ಮುಂದಿನ 10 ದಿನದಲ್ಲಿ ಗುಜರಾತ್ ಸಿಎಂ ರೂಪಾಣಿ ರಾಜೀನಾಮೆ: ಹಾರ್ದಿಕ್
Recommended Video

ಅಹಮದಾಬಾದ್, ಜೂನ್ 15: ಗುಜರಾತ್ ಮುಖ್ಯಮಂತ್ರಿ ಬಿಜೆಪಿಯ ವಿಜಯ್ ರೂಪಾಣಿ ಇನ್ನು 10 ದಿನದಲ್ಲಿ ರಾಜೀನಾಮೆ ನೀಡಲಿದ್ದಾರೆ. ಹೀಗೊಂದು ಸ್ಪೋಟಕ ಸುದ್ದಿಯನ್ನು ಪಾಟೀದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಈ ಹಿಂದಿನ ಮುಖ್ಯಮಂತ್ರಿ "ಆನಂದಿಬೆನ್ ಪಟೇಲ್ ಅವರಿಗೆ ರಾಜೀನಾಮೆ ನೀಡಲು ಹೇಳಿದಂತೆ ನಿನ್ನೆಯ (ಬುಧವಾರ) ಸಂಪುಟ ಸಭೆಯಲ್ಲಿ ವಿಜಯ್ ರೂಪಾಣಿಯವರಿಗೆ ರಾಜೀನಾಮೆ ನೀಡಲು ಹೇಳಲಾಗಿದೆ," ಎಂದು ತಿಳಿಸಿದ್ದಾರೆ.
"ಮುಂದಿನ 10 ದಿನಗಳಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗುತ್ತದೆ. ಮುಂದಿನ ಮುಖ್ಯಮಂತ್ರಿ ಕ್ಷತ್ರಿಯ ಅಥವಾ ಪಾಟೀದಾರ್ ಸಮುದಾಯದವರು ಆಗಲಿದ್ದಾರೆ ಎಂದು ನಾನು ನಂಬಿದ್ದೇನೆ," ಎಂದು ಹೇಳಿದ್ದಾರೆ.

ಒಂದೊಮ್ಮೆ ಹಾರ್ದಿಕ್ ಪಟೇಲ್ ಹೇಳಿದಂತೆ ವಿಜಯ್ ರೂಪಾಣಿ ರಾಜೀನಾಮೆ ನೀಡಲಿದ್ದಾರಾ? ರಾಜೀನಾಮೆ ನೀಡಿದರೆ ಅವರೇ ಹೇಳಿದಂತೆ ಪಟೇಲ್ ಸಮುದಾಯವರು ಸಿಎಂ ಕುರ್ಚಿ ಏರಲಿದ್ದಾರಾ? ಹಿರಿಯ ಮುಖಂಡ ಹಾಲಿ ಉಪಮುಖ್ಯಮಂತ್ರಿ ನಿತಿನ್ ಭಾಯಿ ಪಟೇಲ್ ಅವರಿಗೆ ಅದೃಷ್ಟ ಒಲಿಯಲಿದೆಯಾ? ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ.












Click it and Unblock the Notifications