Steel Import: ಭಾಯಿ ಭಾಯಿ ಎನ್ನುತ್ತಲ್ಲೇ ಚೀನಾಗೆ ಉಕ್ಕಿನ ಶಾಕ್ ಕೊಟ್ಟ ಭಾರತ
ನವದೆಹಲಿ: ಭಾರತವು ಚೀನಾದಿಂದ ಆಮದು ಆಗುತ್ತಿರುವ ಉಕ್ಕಿನ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದ ಸುಂಕ ವಿಧಿಸುವುದಕ್ಕೆ ಮುಂದಾಗಿದೆ. ಈ ವರ್ಷ ಭಾರತದ ವಿವಿಧ ವಸ್ತುಗಳ ಮೇಲೆ ಅಮೆರಿಕಾ ಹಾಗೂ ಮೆಕ್ಸಿಕೋ ಶೇ 50ರಷ್ಟು ಸುಂಕ ವಿಧಿಸಿದ್ದವು.
ಅಲ್ಲದೇ ವಿವಿಧ ಉತ್ಪನ್ನಗಳ ಮೇಲೆ ಮನಸೋ ಇಚ್ಛೆ ಸುಂಕ ವಿಧಿಸಲಾಗಿದೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರವು ಭಾರತದ ಆರ್ಥಿಕ ಹಿತದೃಷ್ಟಿಯಿಂದ ಚೀನಾದ ಮೇಲೆ ಉಕ್ಕಿನ ಉತ್ಪನ್ನಗಳ ಮೇಲೆ ದುಬಾರಿ ಮೊತ್ತದ ಸುಂಕ ವಿಧಿಸಿದೆ. ಚೀನಾದ ಮೇಲೆ ಭಾರತವು ಸುಂಕ ವಿಧಿಸಿರುವುದಕ್ಕೆ ಕಾರಣವೇನು ಹಾಗೂ ಇದರ ಪರಿಣಾಮಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಮೂರು ವರ್ಷಗಳ ಅವಧಿಗೆ ಸುಂಕ
ಭಾರತವು ಚೀನಾದಿಂದ ಆಮದು ಆಗುವ ಕೆಲವು ನಿರ್ದಿಷ್ಟ ಉಕ್ಕಿನ ಉತ್ಪನ್ನಗಳ ಮೇಲೆ ಮೂರು ವರ್ಷಗಳ ಅವಧಿಗೆ ಆಮದು ಸುಂಕವನ್ನು ವಿಧಿಸಿದೆ. ಈ ಸುಂಕದ ಪ್ರಮಾಣವು ಶೇ.11ರಿಂದ 12 ರಷ್ಟು ಇರಲಿದೆ. ಚೀನಾದಿಂದ ಭಾರತಕ್ಕೆ ಆಮದು ಆಗುತ್ತಿರುವ ಉಕ್ಕಿನ ಉತ್ಪನ್ನಗಳ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಕೇಂದ್ರ ಸರ್ಕಾರವು ತಿಳಿಸಿದೆ. ಮುಂದುವರಿದು ಮೊದಲ ವರ್ಷದಲ್ಲಿ ಸುಂಕವನ್ನು ಶೇ.12ರಷ್ಟು ಇರಲಿದ್ದು, ಎರಡನೇ ವರ್ಷದಲ್ಲಿ ಶೇ.11.5ಕ್ಕೆ ಇಳಿಸಲಾಗುವುದು ಹಾಗೂ ಮೂರನೇ ವರ್ಷದಲ್ಲಿ ಶೇ.11 ಕ್ಕೆ ಇಳಿಸಲಾಗುವುದು. ಒಟ್ಟಾರೆ ಮೂರು ವರ್ಷದ ಅವಧಿಗೆ ಉಕ್ಕಿನ ಉತ್ಪನ್ನಗಳ ಮೇಲೆ ಈ ಸುಂಕ ಇರಲಿದೆ ಎಂದು ಹೇಳಲಾಗಿದೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ಉಕ್ಕು ಉತ್ಪಾದಕ ರಾಷ್ಟ್ರವಾಗಿದೆ. ಚೀನಾದಿಂದ ಕಡಿಮೆ ಬೆಲೆಯ ಉಕ್ಕಿನ ಆಮದು ಹೆಚ್ಚಳವಾಗಿದೆ. ಅಲ್ಲದೇ ಚೀನಾದಿಂದ ಕಡಿಮೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳು ಸಹ ಭಾರತದ ಮಾರುಕಟ್ಟೆಗೆ ಬರುತ್ತಿದೆ. ಇದು ದೇಶಿಯ ಉಕ್ಕು ತಯಾರಕರ ಮೇಲೆ ಒತ್ತಡ ತಂದಿದೆ. ಅಧಿಕೃತ ಸರ್ಕಾರಿ ಆದೇಶದ ಪ್ರಕಾರ, ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಆಮದುಗಳನ್ನು ಹೊರತುಪಡಿಸಲಾಗಿದೆ. ಆದರೆ ಚೀನಾ, ವಿಯೆಟ್ನಾಂ ಮತ್ತು ನೇಪಾಳ ರಾಷ್ಟ್ರಗಳು ಈ ನಿರ್ಬಂಧ ವ್ಯಾಪ್ತಿಗೆ ಒಳಪಟ್ಟಿವೆ. ಇದು ಸ್ಟೇನ್ಲೆಸ್ ಸ್ಟೀಲ್ನಂತಹ ವಿಶೇಷ ಉಕ್ಕಿನ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಯಾಕೆ ಈ ಕ್ರಮ
ಅಗ್ಗದ ಆಮದುಗಳು ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳಿಂದಾಗಿ ದೇಶೀಯ ಉಕ್ಕು ಉದ್ಯಮವು ಹಾನಿಯನ್ನು ಎದುರಿಸಬಾರದು ಎಂದು ಕೇಂದ್ರ ಸರ್ಕಾರವು ಹೇಳಿದೆ. ಉಕ್ಕು ಆಮದು ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿದೆ. ಇದು ದೇಶೀಯ ಉದ್ಯಮಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತಿದೆ ಮತ್ತು ಬೆದರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯಪಟ್ಟಿದೆ. ಈಚೆಗೆ ವಾಣಿಜ್ಯ ಪರಿಹಾರಗಳ ನಿರ್ದೇಶನಾಲಯವು ಮೂರು ವರ್ಷಗಳ ಸುಂಕ ವಿಧಿಸುವ ಶಿಫಾರಸು ಮಾಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚೀನಾದ ಉಕ್ಕಿನ ರಫ್ತಿನ ಮೇಲಿನ ಜಾಗತಿಕ ವ್ಯಾಪಾರ ಘರ್ಷಣೆಯ ಮಧ್ಯೆ ಭಾರತದ ಈ ಕ್ರಮವು ತೆಗೆದುಕೊಂಡಿದೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ಕಿನ ಮೇಲೆ ಆಮದು ಸುಂಕಗಳನ್ನು ವಿಧಿಸುವ ನಿರ್ಧಾರದಿಂದ ಭಾಗಶಃ ಪ್ರಭಾವ ಬೀರಿದೆ.
ಸುಂಕ ಸರ್ಕಸ್: ಇನ್ನು ಭಾರತ ಸರ್ಕಾರದ ಈ ನಿರ್ಧಾರದೊಂದಿಗೆ ಸುಂಕ ಸರ್ಕಸ್ ಈ ವರ್ಷ ಅಂತ್ಯಗೊಂಡಿದೆ. ಈ ವರ್ಷ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಕಾಬಿಟ್ಟಿ ಸುಂಕ ತೆರಿಗೆ ನೀತಿಯು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications