ಈ ವರ್ಷ ಉತ್ತಮ ಮುಂಗಾರು: ಮೇ ಕೊನೆ ವಾರದಲ್ಲಿ ಮಳೆ ನಿರೀಕ್ಷೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದ ಅವಧಿಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ರೈತರಿಗೆ ಖುಷಿ ನೀಡಲಿದೆಯಂತೆ ಮುಂಗಾರು

ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ದೀರ್ಘಾವಧಿ ಸರಾಸರಿಯ ಶೇ.97ರಷ್ಟು ಮಳೆ ಬೀಳಲಿದೆ. ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈ ಮೇಟ್ ಕೆಲವು ದಿನಗಳ ಹಿಂದೆ ಬಹುತೇಕ ಇದೇ ರೀತಿಯ ನಿರೀಕ್ಷೆ ಪ್ರಕಟಿಸಿತ್ತು. ಸ್ಕ್ಐ ಮೇಟ್ ಪ್ರಕಾರ, ವರ್ಷದ ಸರಾಸರಿ ಅಂದಾಜು ಮಳೆ ಪ್ರಮಾಣ ಶೇ. 887ರಷ್ಟು ಮಳೆ ಬೀಳುವ ವಿಶ್ವಾಸ ವ್ಯಕ್ತಪಡಿಸಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಮೇ ಕೊನೆಗೆ ಆರಂಭ: ನೈಋತ್ಯ ಮಾನ್ಸೂನ್ ಮಾರುತಗಳು ಮೇ ಕೊನೆಯ ವಾರ ಇಲ್ಲವೇ ಜೂನ್ ಮೊದಲ ವಾರ ಕೇರಳವನ್ನು ಅಪ್ಪಳಿಸಲಿವೆ. ಇದರ ಬಗ್ಗೆ ಸ್ಪಷ್ಟ ಮುನ್ಸೂಚನೆ ಮೇ ಮಧ್ಯಭಾಗದಲ್ಲಿ ನೀಡಲಾಗುವುದು. ಮಳೆ ಹಂಚಿಕೆ ವಿವರಗಳನ್ನು ಜೂನ್ ಆರಂಭದಲ್ಲಿ ನೀಡಲಾಗುವುದು ಎಂದು ಹವಾಮಾನ ಇಲಾಖೆ ಹೇಳಿದೆ.

IMD hints early and good monsoon this year too!

ದೇಶದಲ್ಲಿ 2016,2017ರಲ್ಲಿ ಸಹಜ ಮುಂಗಾರು ಇತ್ತು. ಕಳೆದ ವರ್ಷ ಶೇ.96ರಷ್ಟು ಮಳೆ ನಿರೀಕ್ಷಿಸಿದ್ದರೂ ಶೇ.95ರಷ್ಟು ಮಳೆ ಬಿದ್ದಿತ್ತು. ಈ ವರ್ಷವೂ ಉತ್ತಮ ಮಳೆ ಭವಿಷ್ಯ ಪ್ರಕಟಿಸಲಾಗಿದೆ. 2014,15ರಲ್ಲಿ ಅನಾವೃಷ್ಟಿ ಕಾಡಿತ್ತು.ಶೇ.96ರಿಂದ 104 ಸಹಜ ಮುಂಗಾರು, ಶೇ.104ರಿಂದ 110 ಸಾಮಾನ್ಯಕ್ಕಿಂತ ಹೆಚ್ಚು, ಶೇ.110ಕ್ಕಿಂತ ಅತಿವೃಷ್ಟಿ ಎಂದು ಕರೆಯಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Meteorological Department has said monsoon will enter early this time that would be before end of may and expected good rain fall across the country. The country may get 97% of average rain fall between June to September, the IMD opined.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