ಚಿತ್ರಗಳು : ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ

ಬೆಂಗಳೂರು, ನವೆಂಬರ್ 12 : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಂಜಾಬ್‌ನ ಅಮೃತಸರದ ಖಾಸದಲ್ಲಿರುವ ದೊಗ್ರಾಯ್‌ ಯುದ್ಧ ಸ್ಮಾರಕ ಪ್ರದೇಶದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಕಳೆದ ವರ್ಷ ಮೋದಿ ಸಿಯಾಚಿನ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.

ದೊಗ್ರಾಯ್ ಯುದ್ಧ ಸ್ಮಾರಕದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಇಲ್ಲಿಗೆ ಬಂದಿರುವೆ. ಈ ಅವಕಾಶ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಯೋಧರ ತ್ಯಾಗ ಬಲಿದಾನ, ಶೌರ್ಯ ಮತ್ತು ಪರಾಕ್ರಮಗಳಿಂದಾಗಿ ಇಂದು ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುತ್ತಿದೆ' ಎಂದು ಮೋದಿ ಬಣ್ಣಿಸಿದರು. [ದೀಪಾವಳಿ ಎಲ್ಲರ ಬಾಳಲ್ಲಿ ತರಲಿ ಬೆಳಕು]

ಅಮೃತಸರದಲ್ಲಿರುವ 1965ರ ಭಾರತ-ಪಾಕಿಸ್ತಾನ ಯುದ್ಧ ಸ್ಮಾರಕ ಹಾಗೂ ಹುತಾತ್ಮ ಸೈನಿಕರ ವೀರಗಲ್ಲುಗಳಿಗೆ ಮೋದಿ ನಮನ ಸಲ್ಲಿಸಿದರು. 'ನಿವೃತ್ತ ಸೈನಿಕರಿಗೆ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುವಂತೆ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು' ಎಂದು ಭರವಸೆ ನೀಡಿದರು. [ದೀಪಾವಳಿಯ ಚಿತ್ರಗಳನ್ನು ನೋಡಿ]

ಅಮೃತಸರದಲ್ಲಿರುವ ಅಸಲ್ ಉತ್ತರ್ ಸ್ಮಾರಕ ಮತ್ತು ಪರಮ ವೀರ ಚಕ್ರ ಪುರಸ್ಕೃತ ಹವಿಲ್ದಾರ್ ಅಬ್ದುಲ್ ಹಮೀದ್ ಸ್ಮಾರಕಕ್ಕೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಯೋಧರೊಂದಿಗೆ ಮೋದಿ ದೀಪಾವಳಿ ಆಚರಣೆ ಚಿತ್ರಗಳು ಇಲ್ಲಿವೆ...... [ಪಿಟಿಐ ಚಿತ್ರಗಳು]

ಅಮೃತಸರದಲ್ಲಿ ಮೋದಿ ದೀಪಾವಳಿ ಆಚರಣೆ

ಅಮೃತಸರದಲ್ಲಿ ಮೋದಿ ದೀಪಾವಳಿ ಆಚರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಂಜಾಬ್‌ನ ಅಮೃತಸರದ ಖಾಸದಲ್ಲಿರುವ ದೊಗ್ರಾಯ್‌ ಯುದ್ಧ ಸ್ಮಾರಕ ಪ್ರದೇಶದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು.

ಯುದ್ಧ ಸ್ಮಾರಕಗಳಿಗೆ ಭೇಟಿ

ಯುದ್ಧ ಸ್ಮಾರಕಗಳಿಗೆ ಭೇಟಿ

ಅಮೃತಸರದಲ್ಲಿರುವ 1965ರ ಭಾರತ-ಪಾಕಿಸ್ತಾನ ಯುದ್ಧ ಸ್ಮಾರಕ ಹಾಗೂ ಹುತಾತ್ಮ ಸೈನಿಕರ ವೀರಗಲ್ಲುಗಳಿಗೆ ಮೋದಿ ನಮನ ಸಲ್ಲಿಸಿದರು. ಅಸಲ್ ಉತ್ತರ್ ಸ್ಮಾರಕ ಮತ್ತು ಪರಮ ವೀರ ಚಕ್ರ ಪುರಸ್ಕೃತ ಹವಿಲ್ದಾರ್ ಅಬ್ದುಲ್ ಹಮೀದ್ ಸ್ಮಾರಕಕ್ಕೂ ಭೇಟಿ ನೀಡಿದರು.

ಸೈನಿಕರ ಕಾರ್ಯ ಶ್ಲಾಘಿಸಿದ ಮೋದಿ

ಸೈನಿಕರ ಕಾರ್ಯ ಶ್ಲಾಘಿಸಿದ ಮೋದಿ

'ನಿಮ್ಮ ಪರಾಕ್ರಮ, ಬದ್ಧತೆಯಿಂದಾಗಿ ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುತ್ತದೆ. ನಿಮ್ಮೊಂದಿಗೆ ದೀಪಾವಳಿ ಆಚರಣೆ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ' ಎಂದು ಮೋದಿ ಹೇಳಿದರು

ಕಳೆದ ವರ್ಷವೂ ಯೋಧರ ಜೊತೆ ದೀಪಾವಳಿ

ಕಳೆದ ವರ್ಷವೂ ಯೋಧರ ಜೊತೆ ದೀಪಾವಳಿ

2014ರಲ್ಲಿ ನರೇಂದ್ರ ಮೋದಿ ಸಿಯಾಚಿನ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ಬಾರಿ ಅಮೃತಸರದ ಖಾಸದಲ್ಲಿರುವ ದೊಗ್ರಾಯ್‌ ಯುದ್ಧ ಸ್ಮಾರಕ ಪ್ರದೇಶದಲ್ಲಿ ದೀಪಾವಳಿ ಆಚರಿಸಿದರು.

ಹವಾಲ್ದಾರ್‌ ಸೇವೆ ಕೊಂಡಾಡಿದ ಮೋದಿ

ಹವಾಲ್ದಾರ್‌ ಸೇವೆ ಕೊಂಡಾಡಿದ ಮೋದಿ

ಪರಮ ವೀರ ಚಕ್ರ ಪುರಸ್ಕೃತ ಹವಿಲ್ದಾರ್ ಅಬ್ದುಲ್ ಹಮೀದ್ ಸ್ಮಾರಕಕ್ಕೂ ಭೇಟಿ ನೀಡಿದ ಮೋದಿ, ಹವಾಲ್ದಾರ್‌ ಅಬ್ದುಲ್‌ ಹಮೀದ್‌ ಅವರಸಮಾಧಿಗೆ ನಮನ ಸಲ್ಲಿಸಿ ಅವರ ಸೇವೆಯನ್ನು ಕೊಂಡಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+