ಭಾರತೀಯ ಕೃಷಿಯಲ್ಲಿ ಕ್ರಾಂತಿ: ಸುಸ್ಥಿರ ಮತ್ತು ಸ್ವಾವಲಂಬಿ ರಸಗೊಬ್ಬರ ವ್ಯವಸ್ಥೆ ನಿರ್ಮಾಣದಲ್ಲಿ 'ಇಫ್ಕೋ' ಪಾತ್ರ

ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ವಲಯವು ಲಕ್ಷಾಂತರ ರೈತರಿಗೆ ಆಧಾರವಾಗಿದ್ದು, 1.4 ಶತಕೋಟಿಗೂ ಹೆಚ್ಚು ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತಿದೆ. ದೇಶವು ಕೃಷಿ ಆಧುನೀಕರಣ ಮತ್ತು ಗ್ರಾಮೀಣಾಭಿವೃದ್ಧಿಯತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ರಸಗೊಬ್ಬರ ಉದ್ಯಮವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ, ಭಾರತೀಯ ಕೃಷಿಯಲ್ಲಿ ಸುಸ್ಥಿರತೆ, ನಾವೀನ್ಯತೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತಿರುವ ಪ್ರಮುಖ ಸಂಸ್ಥೆಗಳಲ್ಲಿ 'ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್' (IFFCO - ಇಫ್ಕೋ) ಮುಂಚೂಣಿಯಲ್ಲಿದೆ.

IFFCO

ರೈತಪರ ಕಾಳಜಿಯೊಂದಿಗೆ ಸಹಕಾರ ಸಂಸ್ಥೆಯಾಗಿ ಸ್ಥಾಪನೆಯಾದ ಇಫ್ಕೋ, ಇಂದು ವಿಶ್ವದ ಅತಿದೊಡ್ಡ ರಸಗೊಬ್ಬರ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ದಶಕಗಳಿಂದ ಕೃಷಿ ಉತ್ಪಾದಕತೆ ಹೆಚ್ಚಿಸುವ ಜೊತೆಗೆ ಜವಾಬ್ದಾರಿಯುತ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವಲ್ಲಿ ಸಂಸ್ಥೆ ಶ್ರಮಿಸುತ್ತಿದೆ. ಕೇವಲ ರಸಗೊಬ್ಬರ ಉತ್ಪಾದನೆಗಷ್ಟೇ ಸೀಮಿತವಾಗದೆ, ರೈತರ ಸಬಲೀಕರಣ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆ ಮತ್ತು ಭಾರತದ ದೀರ್ಘಕಾಲೀನ ಕೃಷಿ ಸುಸ್ಥಿರತೆಗೆ ಇಫ್ಕೋ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ.

ಬೆಳೆ ಉತ್ಪಾದಕತೆ ಕಾಯ್ದುಕೊಳ್ಳುವಲ್ಲಿ ರಸಗೊಬ್ಬರ ವ್ಯವಸ್ಥೆಯ ಪಾತ್ರ ಪ್ರಮುಖವಾದದ್ದು. ಆದರೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಆಮದು ಅವಲಂಬನೆ, ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದಾಗುವ ಪರಿಸರ ನಾಶದಂತಹ ಸವಾಲುಗಳನ್ನು ಈ ವಲಯ ಎದುರಿಸುತ್ತಿದೆ. ತನ್ನ ಬೃಹತ್ ಉತ್ಪಾದನಾ ಸಾಮರ್ಥ್ಯ, ರೈತ ಸಂಪರ್ಕ ಕಾರ್ಯಕ್ರಮಗಳು ಮತ್ತು ನವೀನ ಕೃಷಿ ಪರಿಹಾರಗಳ ಮೂಲಕ ಇಫ್ಕೋ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಗ್ರಾಮೀಣ ಭಾರತದ ಮೂಲೆ ಮೂಲೆಗೂ ವಿಸ್ತರಿಸಿರುವ ತನ್ನ ಬೃಹತ್ ಸಹಕಾರ ಜಾಲದ ಮೂಲಕ ಕೋಟ್ಯಂತರ ರೈತರಿಗೆ ಗುಣಮಟ್ಟದ ಕೃಷಿ ಪರಿಕರಗಳು, ತಾಂತ್ರಿಕ ಮಾರ್ಗದರ್ಶನ ಹಾಗೂ ಆಧುನಿಕ ಕೃಷಿ ಜ್ಞಾನವನ್ನು ಒದಗಿಸುತ್ತಿದೆ. ರೈತರನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಬೆಳೆಯುತ್ತಿರುವ ಇಫ್ಕೋ, ಗ್ರಾಮೀಣ ಸಮುದಾಯಗಳಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ.

