IMD Weather Forecast: ದೆಹಲಿಗೆ ಒಣಹವೆ, 5 ದಿನ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ!

IMD Weather Forecast: ರಾಷ್ಟ್ರ ರಾಜಧಾನಿ ದೆಹಲಿ, ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಿಶ್ರ ವಾತಾವರಣ ನಿರ್ಮಾಣವಾಗಲಿದೆ. ಅಂದರೆ ದೆಹಲಿಯಲ್ಲಿ ಬೇಸಿಗೆ ಬಿರು ಬಿಸಿಲಿನ ವಾತಾವರಣ ಕಂಡು ಬರಲಿದೆ. ಉಳಿದೆಡೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇಂದು ದೆಹಲಿಯಲ್ಲಿ ಒಣ ಹವಾಮಾನ, ಅಧಿಕ ತಾಪಮಾನ ಕಂಡು ಬರಲಿದೆ. ಇಲ್ಲಿ ಗರಿಷ್ಠ ತಾಪಮಾನವು 32- 34 ಡಿಗ್ರಿ ಸೆಲ್ಸಿಯಸ್ ಹಾಗೂ ‍20- 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಕಂಡು ಬರುವ ಸಾಧ್ಯತೆ ಇದೆ. ಸದ್ಯಕ್ಕೆ ಇಲ್ಲಿ ಮಳೆ ಮುನ್ಸೂಚನೆ ಇಲ್ಲ. ದೆಹಲಿ ಹವಾಮಾನವು ಮುಂದಿನ ಅಕ್ಟೋಬರ್ 5 ರವರೆಗೆ ಇದೇ ರೀತಿ ಅಧಿಕ ತಾಪದೊಂದಿಗೆ ಮುಂದುವರಿಯಲಿದೆ. ನಾಳೆ ಗುರುವಾರ (ಅ.1) ಗರಿಷ್ಠ ತಾಪಮಾನವು ಮತ್ತಷ್ಟು 33 ರಿಂದ 35 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ ಎಂದು ಎಚ್ಚರಿಕೆ ಕೊಡಲಾಗಿದೆ.

IMD Weather Forecast

ಕಳೆದ 24 ಗಂಟೆಗಳಲ್ಲಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಸರಾಸರಿ 2.2 ಮಿ.ಮೀ ಮಳೆ ಆಗಿದ್ದು, ಪಾಲಂನಲ್ಲಿ 1 ಮಿ.ಮೀ ಮತ್ತು ಅಯಾನಗರದಲ್ಲಿ 0.7 ಮಿ.ಮೀ ಬಿದ್ದಿದೆ. ಇಷ್ಟು ಕಡಿಮೆ ಮಳೆ ಆಗುವ ಮೂಲಕ ಮುಂದೆ ಮಳೆ ದುರ್ಬಲಗೊಂಡು, ಒಣ ಹವೆ ಹೆಚ್ಚಾಗುವ ಲಕ್ಷಣಗಳು ಗೋಚರಿಸಿವೆ. ಇಲ್ಲಿನ ಸಫ್ದರ್‌ಜಂಗ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 32.4 ಡಿಗ್ರಿ ಸೆಲ್ಸಿಯಸ್ (ವಾಡಿಕೆ 2.3 ಡಿಗ್ರಿ ಕಡಿಮೆ) ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ (ವಾಡಿಕೆ 2.3 ಡಿಗ್ರಿ ಕಡಿಮೆ) ಕಂಡು ಬಂದಿದೆ. ಸೆಪ್ಟೆಂಬರ್ 25ಕ್ಕು ಎರಡು ದಿನ ಮುನ್ನ ಅಂದರೆ ಸೆಪ್ಟೆಂಬರ್ 23 ರಂದು ಮಳೆ ದೆಹಲಿಯಿಂದ ನಿರ್ಗಮಿಸಿದ್ದು, ಕೆಲವು ರಾಜ್ಯಗಳಲ್ಲೂ ಮಳೆ ದುರ್ಬಲವಾಗಿದೆ.

