2023ರಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಮಹಿಳಾ ಪೈಲೆಟ್‌ಗಳಿಗೆ ಲೈಸನ್ಸ್ ನೀಡಿದ ಭಾರತ, ಅಂಕಿಅಂಶಗಳ ವಿವರ ತಿಳಿಯಿರಿ
ನವದೆಹಲಿ, ಜನವರಿ, 01: ನಾಗರೀಕ ವಿಮಾನಯಾನ ಮಹಾ ನಿರ್ದೇಶನಾಲಯವು ಆಗಾಗ ವಿಮಾನದಲ್ಲಿ ಇಂತಹ ವರ್ಷದಲ್ಲಿ ಇಷ್ಟು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ 2023ರಲ್ಲಿ 1,622 ಮಂದಿಗೆ ಪೈಲಟ್ ಪರವಾನಗಿ ನೀಡಿದ್ದು, ಇದು ದಶಕದಲ್ಲೇ ಅತ್ಯಧಿಕ ಸಂಖ್ಯೆ ಆಗಿದೆ. ಅಲ್ಲದೆ ಮಹಿಳಾ ಪೈಲಟ್‌ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಎನ್ನುವ ಮಾಹಿತಿಯನ್ನು ನೀಡಿದೆ.
ಈ ಕುರಿತು ಹೇಳಿಕೆ ಮಾಹಿತಿ ನೀಡಿದ ಡಿಜಿಸಿಎಯು, 2022ರಲ್ಲಿ 1,165 ಪರವಾನಗಿಯನ್ನು ಡಿಜಿಸಿಎ ವಿತರಿಸಿತ್ತು. ವರ್ಷದಿಂದ ವರ್ಷಕ್ಕೆ ಪರವಾನಗಿ ನೀಡುವ ಸಂಖ್ಯೆ ಶೇಕಡಾ 39ರಷ್ಟು ಏರಿಕೆ ಆಗಿದೆ. ಇದರಲ್ಲಿ ಮಹಿಳೆಯರ ಸಂಖ್ಯೆ ಶೇಕಡಾ 22.5ರಷ್ಟು ಎಂದು ತಿಳಿಸಿದೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳೆಯರು ಪೈಲಟ್ ಪರವಾನಗಿ ಪಡೆಯುವುತ್ತಿರುವುದು ಭಾರತದಲ್ಲೇ ಅಂತಾ ಹೇಳಿದೆ.

ನಾಗರಿಕ ವಿಮಾನ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಯೇ ಈ ಸಂಖ್ಯೆ ಏರಿಕೆಯಾಗಲು ಕಾರಣ ಆಗಿದೆ. ಸದ್ಯ ವಿಮಾನಯಾನ ಕ್ಷೇತ್ರದಲ್ಲಿ ಮಹಿಳಾ ಪೈಲಟ್‌ಗಳ ಒಟ್ಟು ಸಂಖ್ಯೆ ಶೇಕಡಾ 14ರಷ್ಟಿದೆ ಎಂದು ತಿಳಿಸಿದೆ.
ಇನ್ನು ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ವಾಯುಯಾನ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಏರ್ ಇಂಡಿಯಾ ಹಾಗೂ ಇಂಡಿಗೊ ಕಂಪನಿಗಳು ಹೆಚ್ಚಿನ ವಿಮಾನಗಳ ಖರೀದಿಗೆ ಮುಂದಾಗಿವೆ. ಅಲ್ಲದೆ ಚಿಕ್ಕ ವಿಮಾನಯಾನ ಕಂಪನಿಗಳೂ ಹೊಸ ಚಾರ್ಟರ್ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಖರೀದಿ ಮಾಡಲು ಮುಂದಾಗಿದ್ದು, ನಾಗರೀಕ ವಿಮಾನಯಾನ ನಿರ್ದೇಶನಾಲಯವು ಇವುಗಳಿಗೆ ಅನಮತಿ ನೀಡಿದೆ. ಹೆಲಿಕಾಪ್ಟರ್ ಹಾರಾಟ ತರಬೇತಿಗೆ ಹೊಸ ಕೇಂದ್ರಗಳಿಗೂ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದೆ.
ಜೊತೆಗೆ ಹೆಲಿಕಾಪ್ಟರ್‌ಗಳ ಬಳಕೆ ತೀರ್ಥಕ್ಷೇತ್ರಗಳ ಯಾತ್ರೆ, ಏರ್ ಅಂಬುಲೆನ್ಸ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹೆಚ್ಚಾಗಲಿದೆ. ಸೇನೆಯ ಮಾಜಿ ಪೈಲಟ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಪೈಲಟ್‌ಗಳ ನೇಮಕ ಈ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಿದಂತಾಗಿದೆ ಎಂದು ತಿಳಿಸಿದೆ.












Click it and Unblock the Notifications