ಮೋದಿ ಸರ್ಕಾರದಿಂದ ರೈಲ್ವೆ ನೌಕರರಿಗೆ ಸಿಂಗಪುರ ಟ್ರಿಪ್ ಭಾಗ್ಯ
ಬೆಂಗಳೂರು, ಜನವರಿ 30: ಮೋದಿ ಸರ್ಕಾರದ ವತಿಯಿಂದ ರೈಲ್ವೇ ಇಲಾಖೆ ನೌಕರರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ನಾನ್ ಗೆಜೆಟೆಡ್ ಸಿಬ್ಬಂದಿಗಳಿಗೆ ವಿದೇಶಿ ಪ್ರಯಾಣ ಯೋಗ ಸಿಕ್ಕಿದೆ.
ಸಿ ಮತ್ತು ಡಿ ಗ್ರೂಪ್ ನೌಕರರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಮುಂದಾಗಿದ್ದು, ಜನವರಿ 28 ರಂದು 100 ಮಂದಿ ನೌಕರರ ಮೊದಲ ತಂಡ ಪ್ರಯಾಣ ಆರಂಭಿಸಿದ್ದಾರೆ.
ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಬದಲಾಗಿ ಗ್ಯಾಂಗ್ಮನ್, ಟ್ರಾಕ್ ಮನ್ ಹಾಗೂ ಇತರೆ ನಾನ್ ಗೆಜೆಟೆಡ್ ಹುದ್ದೆಯ ನೌಕರರನ್ನು ಆಯ್ಕೆ ಮಾಡಿ ವಿದೇಶಿ ಯಾತ್ರೆಗೆ ಕಳಿಸಲಾಗುತ್ತಿದೆ. ವಿದೇಶ ಪ್ರವಾಸದ ಶೇ.25 ರಷ್ಟು ಪ್ರಯಾಣ ವೆಚ್ಚವನ್ನು ನೌಕರರು ಭರಿಸಲಿದ್ದು, ಶೇ.75 ರಷ್ಟು ವೆಚ್ಚವನ್ನು ಭಾರತೀಯ ರೈಲ್ವೇಯ Staff Benefit Fund (ಎಸ್.ಬಿ.ಎಫ್) ನಿಧಿಯಿಂದ ಭರಿಸಲಾಗುತ್ತಿದೆ.

ಜನವರಿ 28 ರಿಂದ ಆರು ದಿನಗಳ ಕಾಲ ಸಿಂಗಾಪುರ್ ಹಾಗೂ ಮಲೇಶಿಯಾಕ್ಕೆ ಭೇಟಿ ನೀಡಲಿರುವ ತಂಡ ಯೂನಿವರ್ಸಲ್ ಸ್ಟುಡಿಯೋ, ಸೆನ್ಟೋಸಾ, ನೈಟ್ ಸಫಾರಿ, ಕೌಲ ಲಂಪುರ, ಪೆಟ್ರೋನಸ್ ಟವರ್ಸ್, ಬಟು ಕೇವ್ಸ್ ಸೇರಿದಂತೆ ಇನ್ನಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ.(ಪಿಟಿಐ)












Click it and Unblock the Notifications