ದುರ್ಗಾ ಮಾತೆ ಪೂಜಿಸಿದ ದೇಶದ ಪ್ರಥಮ ಪ್ರಜೆ

ಕೋಲ್ಕತ್ತಾ, ಅ.2: 'ಪ್ರತಿಯೊಬ್ಬ ಮಹಿಳೆಯೂ ಶಕ್ತಿ ಸ್ವರೂಪಳಾಗಿದ್ದಾಳೆ. ಅಂತಃಶಕ್ತಿಯನ್ನು ಪ್ರಕಟಗೊಳಿಸಿ ದುಷ್ಟಶಕ್ತಿಯ ವಿರುದ್ಧ ಹೋರಾಟ ಮಾಡಲು ಸ್ವಸಮರ್ಥಳು ಎಂಬ ಆಶಯದೊಂದಿಗೆ ನವರಾತ್ರಿಯ ದುರ್ಗಾಪೂಜೆ ಪಶ್ಚಿಮ ಬಂಗಾಳದಲ್ಲಿ ಸಾಂಗವಾಗಿ ನಡೆದಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಂದಿನಂತೆ ತಮ್ಮ ಸ್ವಗ್ರಾಮಕ್ಕೆ ತೆರಳಿ ದುರ್ಗಾ ಮಾತೆಯನ್ನು ಪೂಜಿಸಿದ್ದಾರೆ.

ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಒಂಭತ್ತು ರೂಪದಲ್ಲಿ ಶಕ್ತಿ ಸ್ವರೂಪಳಾದ ದೇವಿಯನ್ನು ಆರಾಧಿಸಲಾಗುತ್ತದೆ. ಕೋಲ್ಕತ್ತಾದಲ್ಲಿ ವಿಧವೆಯರಿಂದಲೂ ದುರ್ಗಾ ಪೂಜೆ ನಡೆಯುತ್ತದೆ.

ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ನಂತರ ಮುಂಬೈನಲ್ಲಿ ಕೋಲ್ಕತ್ತಾದಂತೆ ಬೃಹತ್ ಆಕಾರದ ದುರ್ಗಾ ಮಾತೆಯ ಮೂರ್ತಿಗಳನ್ನು ಪೆಂಡಾಲ್ ಗಳಲ್ಲಿ ಸ್ಥಾಪಿಸಿ ಹಬ್ಬದ ಆಚರಣೆ ಸಂಭ್ರಮ ಕಾಣಲಾಗುತ್ತದೆ. [ಮೈಸೂರು ದಸರಾ ಉತ್ಸವ 2014]

ಬಿರ್ಬಮ್ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ದುರ್ಗಾ ಪೂಜೆ ವಿಶೇಷವಾಗಿ ಆಚರಿಸಲಾಗುತ್ತದೆ. ಸಾಂಸ್ಖೃತಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಕರ ಕುಶಲ ಕಲೆಗಳ ಪರಿಚಯ ಕೂಡಾ ಪ್ರವಾಸಿಗರಿಗೆ ಸಿಗುತ್ತದೆ. ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೆ ಅಣಿಯಾದ ಬಾಲಿವುಡ್ ಬೆಡಗಿಯರ ಚಿತ್ರಗಳು ಸೇರಿದಂತೆ ಸಾರ್ವಜನಿಕ ಪೆಂಡಾಲ್ ಗಳ ದುರ್ಗಾ ಪೂಜೆಯ ಚಿತ್ರಗಳ ಸಂಪುಟ ಇಲ್ಲಿದೆ

ಅಣ್ಣನ ಜೊತೆಗೂಡಿ ದುರ್ಗೆಗೆ ನಮಿಸಿದ ಪ್ರಣಬ್

ಅಣ್ಣನ ಜೊತೆಗೂಡಿ ದುರ್ಗೆಗೆ ನಮಿಸಿದ ಪ್ರಣಬ್

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಕ್ಕ ಅನ್ನಪೂರ್ಣ ಬಂಡೋಪಧ್ಯಾಯ್ ಹಾಗೂ ಅಣ್ಣ ಪಿಜೂಶ್ ಮುಖ್ಯೋಪಾಧ್ಯಾಯ್ ಅವರ ಜೊತೆಗೂಡಿ ಪೂರ್ವಿಕ ಗ್ರಾಮ ಬಿರ್ಬಮ್ ನ ಮಿರಾಟಿಯಲ್ಲಿ ದುರ್ಗಾ ಪೂಜೆ ಮಾಡಿದರು. ಚಿತ್ರಕೃಪೆ: ಪಿಟಿಐ

ಬಾಲಿವುಡ್ ತಾರೆ ಬಿಪಾಶಾ ಬಸು

ಬಾಲಿವುಡ್ ತಾರೆ ಬಿಪಾಶಾ ಬಸು

ಸಾಂಪ್ರದಾಯಿಕ ಶೈಲಿ ಉಡುಗೆಯಲ್ಲಿ ಬಾಲಿವುಡ್ ತಾರೆ ಬಿಪಾಶಾ ಬಸು.

