IITF 2026: ನವೆಂಬರ್ 13ರಿಂದ ದೆಹಲಿಯಲ್ಲಿ 'ವಿಕಾಸ್ ಔರ್ ವಿರಾಸತ್' ಥೀಮ್‌ನಡಿ ಅಂತಾರಾಷ್ಟ್ರೀಯ ವ್ಯಾಪಾರ ಮೇಳ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ 45ನೇ ಆವೃತ್ತಿ "ವಿಕಾಸ್ ಔರ್ ವಿರಾಸತ್" (ಅಭಿವೃದ್ಧಿ ಮತ್ತು ಪರಂಪರೆ) ಎಂಬ ಉಪಕ್ರಮವು ದೇಶದ ಆರ್ಥಿಕ ಪ್ರಗತಿ, ಪ್ರಾದೇಶಿಕ ಉದ್ಯಮಶೀಲತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ. ಈ ಆವೃತ್ತಿಯಡಿ ಪ್ರತಿ ವರ್ಷವು ಐಐಟಿಎಫ್ (IITF) ದೇಶದ ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸುತ್ತದೆ.

IITF ವತಿಯಿಂದ ಇದೇ 2026ರ ನವೆಂಬರ್ 13 ರಿಂದ 27ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ 45ನೇ ಆವೃತ್ತಿಯನ್ನು ಹಮ್ಮಿಕೊಂಡಿದೆ. ಭಾರತದ ಯಾವುದೇ ಪಟ್ಟಣಗಳು ​​ಮತ್ತು ನಗರಗಳಲ್ಲಿ ತಯಾರಾದ ಉತ್ಪನ್ನಗಳು, ಕುಶಲಕರ್ಮಿಗಳು ಪೀಳಿಗೆಯಿಂದ ಪೀಳಿಗೆಗೆ ಕಾಯ್ದುಕೊಂಡು ಬಂದಿರುವ ಕೌಶಲ್ಯಗಳು, ಕಾರ್ಯ ಚಟುವಟಿಕೆಗಳು, ನವ ಉದ್ಯಮವನ್ನು ಒಗ್ಗೋಡಿಸುವುದು ಇದರ ಗುರಿಯಾಗಿದೆ. ದೇಶದ ಭವ್ಯ ಪರಂಪರೆ, ವೈವಿಧ್ಯತೆಯ ಅನ್ವೇಷಣೆಗೆ, ಸಂದರ್ಶಕರಿಗೆ ಅವಕಾಶ ಕಲ್ಪಿಸುವ ಪ್ರಮುಖ ವೇದಿಕೆ ಇದಾಗಿದೆ.

IITF 2026

'ಇಂಡಿಯಾ ಟ್ರೇಡ್ ಪ್ರೊಮೋಷನ್ ಆರ್ಗನೈಸೇಶನ್' (ITPO) ಆಯೋಜಿಸುವ ಐಐಟಿಎಫ್ 2026, "ವಿಕಾಸ್ ಔರ್ ವಿರಾಸತ್" ಎಂಬ ವಿಷಯದ ಅಡಿಯಲ್ಲಿ ನಡೆಯಲಿದೆ. ಮೇಳದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ತಂತ್ರಜ್ಞಾನ, ಕೈಗಾರಿಕೆ ಮತ್ತು ಉದ್ಯಮಶೀಲತೆಯ ಬೆಳವಣಿಗೆ, ದೇಶದ ಅಸ್ಮಿತೆಯ ಮೂಲಾಧಾರವಾಗಿರುವ ಕಲೆ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಗಳು ಒಂದೇ ವೇದಿಕೆಯಡಿ ತರಲಾಗುತ್ತದೆ. ಹೀಗಾಗಿಯೇ ಈ ಕಾರ್ಯಕ್ರಮ ಪ್ರತಿ ವರ್ಷವು ದೇಶದ ಉದ್ಯಮಿಗಳು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

