ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಂಗಾಂಗ್ ತ್ಸೋದಿಂದ ಭಾರತ-ಚೀನಾ ಸೇನಾಪಡೆಗಳು ವಾಪಸ್

|
Google Oneindia Kannada News

ನವದೆಹಲಿ, ಫೆಬ್ರವರಿ 10: ಪ್ಯಾಂಗಾಂಗ್ ತ್ಸೊ ಸರೋವರದ ವಿವಾದಾತ್ಮಕ ಬೆಟ್ಟ ಪ್ರದೇಶದಿಂದ ಚೀನಾ ಹಾಗೂ ಭಾರತೀಯ ಸೇನೆಗಳು ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ಉಭಯ ದೇಶಗಳ ಸೇನಾ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ವೇಳೆ ಎರಡೂ ಸೇನೆಗಳು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಹಮತಕ್ಕೆ ಬಂದಿವೆ.

ಚೀನಾದ ರಾಷ್ಟ್ರೀಯ ರಕ್ಷಣೆ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ವು ಖಿಯಾನ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಎರಡೂ ಕಡೆಗಳ ಮುಂಚೂಣಿ ಪಡೆಗಳು ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ಮತ್ತು ಉತ್ತರ ತೀರಗಳಿಂದ ವ್ಯವಸ್ಥಿತ ಮತ್ತು ಸಂಘಟನಾತ್ಮಕವಾಗಿ ವಾಪಸಾಗಲಿವೆ ಎಂದು ತಿಳಿಸಿದ್ದಾರೆ.

ಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್‌ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್‌ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿ

ಪ್ಯಾಂಗಾಂಗ್ ಸರೋವರವು ಭಾರತ ಮತ್ತು ಚೀನಾ ನಡುವೆ 9 ತಿಂಗಳಿನಿಂದ ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟಿನ ಪ್ರಮುಖ ಕೇಂದ್ರವಾಗಿದೆ. ಉಭಯ ದೇಶಗಳ ಸೇನೆಯ ಕಮಾಂಡರ್ ಮಟ್ಟದ ಸಭೆಯು ಕೆಲವು ದಿನಗಳಿಂದ ನಡೆಯುತ್ತಿತ್ತು. ಇಂದು ಕೊನೆಗೂ ಪಡೆಗಳನ್ನು ಹಿಂದಕ್ಕೆ ಕರೆಸುವ ಪ್ರಸ್ತಾವನೆಗೆ ಒಪ್ಪಿಕೊಂಡವು.

 India-China Begin Disengagement At Pangong Tso Lake

'ಈ ಪ್ರಸ್ತಾಪ ಜಾರಿಯಾದ ಬಳಿಕ ಚೀನಾ ಫಿಂಗರ್ 8 ಪರ್ವತದ ಪ್ರದೇಶಕ್ಕೆ ಮರಳಲಿದೆ. ಹಾಗೆಯೇ ಭಾರತವು ಫಿಂಗರ್ 2 ಮತ್ತು 3ರ ನಡುವಿನ ಧಾನ್ ಸಿಂಗ್ ಥಾಪಾ ಪೋಸ್ಟ್ ನಡುವಿನ ಜಾಗಕ್ಕೆ ವಾಪಸಾಗಲಿದೆ. ಉಭಯ ದೇಶಗಳಿಂದಲೂ ಫಿಂಗರ್ 4ರವರೆಗೆ ಯಾವುದೇ ಗಸ್ತು ನಡೆಯುವುದಿಲ್ಲ. ಇದನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ' ಎಂದು ಮೂಲಗಳು ತಿಳಿಸಿವೆ.

English summary
India and Chinese troops began disengagement from Finger 8 area of Pangong Tso lake after 9th round of commander level talks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X