ರೂಪಾಂತರದತ್ತ ನಾಯಕತ್ವ

ಅಧ್ಯಕ್ಷರಾದ ದಿಲೀಪ್ ಸಂಘಾನಿ ಅವರ ನಾಯಕತ್ವದಲ್ಲಿ, ಇಫ್ಕೋ ಸುಸ್ಥಿರತೆ, ನಾವೀನ್ಯತೆ ಮತ್ತು ರೈತರ ಸಬಲೀಕರಣದ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ. ಭಾರತದ ಕೃಷಿ ವ್ಯವಸ್ಥೆಯನ್ನು ಸದೃಢಗೊಳಿಸಲು ಸಹಕಾರ ಮೌಲ್ಯಗಳೊಂದಿಗೆ ತಾಂತ್ರಿಕ ಪ್ರಗತಿಯನ್ನು ಬೆಸೆಯುವ ಅಗತ್ಯವನ್ನು ಅವರು ಪ್ರತಿಪಾದಿಸುತ್ತಿದ್ದಾರೆ. ಸ್ವಾವಲಂಬನೆ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿಗೆ ಸಂಬಂಧಿಸಿದ ರಾಷ್ಟ್ರೀಯ ಆದ್ಯತೆಗಳಿಗೆ ಇವರ ದೂರದೃಷ್ಟಿ ಪೂರಕವಾಗಿದೆ.

ಇವರ ಮಾರ್ಗದರ್ಶನದಲ್ಲಿ, ಮುಂದಿನ ಪೀಳಿಗೆಯ ರಸಗೊಬ್ಬರ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ದೇಶಾದ್ಯಂತ ಉತ್ತೇಜಿಸಲಾಗುತ್ತಿದೆ. ಇಫ್ಕೋ ಕೇವಲ ರಸಗೊಬ್ಬರ ತಯಾರಕ ಕಂಪನಿಯಾಗಿ ಉಳಿಯದೆ, ಭಾರತದ ಕೃಷಿ ರೂಪಾಂತರದ ಪಯಣದಲ್ಲಿ ಆಯಕಟ್ಟಿನ ಪಾಲುದಾರನಾಗಿ ಹೊರಹೊಮ್ಮಲು ದಿಲೀಪ್ ಸಂಘಾನಿ ಅವರ ನಾಯಕತ್ವ ಪ್ರಮುಖ ಕಾರಣವಾಗಿದೆ.

ನ್ಯಾನೊ ರಸಗೊಬ್ಬರಗಳ ಮೂಲಕ ಕ್ರಾಂತಿ

ಇತ್ತೀಚಿನ ವರ್ಷಗಳಲ್ಲಿ ಇಫ್ಕೋ ಸಾಧಿಸಿದ ಅತಿದೊಡ್ಡ ಮೈಲಿಗಲ್ಲು ಎಂದರೆ 'ನ್ಯಾನೊ ಯೂರಿಯಾ' (Nano Urea) ಮತ್ತು 'ನ್ಯಾನೊ ಡಿಎಪಿ' (Nano DAP) ಯ ಅಭಿವೃದ್ಧಿ. ರಸಗೊಬ್ಬರ ಉತ್ಪಾದನೆ ಮತ್ತು ಬಳಕೆಯ ವಿನ್ಯಾಸವನ್ನೇ ಇದು ಬದಲಾಯಿಸಿದೆ. ಸಾಂಪ್ರದಾಯಿಕ ರಸಗೊಬ್ಬರಗಳ ಬಳಕೆಯಿಂದಾಗುವ ಪರಿಸರ ಹಾನಿಯನ್ನು ಕಡಿಮೆ ಮಾಡಿ, ಪೋಷಕಾಂಶಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಈ ನ್ಯಾನೊ ರಸಗೊಬ್ಬರಗಳನ್ನು ವಿನ್ಯಾಸಗೊಳಿಸಲಾಗಿದೆ.

ಕಡಿಮೆ ಪ್ರಮಾಣದ ಬಳಕೆ, ಮಣ್ಣಿನ ಫಲವತ್ತತೆ ರಕ್ಷಣೆ, ಜಲ ಮಾಲಿನ್ಯ ತಡೆಗಟ್ಟುವಿಕೆ ಹಾಗೂ ಸಾಗಾಟ ಮತ್ತು ಶೇಖರಣಾ ವೆಚ್ಚವನ್ನು ತಗ್ಗಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತಿವೆ. ಹವಾಮಾನ ಬದಲಾವಣೆ ಮತ್ತು ಆಹಾರ ಭದ್ರತೆಯಂತಹ ಜಾಗತಿಕ ಸವಾಲುಗಳ ನಡುವೆ ಇಂತಹ ಆವಿಷ್ಕಾರಗಳು ಭಾರತೀಯ ಕೃಷಿಯ ಭವಿಷ್ಯವನ್ನು ಬದಲಾಯಿಸಲಿವೆ.

