Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ
ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸಮೃದ್ದಿಯನ್ನು ಸುಧಾರಿಸಲು ಕೆಲವು ಸಸ್ಯಗಳನ್ನು ಬೆಳೆಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವದರಿಂದ ಹಿಡಿದು ಹಣಕಾಸು ತೊಂದರೆಗಳವರೆಗೆ ಸರಿಯಾದ ವಾಸ್ತು ಶಾಸ್ತ್ರದ ವಿಧಾನಗಳನ್ನು ಅನುಸರಿಸಿದರೆ ಅದಕ್ಕೆ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದು ಹೇಳಲಾಗಿದೆ. ವಿಶೇಷವಾಗಿ ಈ ಐದು ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮಂಗಳಕರ ಎಂದು ಸೂಚಿಸಲಾಗುತ್ತದೆ.
ಗುಲಾಬಿ ಹೂವು:
ಗುಲಾಬಿ ಹೂವು ಪ್ರೀತಿ ಮತ್ತು ಐಶ್ವರ್ಯದ ಸಂಕೇತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗುಲಾಬಿ ಸಸ್ಯ ಬೆಳೆಸುವುದು ಮಂಗಳಕರ. ಇದು ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಸೂಚಿಸುತ್ತದೆ ಎಂದು ನಂಬಲಾಗುತ್ತದೆ. ನೈಋತ್ಯ ದಿಕ್ಕಿನಲ್ಲಿ ಇದನ್ನು ಬೆಳೆಸುವುದರಿಂದ ನಮ್ಮ ಸಂಬಂಧಗಳನ್ನು ಬಲಪಡಿಸಲು ಇದು ಸಹಾಯಕಾರಿ ಆಗಿದೆ. ಆದರೆ ಒಣಗಿದ ಹೂಗಳು ಅಥವಾ ಮುಳ್ಳುಗಳಿಂದ ಕೂಡಿದ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದು ಮಾಡಬಾರದು.

ಮಲ್ಲಿಗೆ ಹೂವು:
ಮಲ್ಲಿಗೆ ಹೂವು ತನ್ನ ಸುವಾಸನೆಯಿಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ ಎಂದು ಹೇಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನಮ್ಮ ಮನಸ್ಸಿನ ಮತ್ತು ದೇಹದ ಒತ್ತಡವನ್ನು ಕಡಿಮೆ ಮಾಡಿ ಸರಿಯಾದ ನಿದ್ರೆ ಮಾಡಲು ಸಹಾಯಕವಾಗಿರುತ್ತದೆ. ದಂಪತಿಗಳ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ. ಈ ಸಸ್ಯವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನ ಬಾಲ್ಕನಿಯಲ್ಲಿ ಬೆಳೆಸುವುದು ಒಳ್ಳೆಯದು.
ಸದಾಪುಷ್ಪ ಹೂವು:
ಈ ಸದಾಪುಷ್ಪ ಸಸ್ಯವು ವರ್ಷಪೂರ್ತಿ ಹೂ ಬಿಡುವ ಗುಣವನ್ನು ಹೊಂದಿದೆ. ಮನೆಯಲ್ಲಿ ಸಂತೋಷ ಮತ್ತು ಲವಲವಿಕೆ ಇಂದ ಇರಲು ಸಹಾಯ ಮಾಡುತ್ತದೆ. ಕುಟುಂಬ ಸದಸ್ಯರ ನಡುವೆ ಪ್ರೀತಿ ಮತ್ತು ಒಗ್ಗಟ್ಟು ಬೆಳೆಸುತ್ತದೆ ಎಂಬ ನಂಬಿಕೆ ಇದೆ. ಈ ಸಸ್ಯವನ್ನು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಬೆಳೆಸುವುದು ಉತ್ತಮ ಎಂದು ಸೂಚಿಸುತ್ತಾರೆ.

ದಾಸವಾಳ ಹೂವು:
ದಾಸವಾಳ ಹೂವಿನ ಸಸ್ಯವು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹೂವನ್ನು ಶುಭ ಸಂಕೇತವಾಗಿ ಪರಿಗಣಿಸಲಾಗುತ್ತದೆ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಉತ್ತಮ ವಾತಾವರಣವನ್ನು ಸೃಷ್ಟಿಸಲು ತುಂಬಾ ಸಹಾಯಕಾರಿ. ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಈ ಸಸ್ಯವನ್ನು ಬೆಳೆಸುವುದು ಸೂಕ್ತ ಎಂದು ತಜ್ಞರು ಸಲಹೆಯನ್ನು ನೀಡುತ್ತಾರೆ.
ಚಂಡು ಹೂ
ಚಂಡು ಹೂವುಗಳು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಎಂಬ ನಂಬಿಕೆ ಇದೆ. ನಮ್ಮ ಕುಟುಂಬದಲ್ಲಿ ಸಾಮರಸ್ಯವನ್ನು ಹೆಚ್ಚಿಸಲು ತುಂಬಾ ಸಹಾಯಕಾರಿ ಆಗಿದೆ. ಮುಖ್ಯವಾಗಿ ಮನೆಯ ಮುಖ್ಯ ಪ್ರವೇಶ ದ್ವಾರದ ಬಳಿ ಇವುಗಳನ್ನು ಬೆಳೆಸುವುದು ಶುಭಕರ. ಉತ್ತರ ದಿಕ್ಕಿನಲ್ಲಿ ಇಟ್ಟರೆ ಸಂಪತ್ತಿನ ಪ್ರವಾಹ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ಈ ಸಸ್ಯಗಳನ್ನು ನಮ್ಮ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಬೆಳೆಸುವುದರಿಂದ ಸಕಾರಾತ್ಮಕ ಶಕ್ತಿ, ಶಾಂತಿ ಮತ್ತು ಆರ್ಥಿಕ ಸುಧಾರಣೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಈ ವರದಿ ವಾಸ್ತು ನಂಬಿಕೆಗಳು ಮತ್ತು ಲಭ್ಯ ಮಾಹಿತಿಯನ್ನು ಆಧರಿಸಿದೆ. ವೈಜ್ಞಾನಿಕ ದೃಢೀಕರಣಕ್ಕೆ ಒಳಪಟ್ಟಿಲ್ಲ.












Click it and Unblock the Notifications