ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ
ನವದೆಹಲಿ, ಜೂನ್ 03: ಭಾರತೀಯ ವಾಯುಸೇನೆಗೆ ಸೇರಿದ ಏರ್ ಕ್ರಾಫ್ಟ್ ವೊಂದು ಸಂಪರ್ಕ ಕಳೆದುಕೊಂಡಿದೆ. ಚೀನಾ ಗಡಿಭಾಗದಲ್ಲಿ ಸಂಚರಿಸುತ್ತಿದ್ದಾಗ ಕೊನೆಯ ಬಾರಿಗೆ ಸಂಪರ್ಕ ಸಾಧಿಸಲಾಗಿತ್ತು.
ಕಳೆದ ಎರಡು ಗಂಟೆಗಳಿಂದ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ.ಐಎಎಫ್ ಎಎನ್ 32 ಏರ್ ಕ್ರಾಫ್ಟ್ ನಲ್ಲಿ 13 ಮಂದಿ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
IAF AN-32 Aircraft overdue for more than two hours in Menchuka air field of Arunachal Pradesh with 13 persons on board. The aircraft last contacted ground sources at 1 PM today after taking off from Jorhat airbase at 12:25 pm.
— ANI (@ANI) June 3, 2019
8 ಸಿಬ್ಬಂದಿ ಹಾಗೂ 5 ಮಂದಿ ಪ್ರಯಾಣಿಕರಿದ್ದ Antonov AN-32 ಮಿಲಿಟರಿ ಸಾರಿಗೆ ಏರ್ ಕ್ರಾಫ್ ಇಂದು (ಜೂನ್ 03) ಮಧ್ಯಾಹ್ನ 1 ಗಂಟೆ ಸಾರಿಗೆ ಅಸ್ಸಾಂನ ಜೋಹ್ರಾತ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು.

ಚೀನಾ ಗಡಿಭಾಗದಲ್ಲಿರುವ ಮೆಂಚುಕಾ ವಾಯುನೆಲೆಗೆ ತಲುಪಬೇಕಾಗಿತ್ತು. ಆದರೆ, ಅರುಣಾಚಲಪ್ರದೇಶದ ಮೆಚುಕಾ ಕಣಿವೆ ಪ್ರದೇಶದಲ್ಲಿ ಹಾರಾಟ ಮಾಡುವಾಗ ಸಂಪರ್ಕ ಕಡೆದುಕೊಂಡಿದೆ.
ಜುಲೈ2016ರಲ್ಲಿ ಭಾರತೀಯ ವಾಯುಸೇನೆಯ ಎಎನ್ 32 ವಿಮಾನವೊಂದು ಬೆಂಗಾಲ ಕೊಲ್ಲಿಯ ಮೇಲೆ ಹಾರುವಾಗ ನಾಪತ್ತೆಯಾಗಿತ್ತು. ಆ ವಿಮಾನದಲ್ಲಿ 29 ಮಂದಿ ಇದ್ದರು. ಚೆನ್ನೈನಿಂದ ಹೊರಟ್ಟಿದ್ದ ಈ ವಿಮಾನವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತಲುಪಬೇಕಾಗಿತ್ತು. ಆದರೆ, ವಿಮಾನದ ಬಗ್ಗೆ ಸುಳಿವು ಸಿಗಲೇ ಇಲ್ಲ, ಸೆಪ್ಟೆಂಬರ್ 2016ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.












Click it and Unblock the Notifications