ವಾಯುಸೇನೆ ದಿನ : ಉಕ್ಕಿನ ಹಕ್ಕಿನ ಚಿತ್ತಾರದ ಚಿತ್ರ
ನವದೆಹಲಿ, ಅ.8: ಭಾರತೀಯ ವಾಯುಪಡೆ ಯೋಧರು ಸಂಭ್ರಮದಿಂದ ಇಂದು ವಾಯುಸೇನೆ ದಿನಾಚರಣೆಯಲ್ಲಿ ತೊಡಗಿದ್ದಾರೆ. ಯೋಧರು ತಮ್ಮ ಉಕ್ಕಿನ ಹಕ್ಕಿಗಳನ್ನು ಏರಿ ಆಗಸದಲ್ಲಿ ಎತ್ತರೆತ್ತರಕ್ಕೆ ಚಿಮ್ಮಿತ್ತಾ ಚಿತ್ತಾರ ಮೂಡಿಸಿದ್ದಾರೆ. ಅಕ್ಟೋಬರ್ 8 ಏರ್ ಫೋರ್ಸ್ ಡೇ ಆಗಿ ಹಿಂಡಾನ್ ಏರ್ ಬೇಸ್ ನಲ್ಲಿ ಆಚರಿಸಲಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಏರ್ ಫೋರ್ಸ್ ದಿನವನ್ನು ಉತ್ತರ ಪ್ರದೇಶದ ಗಾಜಿಯಾಬಾದಿನ ಹಿಂಡಾನ್ ಏರ್ ಬೇಸ್ ನಲ್ಲೇ ಆಚರಿಸಲಾಗುತ್ತಿದೆ. ಅಕ್ಟೋಬರ್ 8ರಂದು ಹಿಂಡಾನ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ತನ್ನ ಅತಿದೊಡ್ಡ ಸಾಗಣಿಕೆ ಏರ್ ಕ್ರಾಫ್ಟ್ ಸಿ -17 ಗ್ಲೋಬ್ ಮಾಸ್ಟರ್ ಅನಾವರಣಗೊಳಿಸಿದೆ. ಜತೆಗೆ 81ನೇ ವಾರ್ಷಿಕ ವಾಯುಸೇನೆ ದಿನಾಚರಣೆಗೆ ಚಾಲನೆ ನೀಡಿದೆ.
ಸಿ-17 ಗ್ಲೋಬ್ ಮಾಸ್ಟರ್ ನಂತರ ಸುಖೋಯ್ ಸು-30 ಎಂಕೆಐ ಏರ್ ಕ್ರಾಫ್ಟ್ ಹಾಗೂ ಟೈಗರ್ ಮಾಥ್ ಪುರಾತನ ವಿಮಾನ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದೆ.
ವಾಯುಸೇನೆ ದಿನದ ಅಂಗವಾಗಿ ನಡೆಯುವ ಪರೇಡ್ ನಲ್ಲಿ ಎಂಐ-17 ವಿ5 ಹೆಲಿಕಾಪ್ಟರ್ ನೆರೆದಿರುವ ಪ್ರೇಕ್ಷಕರ ಎದೆ ಝಲ್ ಎನಿಸುವಂತೆ ಅತಿ ಸಮೀಪದಲ್ಲಿ ಹಾದು ಹೋಗಲಿದೆ. ಆಕಾಶ್ ಗಂಗಾ ತಂಡ ಸ್ಕೈ ಡೈವರ್ ಗಳು ಎಎನ್ 32 ಏರ್ ಕ್ರಾಫ್ಟ್ ನಿಂದ ಜಿಗಿದಿದ್ದಾರೆ. ಭಾರತದ ತ್ರಿವರ್ಣ ಧ್ವಜದ ರಂಗು ಎಲ್ಲೆಡೆ ಚೆಲ್ಲಿದೆ. ಭಾರತೀಯ ವಾಯುಸೇನೆ ಸಂಭ್ರಮದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಇಲ್ಲಿ ನೋಡಿ.. ಎಲ್ಲಾ ಚಿತ್ರಗಳ ಕೃಪೆ : ಪಿಟಿಐ

