Cyclone Montha Update: ಈ ಭಾಗಗಳಲ್ಲಿ ಭಾರೀ ಧಾರಾಕಾರ ಮಳೆ, ರೆಡ್ ಅಲರ್ಟ್ ಘೋಷಣೆ...Rain Alert

IMD Weather Forecast: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೊಂಥಾ ಚಂಡಮಾರುತ ಪ್ರಭಾವದಿಂದ ಹಿಂಗಾರು ಮಳೆ ದೇಶದಲ್ಲಿ ಸಕ್ರಿಯವಾಗಿದೆ. ದಕ್ಷಿಣ ಭಾರತ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡು, ತಮಿಳುನಾಡು, ಕೇರಳ ಮತ್ತು ಮಾಹೆ ಪ್ರದೇಶಗಳಲ್ಲಿ ಇಂದು ಪ್ರತ್ಯೇಕ ಸ್ಥಳಗಳಲ್ಲಿ ಸಹ ಧಾರಾರಾಕ ಮಳೆ ನಿರೀಕ್ಷೆ ಇದೆ.

ಅಕ್ಟೋಬರ್ 28 ರಂದು ಈ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯ ಜೊತೆಗೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ತಮಿಳುನಾಡು ಮತ್ತು ರಾಯಲಸೀಮಾದಲ್ಲಿ ಇಂದು ತೆಲಂಗಾಣದಲ್ಲಿ 28 ಹಾಗೂ 29ರಂದು, ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂನಲ್ಲಿ 30ರಂದು ಅತಿ ಹೆಚ್ಚು ಮಳೆಯಾಗುವ ಸಂಭವವಿದೆ. ಕೆಲವೆಡೆ ಮಳೆ ಪ್ರಮಾಣವು 200 ಮಿಲಿ ಮೀಟರ್‌ಗಿಂತ ಹೆಚ್ಚಿನ ಮಳೆ ನಿರೀಕ್ಷೆ ಇದ್ದು, ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.

IMD Issued Heavy Rain Across Andhra Odisha Kerala Due Cyclone Montha School Holidays

ಆಂಧ್ರ ಪ್ರದೇಶ ಕರಾವಳಿ ಭಾಗ, ಚೆನ್ನೈ ಮಹಾನಗರದಲ್ಲಿ ಭಾರೀ ಮಳೆ ನಿರೀಕ್ಷೆ ಇದೆ. ಇನ್ನೂ ಕೇರಳ, ಲಕ್ಷದ್ವೀಪ, ಕರ್ನಾಟಕದ ಒಳನಾಡು ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗಬಹುದು. ಗಾಳಿಯ ವೇಗ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಬೀಸಲಿದ್ದು, ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಈ ಸಂಬಂಧ ಆಂಧ್ರ ಪ್ರದೇಶ, ಕೇರಳ, ಚೆನ್ನೈ, ತಮಿಳುನಾಡು ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಉತ್ತರ ಮತ್ತು ಪೂರ್ವ ಭಾರತದ ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಅಕ್ಟೋಬರ್ 28ರಿಂದ 31ರ ವರೆಗೆ ಗುಡುಗ ಸಹಿತ ಮಳೆ ಜೋರು ಮಳೆ ಸಂಭವವಿದೆ. ಕೆಲವು ಭಾಗಗಳಲ್ಲಿ ಬಿರುಗಾಳಿ ವೇಗ ಗಂಟೆಗೆ 60 ರಿಂದ 70 ಕಿ.ಮೀ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮೊಂಥಾ ಚಂಡಮಾರುತ ಅಪ್ಡೇಟ್ಸ್

ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ರೂಪುಗೊಂಡ "ಮೋಂಥಾ" ಚಂಡಮಾರುತವು ಕಳೆದ 6 ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಉತ್ತರ-ಉತ್ತರ ಪಶ್ಚಿಮ ದಿಕ್ಕಿನಲ್ಲಿ ಚಲಿಸಿದೆ. ತೀವ್ರತೆ ಹೆಚ್ಚಿಸಿಕೊಂಡಿದೆ. ಆಂಧ್ರಪ್ರದೇಶದ ಮಚಿಲೀಪಟ್ಟಣಂನಿಂದ ಸುಮಾರು 190 ಕಿಲೋ ಮೀಟರ್ ದೂರದಲ್ಲಿದೆ. ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಮಚಿಲೀಪಟ್ನಂ ಮತ್ತು ಕಾಳಿಂಗಪಟ್ಟಣಂ ನಡುವೆ ಕರಾವಳಿ ಭಾಗಕ್ಕೆ ಅಪ್ಪಳಿಸಿದೆ. ಈ ವೇಳೆ ಅದರ ಗಾಳಿಯ ವೇಗ ಗಂಟೆಗೆ 90-110 ಕಿ.ಮೀ. ಆಗಲಿರಲಿದೆ.

ಅರಬ್ಬಿ ಸಮುದ್ರದ ಪೂರ್ವ-ಮಧ್ಯ ಭಾಗದಲ್ಲಿ ಉಂಟಾದ ಕಡಿಮೆ ಒತ್ತಡದ ಪ್ರದೇಶವು ಕಳೆದ 6 ಗಂಟೆಗಳಲ್ಲಿ ಉತ್ತರ ದಿಕ್ಕಿನಲ್ಲಿದೆ. ಇದು ಗಂಟೆಗೆ 12 ಕಿ.ಮೀ ವೇಗದಲ್ಲಿ ಚಲಿಸಿದೆ. ಇದು ಮುಂದಿನ ಎರಡು ದಿನದಲ್ಲಿ ಮತ್ತಷ್ಟು ತೀವ್ರಗೊಳ್ಳೂವ ನಿರೀಕ್ಷೆ ಇದೆ. ಹರಿಯಾಣದ ಉತ್ತರ ಭಾಗದಲ್ಲಿ ಮೇಲ್ಮಟ್ಟದ ಟ್ರಫ್ ಇದೆ. ಇದು ಅರಬ್ಬಿ ಸಮುದ್ರದ ಪೂರ್ವ ಭಾಗದಿಂದ ಮಧ್ಯಪ್ರದೇಶದ ಕಡೆಗೆ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+