IBPS ಕ್ಲರ್ಕ್ ಪರೀಕ್ಷೆ ಫಲಿತಾಂಶ ಪ್ರಕಟ, ಡೌನ್ಲೌಡ್ ಮಾಡೋದು ಹೇಗೆ?
ನವದೆಹಲಿ, ಮೇ 20: ರಾಷ್ಟ್ರೀಕೃತ ಬ್ಯಾಂಕ್‌ಗಳ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು (ಐಬಿಪಿಎಸ್) ನಡೆಸಿದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ, ಪ್ರೊಬೇಷನರಿ ಅಧಿಕಾರಿ( PO), ವಿಶೇಷ ಅಧಿಕಾರಿ(SO), ಕ್ಲರ್ಕ್ ಪರೀಕ್ಷೆ 2020ರ ಫಲಿತಾಂಶವನ್ನು ಅಧಿಕೃತ ವೆಬ್ ತಾಣದಲ್ಲಿ ನೀಡಲಾಗಿದೆ.
Recommended Video
ಐಬಿಪಿಎಸ್ ಕ್ಲರ್ಕ್ ಪೂರ್ವಭಾವಿ ಪರೀಕ್ಷೆಯನ್ನು ಡಿಸೆಂಬರ್ 7, 8, 14 ಹಾಗ್ 21ರಂದು ನಡೆಸಲಾಗಿತ್ತು. ಮುಖ್ಯ ಪರೀಕ್ಷೆ ಜನವರಿ18, 2020ರಂದು ನಡೆಸಲಾಯಿತು.
ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ವೆಬ್ ತಾಣದಲ್ಲಿ ತಮ್ಮ ನೋಂದಣಿ ಸಂಖ್ಯೆ, ರೋಲ್ ನಂಬರ್, ಹುಟ್ಟಿದ ದಿನಾಂಕ, ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಸ್ಕೋರ್ ಕಾರ್ಡ್ ಡೌನ್ಡೋಡ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಅಭ್ಯರ್ಥಿಗಳ ಮೀಸಲಾತಿ ಪಟ್ಟಿಯನ್ನು ಕೂಡಾ ಐಬಿಪಿಎಸ್. ಇನ್ ವೆಬ್ ತಾಣದಲ್ಲಿ ನೀಡಲಾಗಿದೆ.

ಫಲಿತಾಂಶ ನೋಡಲು ನೇರ ಲಿಂಕ್:
* IBPS PO Result 2020 (https://www.ibps.in/crp-po-mt-viii/)
* IBPS Clerk Result 2020 (https://www.ibps.in/crp-clerical-cadre-viii/)
* IBPS SO Result 2020 (https://www.ibps.in/crp-specialist-officers-viii/)
ಐಬಿಪಿಎಸ್ ವೆಬ್ ಸೈಟಿನಲ್ಲಿ ಫಲಿತಾಂಶ ನೋಡುವುದು ಹೇಗೆ?
* ಐಬಿಪಿಎಸ್ ವೆಬ್ ತಾಣ (ibps.in) ಕ್ಕೆ ಭೇಟಿ ನೀಡಿ
* ನೋಂದಣಿ ಸಂಖ್ಯೆ, ರೋಲ್ ನಂಬರ್, ಹುಟ್ಟಿದ ದಿನಾಂಕ, ಪಾಸ್ವರ್ಡ್ ನಮೂದಿಸಿ
* ಲಾಗಿನ್ ಹೆಸರು, ಪಾಸ್ವರ್ಡ್ ಹಾಕಿ, ಲಾಗಿನ್ ಆಗಿ
ಲಾಗಿನ್ ಆದ ಬಳಿಕ ಫಲಿತಾಂಶ ಡೌನ್ ಲೋಡ್ ಮಾಡಿಕೊಳ್ಳಿ
* Click here to View Provisional Allotment under Reserve List for CRP Clerks-VIII ಎಂಬುದರ ಮೇಲೆ ಕ್ಲಿಕ್ ಮಾಡಿ
* ಐಬಿಪಿಎಸ್ ಕ್ಲರ್ಕ್ ರಿಸರ್ವ್ ಪಟ್ಟಿಯನ್ನು ಕೂಡಾ ಡೌನ್ ಲೊಡ್ ಮಾಡಿಕೊಳ್ಳಬಹುದು.












Click it and Unblock the Notifications