ಆತ್ಮನಿರ್ಭರ್ ಭಾರತ್‌ಗೆ ಬೆಂಬಲ

ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ಅಭಿಯಾನದಡಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಸರ್ಕಾರದ ಗುರಿಗೆ ಇಫ್ಕೋ ಹೆಗಲುಕೊಟ್ಟಿದೆ. ರಸಗೊಬ್ಬರ ವಲಯವು ಐತಿಹಾಸಿಕವಾಗಿ ಆಮದು ಕಚ್ಚಾ ವಸ್ತುಗಳನ್ನು ಅವಲಂಬಿಸಿದೆ.

ಆದರೆ, ಇಫ್ಕೋ ತನ್ನ ಸಂಶೋಧನಾ ಸಾಮರ್ಥ್ಯ ಮತ್ತು ಸುಧಾರಿತ ತಂತ್ರಜ್ಞಾನಗಳ ಮೂಲಕ ದೇಶೀಯ ಉತ್ಪಾದನಾ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಿದ್ದು, ಕೃಷಿ ಆರ್ಥಿಕತೆಯನ್ನು ಸ್ವಾವಲಂಬಿಯಾಗಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಜೊತೆಗೆ, ಅಂತಾರಾಷ್ಟ್ರೀಯ ಸಹಭಾಗಿತ್ವದ ಮೂಲಕ ಜ್ಞಾನ ವಿನಿಮಯ ಮತ್ತು ತಾಂತ್ರಿಕ ಪ್ರಗತಿಗೂ ಒತ್ತು ನೀಡಿದೆ.

ರಸಗೊಬ್ಬರಗಳನ್ನು ಮೀರಿದ ಸುಸ್ಥಿರತೆ

ಆಧುನಿಕ ಕೃಷಿಯ ಸುಸ್ಥಿರತೆ ಎಂದರೆ ಕೇವಲ ಬೆಳೆ ಇಳುವರಿ ಹೆಚ್ಚಿಸುವುದಲ್ಲ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ, ಇಂಗಾಲದ ಹೊರಸೂಸುವಿಕೆ ಕಡಿತ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಜವಾಬ್ದಾರಿಯುತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದೂ ಆಗಿದೆ. ಪರಿಸರ ಸಂರಕ್ಷಣಾ ಉಪಕ್ರಮಗಳು, ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಶಿಕ್ಷಣದ ಮೂಲಕ ಗ್ರಾಮೀಣ ಭಾರತದ ಮಾಹಿತಿ ಕೊರತೆಯನ್ನು ನೀಗಿಸಲು ಇಫ್ಕೋ ಮುಂದಾಗಿದೆ. ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ರೈತರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ.

ಮುಂದಿನ ಹಾದಿ

ಭಾರತೀಯ ಕೃಷಿ ವಲಯವು ಆಧುನೀಕರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಆಹಾರ ಭದ್ರತೆ ಮತ್ತು ಗ್ರಾಮೀಣಾಭಿವೃದ್ಧಿಯ ಭವಿಷ್ಯವನ್ನು ರೂಪಿಸುವಲ್ಲಿ ಇಫ್ಕೋ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಅಧ್ಯಕ್ಷ ದಿಲೀಪ್ ಸಂಘಾನಿ ಅವರ ನಾಯಕತ್ವದಲ್ಲಿ, ಇಫ್ಕೋ ತಾಂತ್ರಿಕ ನಾವೀನ್ಯತೆ ಹಾಗೂ ಸಹಕಾರ ತತ್ವಗಳನ್ನು ಮೇಳೈಸಿಕೊಂಡು ಬಲಿಷ್ಠ, ಹಸಿರು ಮತ್ತು ಸ್ವಾವಲಂಬಿ ಕೃಷಿ ಆರ್ಥಿಕತೆಯನ್ನು ನಿರ್ಮಿಸಲು ಶ್ರಮಿಸುತ್ತಿದೆ. ಜಾಗತಿಕ ಕೃಷಿ ಸವಾಲುಗಳ ನಡುವೆಯೂ ನಿರಂತರ ಆವಿಷ್ಕಾರಗಳು ಮತ್ತು ರೈತಪರ ಕಾಳಜಿಯೊಂದಿಗೆ, ಸುಸ್ಥಿರ ಮತ್ತು ಸಮೃದ್ಧ ಕೃಷಿ ಭವಿಷ್ಯವನ್ನು ರೂಪಿಸುವ ಭಾರತದ ಕನಸಿಗೆ ಇಫ್ಕೋ ಆಸರೆಯಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+