ದೇಶದ ಮಾನ್ಸೂನ್ ಮೇಲೆ 'ಎಲ್ ನಿನೋ' ಕರಾಳ ಛಾಯೆ

ನವದೆಹಲಿ, ಏ. 22: ಈ ಬಾರಿಯ ಮಾನ್ಸೂನ್ ಮೇಲೆ ಎಲ್ ನಿನೋತನ್ನ ಕರಾಳ ಛಾಯೆ ಬೀರಿದ್ದು ಮಳೆ ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಈ ಬಗ್ಗೆ ಮಾಹಿತಿ ನೀಡಿದ್ದು ಈ ಬಾರಿ ಮುಂಗಾರು ಕಳೆದ ವರ್ಷಗಳಿಗೆ ಹೋಲಿಸಿದರೆ ಕುಂಠಿವಾಗಲಿದೆ ಎಂದು ಹೇಳಿದ್ದಾರೆ. ಮಾನ್ಸೂನ್ ಶೇ.33 ರಷ್ಟು ಕುಂಠಿತವಾಗುವ ಸಂಭವವಿದೆ. ಮಳೆಯ ಆರಂಭಕ್ಕೆ ಎನ್ ನಿನೋ ತೊಂದರೆ ತಂದೊಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.[ಅಕಾಲಿಕ ಮಳೆಗೆ ಕಾರಣವೇನು]

rain

ಕಳೆದ ಬಾರಿ ಸರಾಸರಿಗೆ ಹೋಲಿಸಿದರೆ ಶೇ. 11 ರಷ್ಟು ಕಡಿಮೆ ಮಳೆಯಾಗಿತ್ತು. ಈ ಬಾರಿ ಮತ್ತೂ ಕಡಿಮೆಯಾಗಲಿದ್ದು ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ತೆಲಂಗಾಣ ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳು ಮಳೆ ಕೊರತೆ ಅನಿಭವಿಸಲಿವೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.[ಇದೆಲ್ಲ ಇಲ್ಲದಿದ್ದರೆ ಬೆಂಗಳೂರನ್ನು ಬೆಂಗಳೂರು ಅಂತಾರಾ?]

2009 ರಲ್ಲಿ ಎಲ್ ನೀನೋ ದೇಶಕ್ಕೆ ಅಪಾಯ ತಂದೊಡ್ಡಿತ್ತು. ಈ ಬಾರಿ ಶೇ. 70 ರಷ್ಟು ಎಲ್ ನೀನೋ ಅಪಾಯ ಎದುರಾಗಲಿದ್ದು ಸರ್ಕಾರ ಮತ್ತು ಜನರು ಅಪಾಯ ಎದುರಿಸಲು ಸಿದ್ಧರಾಗಬೇಕಿದೆ.

ಭಾರತದ ನೈರುತ್ಯ ಮಾರುತದ ಮೇಲೆ ಪ್ರಭಾವ ಬೀರಿ, ಜೂನ್-ಸೆಪ್ಟೆಂಬರ್ ಅವಧಿಯ ಮಳೆಯ ಪ್ರಮಾಣವನ್ನು ಇಳಿಸುವ 'ಎಲ್ ನಿನೋ' ಈ ವರ್ಷ ಪ್ರಬಲವಾಗುವ ಸಾಧ್ಯತೆ ಬಗ್ಗೆ ಅಮೆರಿಕದ ಹವಾಮಾನ ಮುನ್ಸೂಚನಾ ಕೇಂದ್ರ ಮತ್ತು ಆಸ್ಟ್ರೇಲಿಯ ಪವನಶಾಸ್ತ್ರ ಕಚೇರಿ ಈ ಮುನ್ಸೂಚನೆ ನೀಡಿವೆ.[ಬೇಸಿಗೆ ಬೇಗೆ ತಣಿಸಿದ ವರುಣ, ರೋಗಗಳಿಗೂ ಇದು ಕಾರಣ]

ಎಲ್ ನಿನೋ ಎಂದರೇನು?
ಸ್ಪೇನ್‌ ಭಾಷೆಯಲ್ಲಿ 'ಬಾಲ ಕ್ರಿಸ್ತ' ಎಂಬ ಅರ್ಥ ನೀಡುವ 'ಎಲ್ ನಿನೋ', ಡಿಸೆಂಬರ್ ಅಂತ್ಯದ ಸುಮಾರಿಗೆ, ಪೆಸಿಫಿಕ್ ಸಾಗರದ ಪೆರು ಮತ್ತು ಈಕ್ವೆಡಾರ್‌ಗಳ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರೀತ್ಯ. ಇದರ ಪ್ರಾರಂಭದ ಸೂಚನೆಯಾಗಿ,ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪ ಸರಾಸರಿಗಿಂತ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಈ ತಾಪ 0.5 ಡಿಗ್ರಿ ಸೆಲ್ಷಿಯಸ್‌ಗಳಷ್ಟು ಹೆಚ್ಚಾಗಿ, ಈ ಹೆಚ್ಚಳ ಏಕಪ್ರಕಾರವಾಗಿ ಅನೇಕ ತಿಂಗಳ ಕಾಲ ಮುಂದುವರಿದಾಗ, ಆ ವಿದ್ಯಮಾನವನ್ನು 'ಎಲ್ ನಿನೋ' ಎಂದು ಕರೆಯಲಾಗುತ್ತದೆ. ಇದನ್ನು ದುರ್ಬಲ, ಸಾಧಾರಣ ಮತ್ತು ಪ್ರಬಲ ಎಂದು ವರ್ಗೀಕರಣ ಮಾಡಲಾಗಿದೆ.

ರಾಜ್ಯದ ಮೇಲೆ ಪರಿಣಾಮ ಬೀರುವುದೇ?
ಈ ಬಗ್ಗೆ ರಾಜ್ಯ ಹವಾಮಾಣ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ. ನೈರುತ್ಯ ಭಾಗದಲ್ಲಿ ಉಂಟಾಗುವ ಬದಲಾವಣೆಗಳು ರಾಜ್ಯದ ಮೇಲೆ ಪರಿಣಾಮ ಉಂಟುಮಾಡುವ ಸಂಭವ ತೀರಾ ಕಡಿಮೆ. ಆದರೆ ಎಲ್ ನಿನೋ ಪ್ರಖರವಾಗಿದ್ದರೆ ಆಂಧ್ರ ಮತ್ತು ತೆಲಂಗಾಣದ ಗಡಿ ಭಾಗದ ಜಿಲ್ಲೆಗಳ ಮೇಲೆ ಪರಿಣಾಮ ಬೀರಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+