3,500ಕ್ಕೂ ಹೆಚ್ಚು ಪ್ರದರ್ಶಕರು

ಕಾರ್ಯಕ್ರಮದಲ್ಲಿ 3,500ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳು, ಕೇಂದ್ರ ಸಚಿವಾಲಯಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಎಂಎಸ್‌ಎಂಇಗಳು (MSMEs), ಸ್ಟಾರ್ಟ್‌ಅಪ್‌ಗಳು, ಕುಶಲಕರ್ಮಿಗಳು ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಸಂದರ್ಶಕರಿಗೆ ಇಲ್ಲಿ ಸಾಂಪ್ರದಾಯಿಕ ಜವಳಿ ಮತ್ತು ಕರಕುಶಲ ವಸ್ತುಗಳಿಂದ ಹಿಡಿದು, ದೈನಂದಿನ ಬಳಕೆಯ ವಸ್ತುಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳವರೆಗೆ ವೈವಿಧ್ಯಮಯ ಉತ್ಪನ್ನಗಳು, ಹೊಸ ಆಲೋಚನೆಗಳು ಮತ್ತು ಪ್ರಾದೇಶಿಕ ಅನುಭವಗಳು ಒಂದೇ ಸೂರಿನಡಿ ಸಿಗಲಿವೆ. ಜೊತೆಗೆ ಇಲ್ಲಿ ಮಕ್ಕಳಿಗೆ ಆಟವಾಡಲು, ಮನರಂಜನಾತ್ಮಕ ಚಟುವಟಿಕೆಗಳು ಇರಲಿವೆ. ಎಲ್ಲ ವಿಧದ ವಯೋಮಾನದವರಿಗೂ, ಎಲ್ಲ ವರ್ಗದವರಿಗೂ ಇಲ್ಲಿ ವಿಶೇಷ ಅನುಭವ ಸಿಗಲಿದೆ.

ಗ್ರಾಹಕರು, ಅನ್ವೇಷಕರು, ಐಐಟಿಎಫ್ ಉದ್ಯಮಿಗಳು, ಉತ್ಪಾದಕರು, ಖರೀದಿದಾರರು ಹೀಗೆ ಒಂದೇ ವೇದಿಕೆಯಡಿ ಎಲ್ಲರನ್ನು ಭೇಟಿ ಮಾಡಬಹುದು. ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಪ್ರಶ್ನೆಗಳನ್ನು ಕೇಳುವ ಜೊತೆಗೆ ಹೊಸ ಉತ್ಪನಗಳ ಕುರಿತು ತಿಳಿದುಕೊಳ್ಳಬಹುದು. ಹೊಸ ಹೊಸ ಉತ್ಪನ್ನಗಳು ಇಲ್ಲಿ ಗ್ರಾಹಕರಿಗೆ ಸುಲಲಿತವಾಗಿ ಸಿಗಲಿವೆ. ಇಲ್ಲಿಂದೇ ಭವಿಷ್ಯದ ವ್ಯವಹಾರ, ಉದ್ಯಮ ಬೆಳವಣಿಗೆಗೆ ಅಡಿಪಾಯವು ಸಿಗಲಿದೆ.

ಪ್ರದರ್ಶನ ಜೊತೆಗೆ ಹೊಸ ಅನುಭವಗಳು

ಮೇಳದಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ಅನುಭವ ನೀಡುವಂತಹ ಅವಕಾಶಗಳು ಇರಲಿವೆ. ಕಲಾವಿದರ ಪ್ರದರ್ಶನಗಳನ್ನು ಒಳಗೊಂಡ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು (ಟಿಕೆಟ್ ಆಧಾರಿತ) ಉತ್ಸಾಹಭರಿತ ಮನರಂಜನೆ ಸಿಗಲಿವೆ. ಹಾಗೆಯೇ, ಮಕ್ಕಳಿಗಾಗಿಯೇ ಮೀಸಲಾದ 'ಕಿಡ್ಸ್ ಪ್ಲೇ ಜೋನ್' (ಮಕ್ಕಳ ಆಟದ ವಲಯ) ಕೂಡ ಇರಲಿದೆ.

ಮೇಳದಲ್ಲಿ ತರಹೇವಾರಿ ರುಚಿತ ಆಹಾರಗಳು, ವಿವಿಧ ಬಗೆಯ ಪಾನೀಯ ವಲಯಗಳು (ಫುಡ್ ಕೋರ್ಟ್‌ಗಳು), ಸಂದರ್ಶಕರಿಗೆ ವಿಶ್ರಾಂತಿ ವ್ಯವಸ್ಥೆ, ಊಟ-ತಿಂಡಿ ಸೇವನೆಗೆ ಪ್ರತ್ಯೇಕ ಸ್ಥಳ, ಕರಕುಶಲ ವಸ್ತುಗಳು, ಉದ್ಯಮ ಅನ್ವೇಷಿಸಿ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪಾಲುದಾರ ರಾಜ್ಯಗಳು ಯಾವುವು?