ಬಾಲಿವುಡ್ ತಾರೆ ಕಾಜೋಲ್

ಬಾಲಿವುಡ್ ತಾರೆ ಕಾಜೋಲ್

ಸಾಂಪ್ರದಾಯಿಕ ಶೈಲಿ ಉಡುಗೆ ತೊಟ್ಟು ದುರ್ಗಾ ಪೂಜೆ ನಿರತ ಬಾಲಿವುಡ್ ತಾರೆ ಕಾಜೋಲ್

ಬಾಲಿವುಡ್ ತಾರೆ ರಾಣಿ ಮುಖರ್ಜಿ

ಬಾಲಿವುಡ್ ತಾರೆ ರಾಣಿ ಮುಖರ್ಜಿ

ದುರ್ಗಾ ಪೂಜೆ ನಿರತ ನಟಿ ರಾಣಿ ಮುಖರ್ಜಿ

ಮಾಜಿ ಭುವನ ಸುಂದರಿ ಸುಷ್ಮಿತಾಸೇನ್

ಮಾಜಿ ಭುವನ ಸುಂದರಿ ಸುಷ್ಮಿತಾಸೇನ್

ಮಾಜಿ ಭುವನ ಸುಂದರಿ ಸುಷ್ಮಿತಾಸೇನ್ ದುರ್ಗಾ ಪೂಜೆ ಸಂದರ್ಭದಲ್ಲಿ

ಸೆಲಿನಾ ಜೇಟ್ಲಿ ಬೆಂಗಾಳಿ ಉಡುಗೆಯಲ್ಲಿ

ಸೆಲಿನಾ ಜೇಟ್ಲಿ ಬೆಂಗಾಳಿ ಉಡುಗೆಯಲ್ಲಿ

ಬೆಂಗಾಳಿ ಉಡುಗೆಯಲ್ಲಿ ಪೂಜೆಗೆ ಅಣಿಯಾಗಿರುವ ಸೆಲಿನಾ ಜೇಟ್ಲಿ

ನಟಿ ಶ್ರೀದೇವಿ ಕಪೂರ್

ನಟಿ ಶ್ರೀದೇವಿ ಕಪೂರ್

ದುರ್ಗಾ ಪೂಜೆಗೆ ಬಂದಿದ್ದ ನಟಿ ಶ್ರೀದೇವಿ ಕಪೂರ್ ಅವರ ಸಂಗ್ರಹಿತ ಚಿತ್ರ

ಬೆಂಗಾಳಿ ದಿರಿಸಿನಲ್ಲಿ ಕರೀನಾ

ಬೆಂಗಾಳಿ ದಿರಿಸಿನಲ್ಲಿ ಕರೀನಾ

ಬೆಂಗಾಳಿ ದಿರಿಸಿನಲ್ಲಿ ಕರೀನಾ ಕಪೂರ್

ಪೂಜೆಗೆ ಬಂದ ವಿದ್ಯಾ ಬಾಲನ್

ಪೂಜೆಗೆ ಬಂದ ವಿದ್ಯಾ ಬಾಲನ್

ನಾನು ತಪ್ಪದೇ ದುರ್ಗಾ ಪೂಜೆಗೆ ಬರುತ್ತೇನೆ ಎಂದಿರುವ ವಿದ್ಯಾ ಬಾಲನ್

ನಟಿ ಐಶ್ವರ್ಯಾ ರೈ ಬಚ್ಚನ್

ನಟಿ ಐಶ್ವರ್ಯಾ ರೈ ಬಚ್ಚನ್

ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಬೆಂಗಾಳಿ ಸಾಂಪ್ರದಾಯಿಕ ದಿರಿಸಿನಲ್ಲಿ.. ಸಂಗ್ರಹಿತ ಚಿತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+