India Vs Pakistan: ಭಾರತದ ಸೇನಾ ಶಕ್ತಿ ಎದುರು ಪಾಕಿಸ್ತಾನ ಉಡೀಸ್, ಹೀಗಿದೆ ಲೆಕ್ಕಾಚಾರ!
ಭಾರತ & ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಮುನ್ಸೂಚನೆ ಸಿಗುತ್ತಿದ್ದು, ಎರಡೂ ಕಡೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಕಾಶ್ಮೀರದ ಗಡಿಯಲ್ಲಿ ಭಾರತ & ಪಾಕಿಸ್ತಾನದ ಸೈನಿಕರ ನಡುವೆ ಗುಂಡಿನ ಚಕಮಕಿ ಕೂಡ ಶುರುವಾಗಿದ್ದು, ಪರಿಸ್ಥಿತಿ ಸೂಕ್ಷ್ಮವಾಗಿದೆ. ಇದೇ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಕೂಡ ಆತಂಕ ಶುರುವಾಗಿದ್ದು, ಭಾರತ Vs ಪಾಕಿಸ್ತಾನ ವಾರ್ ಶುರು ಮಾಡಿದರೆ ಭವಿಷ್ಯದಲ್ಲಿ ಭಯಾನಕ ಪರಿಸ್ಥಿತಿ ಗ್ಯಾರಂಟಿ ಆಗಿದೆ. ಅದರಲ್ಲೂ ನಮ್ಮ ಭಾರತದ ಸೇನೆ ಎದುರು ಪಾಕಿಸ್ತಾನ ಪುಡಿ ಪುಡಿ ಆಗುವುದು ಗ್ಯಾರಂಟಿ ಆಗಿದೆ.
ಭಾರತೀಯ ಸೇನೆಗೆ ಪ್ರಪಂಚದ ಪ್ರತಿಯೊಂದು ದೇಶವೂ ಗೌರವ ನೀಡುತ್ತದೆ, ಯಾಕೆ ಅಂದ್ರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಸಮಸ್ಯೆ ಶುರುವಾಗಿ ತೊಂದರೆ ಎದುರಾದರೂ ಭಾರತದ ಸೇನೆ ಮೊದಲು ಅಲ್ಲಿಗೆ ಎಂಟ್ರಿ ಕೊಡುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಸೇನೆ ಅತಿ ದೊಡ್ಡ ಗೌರವ ಪಡೆದುಕೊಂಡಿದ್ದು, 4ನೇ ರ‍್ಯಾಂಕ್ ಪಡೆದಿರುವ ಭಾರತದ ಮಿಲಿಟರಿ ಎದುರು 12ನೇ ಸ್ಥಾನದಲ್ಲಿ ಇರುವ ಪಾಕಿಸ್ತಾನ ಏನಕ್ಕೂ ಇಲ್ಲ. ಹೀಗಿದ್ದರೂ ಕಾಲು ಕೆರೆದುಕೊಂಡು ಯುದ್ಧಕ್ಕೆ ಮುಂದಾಗಿರುವ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಲು ಭಾರತ ಸನ್ನದ್ಧವಾಗಿದೆ.

ಭಾರತ Vs ಪಾಕಿಸ್ತಾನ ಯುದ್ಧ ಫಿಕ್ಸ್?
ಪ್ರಪಂಚದ ಮೂಲೆ ಮೂಲೆಯಲ್ಲೂ ಯುದ್ಧದ ಹಾವಳಿ ಶುರುವಾಗಿದೆ, ಈಗಾಗಲೇ ಜಗತ್ತಿನಲ್ಲಿ 2 ಬಹುದೊಡ್ಡ ಯುದ್ಧಗಳು ನಡೆಯುತ್ತಿವೆ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ಭರ್ಜರಿ 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಇನ್ನೊಂದು ಕಡೆ ಇಸ್ರೇಲ್ & ಗಾಜಾ ಪಟ್ಟಿ ನಡುವೆಯೂ ರಣಭೀಕರ ಕಾಳಗ ನಡೆಯುತ್ತಿದೆ. ಇಂತಹ ಸಮಯದಲ್ಲೇ ಭಾರತ & ಪಾಕಿಸ್ತಾನದ ನಡುವೆ ಕೂಡ ಯುದ್ಧ ಶುರುವಾದರೆ ಪರಿಸ್ಥಿತಿ ಹೇಗೆ ಇರಬೇಡ? ಭಾರತ & ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತೀಯ ಸೇನೆ ಹೇಗೆಲ್ಲಾ ಅಟ್ಟಾಡಿಸಿಕೊಂಡು ಬಡಿಯಬೇಡ? ಆ ಹಿನ್ನೆಲೆಯಲ್ಲಿ ಭಾರತದ ಬಳಿ ಯಾವೆಲ್ಲಾ ಅಸ್ತ್ರಗಳು ಇವೆ?












Click it and Unblock the Notifications