Ilayaraja: ಇಳಯರಾಜರಿಗೆ ದೇವಸ್ಥಾನ ಮಂಟಪ ಪ್ರವೇಶಿಸದಂತೆ ತಡೆ; ವ್ಯಾಪಕ ವಿರೋಧ

ಸಂಗೀತ ಮಾಂತ್ರಿಕ ಎಂದೇ ಹೆಸರಾಗಿರುವ ಹಿರಿಯ ಸಂಗೀತ ನಿರ್ದೇಶಕ, ರಾಜ್ಯಸಭಾ ಸಂಸದ ಇಳಯರಾಜ ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅರ್ಧಮಂಟಪ ಪ್ರವೇಶಿಸಲು ಅಡ್ಡಿಪಡಿಸಿದ್ದಲ್ಲದೆ, ಅವರನ್ನು ಹೊರಗೆ ಕರೆತಂದಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

45 ವರ್ಷಗಳಿಂದ ಸಂಗೀತ ನಿರ್ದೇಶಕನಾಗಿ ಸಂಗೀತ ಪ್ರಿಯರಿಗೆ ಮರೆಯಲಾಗದ ಹಾಡುಗಳನ್ನು ಕೊಟ್ಟಿರುವ ಇಳಯರಾಜ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. 80 ವರ್ಷವಾದರೂ ಅವರು ಇನ್ನೂ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅವರ ಸಂಗೀತ ನಿರ್ದೇಶನದ 'ವಿಡುದಲೈ 2' ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ.

ilayaraja denied entry srivilliputhur temple

ಆಂಡಾಳ್ ದೇವಸ್ಥಾನಕ್ಕೆ ಭೇಟಿ

ತಮಿಳುನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ, ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಳಯರಾಜಾ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳಿಂದ ಬರಮಾಡಿಕೊಳ್ಳಲಾಯಿತು. ಪೆರಿಯ ಪೆರುಮಾಳ್ ದೇಗುಲ, ನಂದವನಂ ಮತ್ತು ಆಂಡಾಳ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ಆದರೆ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಧ ಮಂಟಪಕಕ್ಕೆ ಪ್ರವೇಶಿಸಲು ಯತ್ನಿಸಿದಾಗ ದೇವಸ್ಥಾನದ ಅಧಿಕಾರಿಗಳು ಮತ್ತು ಭಕ್ತರು ತಡೆದಿದ್ದಾರೆ ಎಂದು ವರದಿಯಾಗಿದೆ.

ಅರ್ಧಮಂಟಪ ಪ್ರವೇಶಿಸಲು ಅರ್ಚಕರನ್ನು ಹೊರತುಪಡಿಸಿ ಉಳಿದವರಿಗೆ ಅನುಮತಿ ಇಲ್ಲದ ಕಾರಣ ಅವರನ್ನು ಹೊರಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಈ ವಿಚಾರ ಗೊತ್ತಿಲ್ಲದೆ ಇಳಯರಾಜ ಅರ್ಧಮಂಟಪ ಪ್ರವೇಶಿಸಿದ್ದಾರೆ. ಅರ್ಚಕರು ಈ ವಿಚಾರವನ್ನು ಇಳಯರಾಜ ಅವರಿಗೆ ತಿಳಿಸಿದ ನಂತರ ಅವರು ಅಲ್ಲಿಂದ ಹೊರ ಬಂದಿದ್ದಾರೆ. ಬಳಿಕ ಇಳಯರಾಜ ಅವರಿಗೆ ಹೂವಿನ ಹಾರ ಹಾಕಿ ಗೌರವ ನೀಡಲಾಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂತಹ ಆಚರಣೆಗಳು ಮೇಲು ಕೀಳು ಎನ್ನುವುದನ್ನು ಮತ್ತೆ ಜೀವಂತವಾಗಿಡಲು ಕಾರಣವಾಗುತ್ತವೆ, ಜಾತಿ ಪದ್ಧತಿಯನ್ನು ಜೀವಂತವಾಗಿರಿಸುತ್ತವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಕೆಲವರು ಅಲ್ಲಿನ ಸಂಪ್ರದಾಯ ಇರುವುದೇ ಹಾಗೆ, ಅದನ್ನು ಅಲ್ಲಿನ ಪುರೋಹಿತರು ಪಾಲಿಸುತ್ತಿದ್ದಾರೆ. ತಿಳಿಯದೆ ಇಳಯರಾಜ ಒಳಗೆ ಪ್ರವೇಶ ಮಾಡಿದ್ದಾರೆ, ಅವರಿಗೆ ಅದನ್ನು ತಿಳಿಸಿದ ತಕ್ಷಣ ಹೊರಗೆ ಬಂದಿದ್ದಾರೆ. ವಿಡಿಯೋದಲ್ಲಿ ಯಾರೂ ಯಾರನ್ನೂ ಬಲವಂತಾಗಿ ಆಚೆ ಕಳಿಸಿಲ್ಲ ಅಥವಾ ನಿಂದಿಸಿಲ್ಲ. ಅಲ್ಲಿನ ಸಂಪ್ರದಾಯವನ್ನು ಪಾಲಿಸಲಾಗಿದೆ ಇದನ್ನು ವಿವಾದ ಮಾಡುವ ಅಗತ್ಯವಿಲ್ಲ ಎಂದು ಮತ್ತೊಂದಷ್ಟು ಜನ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ತಿರುವಣ್ಣಾಮಲೈ ಜಿಲ್ಲಾಧಿಕಾರಿಗೆ ಕೂಡ ದೇವಸ್ಥಾನದೊಳಗೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಈಗ ಇಳಯರಾಜ ಅವರಿಗೂ ಅರ್ಧಮಂಟಪ ಪ್ರವೇಶಿಸಲು ಬಿಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+