3 ಕೊರೊನಾ ಲಸಿಕೆಗಳ ಬೆಲೆ ಏನು?: ಸಂಶೋಧನಾ ಕಂಪನಿಗಳಿಗೆ ಭಾರತದ ಪ್ರಶ್ನೆ
ನವದೆಹಲಿ, ಆಗಸ್ಟ್ 19: ಭಾರತದಲ್ಲಿ ಮೂರು ಕೊರೊನಾ ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಇದರ ಬೆಲೆಯನ್ನು ತಿಳಿಸುವಂತೆ ಲಸಿಕೆಯ ಸಂಶೋಧಕರಿಗೆ ಭಾರತ ಕೇಳಿದೆ.
Recommended Video
ಮೂರು ಲಸಿಕೆಗಳು ಮಾನವ ಪ್ರಯೋಗಗಳಿಗೆ ಒಳಗಾಗುತ್ತಿದೆ. ಈ ಲಸಿಕೆಗಳು ಸಾರ್ವಜನಿಕರಿಗೆ ದೊರೆಯುವಂತಾಗಬೇಕು, ಲಸಿಕೆಯ ಬೆಲೆಯ ಅಂದಾಜನ್ನು ಬಹಿರಂಗಪಡಿಸುವಂತೆ ಭಾರತ ಕೇಳಿಕೊಂಡಿದೆ.
ಈಗಾಗಲೇ ಆಸ್ಟ್ರೇಲಿಯಾದ ಅಸ್ಟ್ರಾಜೆನೆಕಾ ಲಸಿಕೆಯು ಅಂತಿಮ ಪ್ರಯೋಗದಲ್ಲಿದೆ. ಉತ್ತಮ ಫಲಿತಾಂಶ ಬಂದರೆ ಆಸ್ಟ್ರೇಲಿಯಾ ಜನತೆಗೆ ಉಚಿತವಾಗಿ ನೀಡುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ.
ಭಾರತವು ಕೂಡ ಇಂತಹುದ್ದೇ ಹೆಜ್ಜೆಯನ್ನು ಮುಂದಿಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಎರಡು ಕಂಪನಿಗಳು ಎರಡು ಹಂತದಲ್ಲಿ ಪ್ರಯೋಗ ನಡೆಸುತ್ತಿದೆ
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಅಹಮದಾಬಾದ್ ಮೂಲದ ಜೈಡಸ್ ಕಂಪನಿಯು ಒಂದು ಮತ್ತು ಎರಡನೇ ಹಂತದ ಮಾನವ ಪ್ರಯೋಗಗಳನ್ನು ನಡೆಸುತ್ತಿದೆ. ಮೂರನೇ ಕ್ಯಾಂಡಿಟೇಟ್ ಅಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ಯೂನಿವರ್ಸಿಟಿ ಭಾರತದಲ್ಲಿ ಮಾನವನ ಮೇಲೆ ಪ್ರಯೋಗ ನಡೆಸಲು ಅನುಮತಿ ಪಡೆದುಕೊಂಡಿವೆ.

ಮೂರು ಲಸಿಕೆಗಳ ಪ್ರಯೋಗ
ಮೂರು ಲಸಿಕೆಗಳು ಭಾರತದಲ್ಲಿ ಸಿದ್ಧಗೊಳ್ಳುತ್ತಿವೆ. ಇದನ್ನು ಪ್ರತಿ ನಿತ್ಯ ಟ್ರ್ಯಾಕ್ ಮಾಡಲಾಗುತ್ತಿದೆ. ಕೆಲವು ಲಸಿಕೆಗಳ ದರವನ್ನು ಹೇಳುವುದು ಕಷ್ಟವಾಗುತ್ತದೆ ಏಕೆಂದರೆ ಅವುಗಳು ಆರಂಭಿಕ ಹಂತದಲ್ಲಿವೆ ಎಂದು ನೀತಿ ಆಯೋಗ ಹೇಳಿದೆ. ಆದರೆ ನಾವು ಅಂದಾಜನ್ನು ಮಾತ್ರ ಕೇಳಿದ್ದೇವೆ ಎಂದು ಹೇಳಿದ್ದಾರೆ.

ಸೀರಮ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ದರ ಎಷ್ಟು?
ಸೀರಮ್ ಇನ್‌ಸ್ಟಿಟ್ಯೂಟ್ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಷನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಂದು ಡೋಸ್‌ಗೆ 240 ರೂನಂತೆ ವೆಚ್ಚವಾಗಲಿದೆ. ಅನುಮತಿ ದೊರೆತ ಬಳಿಕ ಕಡಿಮೆ ಆದಾಯ ಇರುವ ದೇಶಗಳಿಗೆ 100 ಮಿಲಿಯನ್ ಅಷ್ಟು ಲಸಿಕೆಯನ್ನು ಸರಬರಾಜು ಮಾಡುವ ಭರವಸೆಯನ್ನು ನೀಡಿದೆ.

ಆಸ್ಟ್ರೇಲಿಯಾ ಹಾಗೂ ರಷ್ಯಾದಲ್ಲಿ ನಾಗರಿಕರಿಗೆ ಉಚಿತ ಲಸಿಕೆ
ಆಸ್ಟ್ರೇಲಿಯಾ ಹಾಗೂ ರಷ್ಯಾದಲ್ಲಿ ನಾಗರಿಕರಿಗೆ ಕೊರೊನಾ ಲಸಿಕೆಯನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ವಿಶ್ವದ ಮೊದಲ ಕೊರೊನಾ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಕೂಡ ಲಸಿಕೆ ಅಭಿವೃದ್ಧಿಗೊಳ್ಳುತ್ತಿದೆ. ಈ ಎರಡೂ ದೇಶಗಳಲ್ಲೂ ಜನತೆಗೆ ಉಚಿತವಾಗಿ ಲಸಿಕೆ ವಿತರಿಸಲಾಗುತ್ತದೆ.












Click it and Unblock the Notifications