ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು
ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿಂತೆ ಅನೇಕರು ತಣ್ಣಿರೀನಲ್ಲಿ ಸ್ನಾನ ಮಾಡುವುದನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದರೆ. ಆದರೆ ತಣ್ಣೀರಿನ ಸ್ನಾನ ನಿಜವಾಗಿಯೂ ಆರೋಗ್ಯಕ್ಕರವೇ ಅಥವಾ ಬಿಸಿನೀರಿನ ಸ್ನಾನವೇ ಉತ್ತಮವೇ? ಎಂಬ ಗೊಂದಲ ಹಲವರಲ್ಲಿದೆ.
ತಜ್ಞರ ಪ್ರಕಾರ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹದಲ್ಲಿ ಯಾವಾಗಲೂ ತಾಜಾತನ ಇರುವಂತೆ ಮಾಡುತ್ತದೆ. ದಿನಪೂರ್ತಿ ಉಂಟಾಗುವ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕಾರಿ ಆಗಿದೆ. ಕೆಲವರಿಗೆ ತಣ್ಣೀರಿನ ಸ್ನಾನ ಉತ್ತಮ ನಿದ್ರೆಗೆ ಸಹ ನೆರವಾಗುತ್ತದೆ ಎಂದು ಹೇಳಲಾಗುತ್ತದೆ.

ತಣ್ಣೀರು ಸ್ನಾನವು ನಮ್ಮ ದೇಹದಲ್ಲಿನ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತಗೆ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಿ ಚರ್ಮದ ಆರೋಗ್ಯವನ್ನು ಕಾಪಾಡಲು ಸಹ ಉಪಯುಕ್ತವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ಇದು ನರಮಂಡಲವನ್ನು ಉತ್ತೇಜಿಸಿ ದೇಹದವನ್ನು ಆರೋಗ್ಯವಾಗಿ ಇಡಲು ಸಹಕಾರಿಯಾಗಿದೆ.
ಆದರೆ ಎಲ್ಲರಿಗೂ ತಣ್ಣೀರಿನ ಸ್ನಾನ ಒಳ್ಳೆಯದಲ್ಲ ಎಂಬುದನ್ನು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಶೀತ, ಕೆಮ್ಮು ಅಥವಾ ತಲೆನೋವು ಸಮಸ್ಯೆ ಇರುವವರು ತಣ್ಣೀರಿನಲ್ಲಿ ಸ್ನಾನ ಮಾಡುವಾಗ ಜಾಗರೂಕರಾಗಿ ಇರುವುದು ಒಳ್ಳೆಯದು. ಹೃದಯ ಸಂಬಂಧಿತ ಸಮಸ್ಯೆಗಳಿರುವವರು ತಣ್ಣೀರಿನ ಸ್ನಾನವನ್ನು ತಪ್ಪಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಇನ್ನೂ ರಾತ್ರಿ ವೇಳೆಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ಕೆಲವರಿಗೆ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ದೇಹದ ಸ್ಥಿತಿಗೆ ಅನುಗುಣವಾಗಿ ಸ್ನಾನದ ವಿಧಾನವನ್ನು ಆಯ್ಕೆ ಮಾಡುವುದು ಮುಖ್ಯ.
ಇನ್ನಷ್ಟು ಗಮನಿಸಬೇಕಾದ ವಿಷಯವೇನೆಂದರೆ, ತಣ್ಣೀರಿನ ಸ್ನಾನವನ್ನು ನಿಧಾನವಾಗಿ ಅಭ್ಯಾಸ ಮಾಡುವುದು ಉತ್ತಮ. ತಕ್ಷಣವೇ ತುಂಬಾ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ಶಾಕ್ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮೊದಲಿಗೆ ಸ್ವಲ್ಪ ತಣ್ಣೀರಿನಿಂದ ಆರಂಭಿಸಿ ನಂತರ ದೇಹವನ್ನು ಹೊಂದಿಕೊಳ್ಳುವಂತೆ ಮಾಡುವುದು ಸೂಕ್ತ.
ಹಾಗೆಯೇ ವ್ಯಾಯಾಮದ ನಂತರ ಅಥವಾ ದೇಹ ತುಂಬಾ ಬಿಸಿ ಆಗಿರುವಾಗ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡುವುದು ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ದೇಹದ ಉಷ್ಣತೆ ಸ್ವಲ್ಪ ಕಡಿಮೆಯಾದ ನಂತರ ಸ್ನಾನ ಮಾಡುವುದರಿಂದ ಆರೋಗ್ಯ ಸಮಸ್ಯೆಗಳ ಕಡಿಮೆಯಾಗುತ್ತವೆ.
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನವು ತಂಪು ಮತ್ತು ಆರಾಮ ನೀಡುವ ಉತ್ತಮ ಆಯ್ಕೆಯಾಗಿದ್ದರೂ, ವೈಯಕ್ತಿಕ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಅನುಸರಿಸುವುದು ಅಗತ್ಯ. ಈ ವರದಿ ವೈದ್ಯಕೀಯ ಸಲಹೆಗಳು ಮತ್ತು ಲಭ್ಯ ಮಾಹಿತಿಯನ್ನು ಆಧರಿಸಿದೆ. ನೀಡಿರುವ ಮಾಹಿತಿ ಸಾಮಾನ್ಯ ಅರಿವುಗಾಗಿ ಮಾತ್ರ; ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞ ವೈದ್ಯರ ಸಲಹೆ ಪಡೆಯುವುದು ಒಳಿತು.












Click it and Unblock the Notifications