Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ
ಚೆನ್ನೈ: ತಮಿಳುನಾಡಿನ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ (ಜೋಸೆಫ್ ವಿಜಯ್) ಅವರು ಮೊದಲ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. 52 ವರ್ಷದ ವಿಜಯ್ ಪೆರಂಬೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಉಮೇದುವಾರಿಕೆ ಸಲ್ಲಿಕೆ ವೇಳೆ ಅವರು ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿಯ ವಿವರಗಳನ್ನು ಘೋಷಿಸಿದ್ದಾರೆ. ಸದ್ಯ ಅವರ ಆಸ್ತಿ ವಿಚಾರ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ.
ವಿಜಯ್ ಒಟ್ಟು ಆಸ್ತಿ 645 ಕೋಟಿ ರೂ.
ಅಫಿಡವಿಟ್‌ನಲ್ಲಿರುವ ಅಂಕಿ ಸಂಖ್ಯೆಗಳ ಪ್ರಕಾರ, ಅವರ ಒಟ್ಟಾರೆ ಆಸ್ತಿ ಮೌಲ್ಯವು ಒಟ್ಟು ಸುಮಾರು 645 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಚರಾಸ್ತಿಯ ಸುಮಾರು 455 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬ್ಯಾಂಕ್ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ವಿವಿಧ ಕಂಪನಿಗಳಲ್ಲಿನ ಹೂಡಿಕೆಗಳು ಒಳಗೊಂಡಿವೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂಪಾಯಿಗಳ ಸ್ಥಿರ ಠೇವಣಿ ಸಹ ಹೊಂದಿದ್ದಾರೆ.

2024-2025ರ ಹಣಕಾಸು ವರ್ಷದಲ್ಲಿ ಸುಮಾರು 184 ಕೋಟಿ ರೂಪಾಯಿ ಆದಾಯ ಗಳಿಸಿದ್ದಾಗಿ ಅವರು ತಿಳಿಸಿದ್ದಾರೆ. ಚೆನ್ನೈನ ನೀಲಾಂಕರೆಯಲ್ಲಿ ವಾಸವಾಗಿರುವ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಅವರ ಹೆಸರಿನಲ್ಲಿಯೂ ಲಕ್ಷಾಂತರ ರೂ. ಆಸ್ತಿ ಪಾಸ್ತಿ, ನಗದು (ಠೇವಣಿ) ಇರುವ ಮಾಹಿತಿ ಲಭ್ಯವಾಗಿದೆ.
ವಿಜಯ್ ಒಟ್ಟು ಆಸ್ತಿ ಎಷ್ಟು?
* ವಿಜಯ್ ಒಟ್ಟು ಆಸ್ತಿ ಮೌಲ್ಯ- 645 ಕೋಟಿ ರೂಪಾಯಿ
* ಚರಾಸ್ತಿ ಒಟ್ಟು ಮೌಲ್ಯ-445 ಕೋಟಿ ರೂಪಾಯಿ
* ಸ್ಥಿರಾಸ್ತಿ ಒಟ್ಟು ಮೌಲ್ಯ- ಸುಮಾರು 200 ಕೊಟಿ ರೂಪಾಯಿ
* ಕೊಡೈಕೆನಾಲ್‌ನಲ್ಲಿ 2 ಎಸ್ಟೇಟ್
* ವರ್ಷದ ಹಿಮದೆ ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಖರೀದಿ ಬೆಲೆ- 67,000 ರೂಪಾಯಿ
* ಭಾರತೀಯ ವಿದೇಶಿ ಬ್ಯಾಂಕಿನಲ್ಲಿನ ಠೇವಣಿ- 213 ಕೋಟಿ ರೂಪಾಯಿ
* ಆಕ್ಸಿಸ್ ಬ್ಯಾಂಕಿನಲ್ಲಿಟ್ಟ ಹಣ- 53 ಕೋಟಿ ರೂಪಾಯಿ
* ಮಗನಿಗೆ 8 ಲಕ್ಷ ರೂಪಾಯಿ ಹಾಗೂ ಮಗಳಿಗೆ 4 ಲಕ್ಷ ರೂ. ಸಾಲ ನೀಡಿದ್ದಾಗಿ ಅವರು ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.
ಮಾತ್ರವಲ್ಲದೇ ವಿಜಯ್ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ತಮಗೆ ಯಾವುದೇ ಪ್ರಕರಣಗಳಲ್ಲಿ ಶಿಕ್ಷೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ರಂಗಕ್ಕೆ ಪ್ರವೇಶಿಸಿರುವ ವಿಜಯ್ ಅವರಿಗೆ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಅವರ ಕ್ಷೇತ್ರ, ಅಸ್ತಿ, ರಾಜಕೀಯ ತಂತ್ರಗಾರಿಕೆ ಸುತ್ತ ಗಮನ ನೆಟ್ಟಿದೆ.












Click it and Unblock the Notifications