅಸಾಲ್ಟ್ ರೈಫಲ್ ಬಳಸಲಾಗುವುದು. ಇವು ಬಳಸಲು ಅನುಕೂಲಕರವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಜತೆಗೆ ಇವುಗಳ ನಿರ್ವಹಣೆ ಕೂಡ ಸಲೀಸಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

indian Army

ಚೀನಾದ ಗಡಿಯಲ್ಲಿ ಈ ರೈಫಲ್ ಬಳಸಲಾಗುವುದು. ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವೆ ಈಗಾಗಲೇ ಸಹಿ ಹಾಕಿದ್ದಾರೆ. ಸರಕಾರದ ರೈಫಲ್ ಕಾರ್ಖಾನೆ ಇಷಾಪುರ್ ನಲ್ಲಿ ಇದ್ದು, ಅಲ್ಲಿ ತಯಾರಾದ ಅಸಾಲ್ಟ್ ರೈಫಲ್ ಅನ್ನು ಸೇನೆ ತಿರಸ್ಕರಿಸಿದೆ. ಸಾಮರ್ಥ್ಯ ಪರಿಶೀಲನೆ ಪರೀಕ್ಷೆಯಲ್ಲಿ ಈ ರೈಫಲ್ ವಿಫಲವಾಗಿತ್ತು. ಆ ನಂತರ ಭಾರತೀಯ ಸೇನೆಯು ಜಾಗತಿಕ ಮಾರುಕಟ್ಟೆಯಿಂದ ರೈಫಲ್ ಖರೀದಿಗೆ ಮುಂದಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+