ಏರ್ ಟಿಕೆಟ್ ಬುಕ್ಕಿಂಗಿಗೆ ಗುರುತಿನ ಚೀಟಿ ಕಡ್ಡಾಯ !
ಬೆಂಗಳೂರು, ಸೆ. 07: ದೇಶಿ ವಿಮಾನಯಾನದ ಏರ್ ಟಿಕೆಟ್ ಕಾಯ್ದಿರಿಸುವಿಕೆಗೂ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಶುಕ್ರವಾರದಂದು ಪೂರ್ಣ ಪ್ರಮಾಣದ ಆದೇಶ ಪ್ರಕಟಿಸಲಾಗುತ್ತದೆ.
ಈ ಹೊಸ ನಿಯಮಗಳು ಜಾರಿಗೊಂಡ ಬಳಿಕ, ಆಧಾರ್, ಡ್ರೈವಿಂಗ್ ಲೈಸನ್ಸ್, ಪಾಸ್ ಪೋರ್ಟ್ ಅಥವಾ ಪ್ಯಾನ್ ಕಾರ್ಡ್ ಬಳಸಿ ವಿಮಾನಯಾನ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಈ ಪಟ್ಟಿಗೆ ಮತದಾರರ ಗುರುತಿನ ಚೀಟಿಯನ್ನು ಸೇರಿಸುವ ಸಾಧ್ಯತೆಯಿದೆ. ಡೊಮೆಸ್ಟಿಕ್ ಫ್ಲೈಟ್ ಟಿಕೆಟ್ ಬುಕ್ಕಿಂಗ್ ನಲ್ಲಿ ಭಾರಿ ಬದಲಾವಣೆ ನಿರೀಕ್ಷಿಸಲಾಗಿದೆ.

ಅಂತರಾಷ್ಟ್ರೀಯ ವಿಮಾನಗಳ ಟಿಕೆಟ್ ಬುಕ್ಕಿಂಗ್ ಗೆ ಪಾಸ್ ಪೋರ್ಟ್ ಇರಲೇಬೇಕು. ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಮಂಗೋಲಿಯಾದಲ್ಲಿ ನಡೆದ ಸಭೆಯಲ್ಲಿ ಜಾಗತಿಕ ನಿಯಂತ್ರಕರ ಜೊತೆಗೆ ಡಿಜಿಸಿಎ ಚರ್ಚೆ ನಡೆಸಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು ಹೇಳಿದ್ದಾರೆ.
ಗುರುತಿನ ಚೀಟಿಯನ್ನು ಬಳಸಿಕೊಂಡು ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಪ್ರಯಾಣಿಸುವುದನ್ನು ತಪ್ಪಿಸಲು ಈ ನಿಯಮ ಜಾರಿ ಮಾಡಲಾಗ್ತಿದೆ. ಆಧಾರ್ ನಂಬರ್ ಸಲ್ಲಿಸಿದವರಿಗೆ ಶೀಘ್ರವೇ ಡಿಜಿಟಲ್ ಬೋರ್ಡಿಂಗ್ ಕಾರ್ಡ್ ನೀಡಲಾಗುತ್ತದೆ ಎಂದು ಸಿನ್ಹಾ ಹೇಳಿದರು.












Click it and Unblock the Notifications