ಭಾರತದಲ್ಲಿ 4000 ಮುಟ್ಟಿದ ಕೊರೊನಾ ಸೋಂಕಿತರ ಸಂಖ್ಯೆ, 109 ಸಾವು

ದೆಹಲಿ, ಏಪ್ರಿಲ್ 6: ಭಾರತದಲ್ಲಿ ನೋಡು ನೋಡುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ 4000 ಗಡಿದಾಟಿದೆ. ಕಳೆದ 12 ಗಂಟೆಗಳಲ್ಲಿ 490 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4067ಕ್ಕೆ ಏರಿದೆ.

ಇದುವರೆಗೂ ಭಾರತದಲ್ಲಿ ಕೊವಿಡ್ ಸೋಂಕಿನಿಂದ 109 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾವಿನಲ್ಲಿ ಶತಕ ದಾಟಿದ ಮಹಾಮಾರಿ ಕೊರೊನಾ ವೈರಸ್.

ಒಟ್ಟು 4067 ಸೋಂಕಿತರ ಪೈಕಿ 3666 ಜನರು ಇನ್ನು ಕ್ವಾರೆಂಟೈನ್ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 292 ಜನರು ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಂದ್ಹಾಗೆ, ಮಾರ್ಚ್ 31ನೇ ತಾರೀಖಿನವರೆಗೂ ದೇಶದಲ್ಲಿ ಕೊರೊನಾ ಹರಡುವಿಕೆ ಒಂದು ಹಂತಕ್ಕೆ ನಿಯಂತ್ರಣದಲ್ಲಿತ್ತು. ಆದರೆ, ದೆಹಲಿಯ ನಿಜಾಮುದ್ದೀನ್‌ನ ನಗರದಲ್ಲಿ ನಡೆದ ತಬ್ಲೀಘ್ ಧಾರ್ಮಿಕ ಸಭೆಯಲ್ಲಿ ವಿದೇಶಿಗರು ಸೇರಿದ ಭಾರತದ ಹಲವು ರಾಜ್ಯಗಳಿಂದ ಸಾವಿರಾರು ಜನರು ಒಟ್ಟಿಗೆ ಸೇರಿದ್ದರು.

 India Corona Positive Cases Cross 4000 Mark

ಇಲ್ಲಿಂದ ಕೊರೊನಾ ವೈರಸ್‌ ದೇಶದಲ್ಲಿ ಇನ್ನೊಂದು ಹಂತಕ್ಕೆ ಹರಡಿತು. ನೋಡು ನೋಡುತ್ತಿದ್ದಂತೆ ಸಾವಿರದ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಕೇವಲ ಐದು ದಿನದಲ್ಲಿ ಸುಮಾರು ಮೂರು ಸಾವಿರ ಏರಿಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 500 ದಾಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+