ಈ ಕಾರ್ಯಕ್ರಮಕ್ಕೆ ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳು ಪಾಲುದಾರ ರಾಜ್ಯಗಳಾಗಿವೆ. ಅದರಲ್ಲೂ ದೆಹಲಿ, ಅಸ್ಸಾಂ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳವು ಕೇಂದ್ರೀಕೃತ ರಾಜ್ಯಗಳಾಗಿವೆ. ಆಯಾ ರಾಜ್ಯಗಳ ಪ್ರಾದೇಶಿಕ ಕೈಗಾರಿಕೆಗಳು, ಸಾಂಪ್ರದಾಯಿಕ ಕರಕುಶಲತೆ ಮತ್ತು ಸ್ಥಳೀಯ ಉತ್ಪನ್ನಗಳು ಕಾರ್ಯಕ್ರಮದ ಮೂಲಕ ದೇಶದ ವಿಶಾಲ ಮಾರುಕಟ್ಟೆಗಳಿಗೆ ಪರಿಚಯವಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

"ವಿಕಾಸ್ ಔರ್ ವಿರಾಸತ್" ಅಡಿಯಲ್ಲಿ ವಿವಿಧ ಪ್ರದರ್ಶನಗಳು ನಡೆಯಲಿವೆ. ಅದರಲ್ಲಿ ಸಾಂಪ್ರದಾಯಿಕ ಕೌಶಲ್ಯಗಳು, ಆಧುನಿಕ ಉದ್ಯಮ ಒಟ್ಟಿಗೆ ಮೇಲೈಸುವುದನ್ನು ಸಾಬೀತುಪಡಿಸಲಿದೆ. ಸಣ್ಣ ಉದ್ದಿಮೆದಾರರು, ನೇಕಾರರು, ಮಹಿಳಾ ಉದ್ಯಮಿಗಳು, ಕಲಾವಿದರು, ಸಣ್ಣ ವ್ಯವಹಾರಗಳಿಗೆ ಈ ಕಾರ್ಯಕ್ರಮ ಹೊಸ ಗ್ರಾಹಕರನ್ನು ಸೃಷ್ಟಿಸಲಿದೆ.

ಉದ್ಯಮ ಆರಂಭಿಸುವವರಿಗೆ ಅವಕಾಶ

ನವೆಂಬರ್‍‌ನಲ್ಲಿ ನಡೆಯಲಿರುವ ಈ ಆವೃತ್ತಿಯು ಸ್ಟಾರ್ಟ್-ಅಪ್‌ಗಳ ಆರಂಭಕ್ಕೆ, ನವ ಉದ್ಯಮ ಪ್ರಾರಂಭಿಸಲು ಸ್ಪೂರ್ತಿಯಾಗಲಿದೆ. ನವೋದ್ಯಮಗಳು ತಮ್ಮ ಕೆಲಸ ಮತ್ತು ಪರಿಹಾರಗಳನ್ನು ಪ್ರಸ್ತುತಪಡಿಸಲು ಮೀಸಲಾದ ಸ್ಥಳವಾಗಿ ಯೋಜಿಸಲಾಗಿದೆ. ರಿಯಾಯಿತಿ ದರಗಳಲ್ಲಿ ನವೋದ್ಯಮಿಗಳು ಪಾಲ್ಗೊಳ್ಳುವಂತೆ ಮಾಡಲಾಗಿದೆ. ತಂತ್ರಜ್ಞಾನ, ರೊಬೊಟಿಕ್ಸ್ ಮತ್ತು ಯಂತ್ರ ಕಲಿಕೆ, ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣಾ ಮತ್ತು ಐಡೆಕ್ಸ್, ವಾಯುಯಾನ, ನಾವೀನ್ಯತೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಇಲ್ಲಿರಲಿದ್ದು, ಅವರೆಲ್ಲ ಮಾರ್ಗದರ್ಶನ ನೀಡಲಿದ್ದಾರೆ.