ಸಿಬ್ಬಂದಿಯಿಂದ ಪಥಸಂಚಲನ
ವಾಯುಸೇನೆ ದಿನದ ಅಂಗವಾಗಿ ವಾಯುಸೇನೆ ಸಿಬ್ಬಂದಿಯಿಂದ ಪಥಸಂಚಲನ

ಹೆಲಿಕಾಪ್ಟರ್ ಗಳ ಹಾರಾಟ
ಐಎಎಫ್ ಸಾರಂಗ್ ಹೆಲಿಕಾಪ್ಟರ್ ಗಳ ಹಾರಾಟ

ಸ್ಕೈ ಡೈವರ್ ಗಳು
ಆಕಾಶ್ ಗಂಗಾ ತಂಡ ಸ್ಕೈ ಡೈವರ್ ಗಳು ಎಎನ್ 32 ಏರ್ ಕ್ರಾಫ್ಟ್ ನಿಂದ ಜಿಗಿದಿದ್ದಾರೆ.

ಆಕರ್ಷಕ ಪ್ರದರ್ಶನ
ಐಎಎಫ್ ಸಾರಂಗ್ ಹೆಲಿಕಾಪ್ಟರ್ ಗಳ ಹಾರಾಟ

ಆಕರ್ಷಕ ಪ್ರದರ್ಶನ
ಬ್ರಿಟಿಷ್ ಅಧಿಪತ್ಯ ಇರುವಾಗಲೇ ಭಾರತಕ್ಕೆ ವಾಯುಸೇನೆ ಸೇರ್ಪಡೆಯಾಯಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 8 ರಂದು ವಾಯುಸೇನಾ ದಿನಾಚರಣೆ ಆಚರಿಸಲಾಗುತ್ತಿದೆ.

ಆಕರ್ಷಕ ಪ್ರದರ್ಶನ
ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದೇ ಕರೆಯಲಾಗುತ್ತಿತ್ತು. ಆದರೆ, ಸ್ವಾತಂತ್ರ್ಯ ಬಂದ ಮೇಲೆ ರಾಯಲ್ ಪದ ತೆಗೆದು ಹಾಕಲಾಯಿತು.

ಆಕರ್ಷಕ ಪ್ರದರ್ಶನ
ವಾಯುಸೇನೆ ತನ್ನ ಸೇವೆಯನ್ನು ನೀಡಿದೆ. ಪಾಕಿಸ್ತಾನ ಹಾಗೂ ಚೀನಾ ವಿರುದ್ಧದ ಯುದ್ಧಗಳಲ್ಲಿ ವಾಯುಸೇನೆ ಮಹತ್ವದ ಪಾತ್ರ ವಹಿಸಿತ್ತು.

ಆಕರ್ಷಕ ಪ್ರದರ್ಶನ
ಕ್ಯಾಕ್ಟಸ್, ಆಪರೇಷನ್ ಮೇಘದೂತ್ ಹಾಗೂ ಆಪರೇಷನ್ ವಿಜಯ್ ಪ್ರಮುಖವಾದ ಕಾರ್ಯಾಚರಣೆಯಾಗಿದೆ.

ಆಕರ್ಷಕ ಪ್ರದರ್ಶನ
ಮುಖ್ಯಸ್ಥರಾಗಿದ್ದು ನಾಲ್ಕು ಸ್ಟಾರ್ ಕಮಾಮ್ಡೆರ್ ಹಾಗೂ ಏರ್ ಸಿಬ್ಬಂದಿಗಳ ಮುಖ್ಯಸ್ಥರೂ ಆಗಿರುತ್ತಾರೆ.












Click it and Unblock the Notifications