• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುದ್ಧ ತಯಾರಿ: ಅಮೆರಿಕದಿಂದ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಭಾರತ ಸಿದ್ಧತೆ

|

ನವದೆಹಲಿ, ಅಕ್ಟೋಬರ್ 19: ಚೀನಾ ಗಡಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಿಂದ ಕೆಲವು ಯುದ್ಧೋಪಕರಣಗಳನ್ನು ತುರ್ತು ಖರೀದಿಸಲು ಭಾರತ ಮುಂದಾಗಿದೆ.

ಲಡಾಖ್ ಗಡಿಯಲ್ಲಿ ದಿನದಿಂದ ದಿನಕ್ಕೆ ಯುದ್ಧೋನ್ಮಾದ ಹೆಚ್ಚುತ್ತಿದೆ, ಚೀನಾದೊಂದಿಗಿನ ಮಾತುಕತೆ ಯಶಸ್ಸು ಕಾಣುತ್ತಿಲ್ಲ. ಚಳಿಗಾಲದಲ್ಲಿ ಚೀನಾ ಆಕ್ರಮಣ ಮಾಡುವ ಸಾಧ್ಯತೆ ಇದೆ ಎನ್ನುವ ವರದಿಗಳೂ ಕೇಳಿಬರುತ್ತಿವೆ.

ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ!

ಹೀಗಾಗಿ ಭಾರತೀಯ ಸೇನೆಗೆ ಅಗತ್ಯವಿರುವ ಕೆಲ ಯುದ್ಧೋಪಕರಣಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಎತ್ತರದ ಪ್ರದೇಶಗಳಿಂದ ಯುದ್ಧ ಎದುರಿಸಲು ಬೇಕಾಗುವ ಶಸ್ತ್ರಾಸ್ತ್ರ ಉಪಕರಣ ಅಗತ್ಯ ಭಾರತಕ್ಕೆ ಹೆಚ್ಚಿದೆ. ಹೀಗಾಗಿ ತುತ್ರ್ತಾಗಿ ಖರೀದಿಸುವ ಅಗತ್ಯವಿದೆ ಎಂದು ಭಾರತ ನಿರ್ಧರಿಸಿದೆ.

2016ರಲ್ಲೇ ಅಮೆರಿಕದೊಂದಿಗೆ ಭಾರತ ಈ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ತುರ್ತು ಸಂದರ್ಭದಲ್ಲಿ ಉಭಯ ದೇಶಗಳು ಯುದ್ಧ ತಯಾರಿ ಅಥವಾ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿ ಪರಸ್ಪರ ನೆರವು ನೀಡಬೇಕು ಎಂಬುದು ಒಪ್ಪಂದದ ಭಾಗವಾಗಿತ್ತು.

ಈ ಹಿಂದೆ ಭಾರತವು ಈ ಸಂಬಂಧ ಶಸ್ತ್ರಾಸ್ತ್ರಗಳನ್ನು ಯುರೋಪ್ ಹಾಗೂ ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು.

ಭಾರತ ಮತ್ತು ಚೀನಾ ಮಧ್ಯೆ 8ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಈ ವಾರ ಏರ್ಪಡುವ ಸಾಧ್ಯತೆಯಿದ್ದು ಪೂರ್ವ ಲಡಾಕ್ ನಲ್ಲಿ ಎರಡೂ ದೇಶಗಳ ಸೇನೆ ಹಿಂಪಡೆಯುವ ಕುರಿತು ಮಾತುಕತೆ ಮುಂದುವರಿಸುವ ಸಾಧ್ಯತೆಯಿದೆ.

ಇನ್ನೊಂದು ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತಿದ್ದು ಈ ಸಮಯದಲ್ಲಿ ಸೇನೆ ನಿಯೋಜನೆ ಕಷ್ಟವಾಗುವುದರಿಂದ ಹಿಂಪಡೆಯುವುದು ಸೂಕ್ತ ಎಂಬ ಒಪ್ಪಂದಕ್ಕೆ ಬರುವ ಸಾಧ್ಯತೆಯಿದೆ. ಕಳೆದ ಅಕ್ಟೋಬರ್ 12ರಂದು ನಡೆದಿದ್ದ ಏಳನೇ ಸುತ್ತಿನ ಮಾತುಕತೆಯಲ್ಲಿ ಯಾವುದೇ ಫಲಪ್ರದ ಕಾಣಲಿಲ್ಲ.

ಮಾತುಕತೆ ಮುಗಿದ ನಂತರ ರಚನಾತ್ಮಕವಾಗಿ ಧನಾತ್ಮಕವಾಗಿ ಮುಗಿಯಿತು ಎಂದಷ್ಟೇ ಸೇನಾ ಮೂಲಗಳು ತಿಳಿಸಿದ್ದು, ಏನು ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಲಿಲ್ಲ.

ಕಳೆದ ಬಾರಿ ಮಾತುಕತೆ ಮುಗಿದ ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ ಭಾರತ ಮತ್ತು ಚೀನಾ ಸೇನೆ, ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ, ಸಂವಹನ ನಡೆಸಲು ಎರಡೂ ದೇಶಗಳು ಒಪ್ಪಿಗೆ ನೀಡಿದ್ದು, ಸೇನೆ ಹಿಂಪಡೆಯಲು ಪರಸ್ಪರ ಸಹಮತಿಯ ಪರಿಹಾರವನ್ನು ಆದಷ್ಟು ಶೀಘ್ರ ಕಂಡುಹಿಡಿಯಲು ಒಪ್ಪಿಗೆ ನೀಡಲಾಯಿತು ಎಂದು ಹೇಳಿದೆ.

8ನೇ ಸುತ್ತಿನ ಮಾತುಕತೆ ಈ ವಾರ ನಡೆಯುವ ಸಾಧ್ಯತೆಯಿದ್ದು ಇನ್ನೂ ದಿನಾಂಕ ನಿಗದಿಯಾಗಿಲ್ಲ.

English summary
India has bought high altitude warfare kits from the U.S. on an urgent basis, officials with the knowledge of the matter said, a sign that the country is preparing for an extended winter deployment after talks to ease tensions along its border with China stalled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X