ಅಷ್ಟೇ ಅಲ್ಲದೇ ಉತ್ಪನ್ನಗಳ ರಫ್ತಿಗೆ ಅನುಕೂಲವಾಗುವಂತೆ ಅಂತಾರಾಷ್ಟ್ರೀಯ ಮಾರಾಟಗಾರರು, ಉದ್ಯಮಿಗಳ ಭೇಟಿಗೆ ಮೇಳ ಸಾಕ್ಷಿಯಾಗಲಿದೆ. ಇದರಿಂದ ದೇಶಿಯ ಉತ್ಪನ್ನಗಳು ವಿದೇಶಗಳ ಮಾರುಕಟ್ಟೆಗೂ ವಿಸ್ತರಣೆ ಆಗಲು ಸಹಾಯವಾಗುತ್ತದೆ. ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಭಾವ್ಯ ಪಾಲುದಾರರನ್ನು ಭೇಟಿ ಮಾಡಲು ಮತ್ತು ದೇಶೀಯ ಮಾರುಕಟ್ಟೆಯನ್ನು ಮೀರಿ ಸಂಪರ್ಕಗಳನ್ನು ಅನ್ವೇಷಿಸಲು ಅವಕಾಶಗಳನ್ನು ನೀಡುತ್ತದೆ.

IITF 2026ಗೆ ಭೇಟಿಗೆ ಪ್ಲ್ಯಾನ್ ಮಾಡಿ

IITF 2026 ನವೆಂಬರ್ 13 ರಿಂದ 27 ನಡೆಯಲಿರುವ ಈ ಪ್ರದರ್ಶನವನ್ನು ಮೊದಲ ದಿನ ಗಣ್ಯರು ಉದ್ಘಾಟಿಸಲಿದ್ದಾರೆ. ನವೆಂಬರ್ 14 ರಿಂದ 18 ರವರೆಗೆ ವ್ಯಾಪಾರ ಸಂದರ್ಶಕರಿಗೆ ನಿಗದಿ ಆಗಿದೆ. ಬಳಿಕ ನವೆಂಬರ್ 19 ರಿಂದ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಲ್ಲಿ ತಯಾರಕರು, ವ್ಯಾಪಾರಿಗಳು, ಗ್ರಾಹಕರು, ವಿತರಕರು, ಉದ್ಯಮಿಗಳು ನಡುವೆ ಉತ್ತಮ ಸಂಬಂಧ ಏರ್ಪಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಕುಟುಂಬಗಳು, ವಿದ್ಯಾರ್ಥಿಗಳು, ಖರೀದಿದಾರರು ಮತ್ತು ಭಾರತದ ಉತ್ಪನ್ನಗಳು, ಸಂಸ್ಕೃತಿ ಮತ್ತು ಉದ್ಯಮವನ್ನು ಅನ್ವೇಷಿಸಲು ಆಸಕ್ತವುಳ್ಳವರು ಈ ಕಾರ್ಯಕ್ರಮಕ್ಕೆ ಬರಬಹುದು. ಟಿಕೆಟ್ ಬೆಲೆಗಳು, ಪ್ರವೇಶ ವ್ಯವಸ್ಥೆ, ಸಂದರ್ಶಕರ ಮಾಹಿತಿಗಾಗಿ ITPO ಯ ಅಧಿಕೃತ ಪರಿಶೀಲನೆಗೆ ಸೂಚಿಸಲಾಗಿದೆ. ನೀವು ಇಲ್ಲಿಗೆ ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣ ಮಾರ್ಗವಾಗಿ ಭಾರತ್ ಮಂಟಪಂಗೆ ಆಗಮಿಸಬಹುದು ಎಂದು ತಿಳಿಸಲಾಗಿದೆ.

ಪ್ರಗತಿ ಮತ್ತು ಪರಂಪರೆಯ ಆಚರಣೆ

"ವಿಕಾಸ್ ಔರ್ ವಿರಾಸತ್" (Vikas aur Virasat) ಎಂಬ ಪರಿಕಲ್ಪನೆಯ ಮೂಲಕ ಭವಿಷ್ಯದ ಅವಕಾಶಗಳನ್ನು ಸೃಷ್ಟಿಸುವ ಜತೆ ಪರಂಪರೆಗಳಿಂದ ಶಕ್ತಿ ಪಡೆದುಕೊಳ್ಳುವ ಪ್ರಮುಖ ಪ್ರಯತ್ನ ದಿಆಗಿದೆ. ಹೆಚ್ಚಿನ ಮಾಹಿತಿಗಾಗಿ, www.itpo.gov.in/iitf ಜಾಲತಾಣಕ್ಕೆ ಭೇಟಿ ನೀಡುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+