ದಕ್ಷಿಣ ಭಾರತ, ಈಶಾನ್ಯ ಭಾಗಗಳಲ್ಲಿ ಭಾರಿ ಮಳೆ

ದೇಶದ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳ ಹಲವು ಭಾಗಗಳಲ್ಲಿ ಇಂದಿನಿಂದ ಮಳೆ ಆಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿಮ, ಅಸ್ಸಾಂ, ಮೇಘಾಲಯ, ಕೇರಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಭಾಗದ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಆಂಧ್ರ ಪ್ರದೇಶದ ರಾಯಲಸೀಮಾ,ತಮಿಳುನಾಡು, ಪುದುಚೇರಿ ವಿವಿಧೆ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಆಂಧ್ರಪ್ರದೇಶ ಪ್ರದೇಶ ಕರಾವಳಿ, ಒಡಿಶಾ ಭಾಗದಲ್ಲಿ ಮಳೆ ಚುರುಕಾಗಿರಲಿದೆ. ದೇಶದ ಈಶಾನ್ಯ ಭಾಗದ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮುಂದಿನ 5-7 ದಿನ ಮಳೆ ಚುರುಕಾಗಿರುವ ಲಕ್ಷಣಗಳಿವೆ. ಇಂದು ಬುಧವಾರದಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂನಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ.

ಸೆಪ್ಟೆಂಬರ್ 30ಕ್ಕೆ ಮುಂಗಾರು ಮಳೆ ಅವಧಿ ಮುಗಿಯಲಿದೆ. ಅಕ್ಟೋಬರ್ 1ರಿಂದ ಹಿಂಗಾರು ಆರಂಭವಾಗಬೇಕು. ಈ ಬಾರಿ ಹಿಂಗಾರು ಆರಂಭದಲ್ಲಿ ಕೆಲವು ರಾಜ್ಯಗಳಲ್ಲಿ ಆರ್ಭಟಿಸುವ ನಿರೀಕ್ಷೆ ಇದೆ. ಈ ಹಿಂಗಾರು ಮಳೆ ಪ್ರಭಾವವು ಕರ್ನಾಟಕ ಒಳನಾಡು, ಆಂಧ್ರ ಕರಾವಳಿ, ತಮಿಳುನಾಡು, ಪುದುಚೇರಿ ಮೇಲಾಗಲಿದೆ. ಕೇರಳಲ್ಲಿ ನಾಳೆ ಗುರುವಾರ ವ್ಯಾಪಕ ಮಳೆ ಸಾಧ್ಯತೆ ಇದೆ.

ವಾಯುಭಾರ ಕುಸಿತ ಪ್ರಭಾವ

ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತ (depression) ಉಂಟಾಗಿದೆ. ಮುಂದಿನ 12 ಗಂಟೆಗಳಲ್ಲಿ ಮ್ಯಾನ್ಮಾರ್ ಕರಾವಳಿ, ಬಾಂಗ್ಲಾದೇಶದ ಆಗ್ನೇಯ ಭಾಗ, ಈಶಾನ್ಯ ಬಂಗಾಳ ಕೊಲ್ಲಿಯ ಪ್ರದೇಶಗಳಲ್ಲಿ 'ಕಡಿಮೆ ಒತ್ತಡದ ಪ್ರದೇಶ' ಸೃಷ್ಟಿಯಾಗಿದೆ. ಈ ವೈಪರೀತ್ಯದ ಬಿರುಗಾಲಿಯು ವಾಯುವ್ಯ ದಿಕ್ಕಿನ ಮೂಲಕ ಮುಂದೆ ಸಾಗಲಿದೆ. ತ್ರಿಪುರ, ಮಿಜೋರಾಂ ಭಾಗದಲ್ಲಿ ಚಲಿಸಲಿದೆ ಎಂದು ಐಎಂಡಿ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+