ನಾನೆಂದಿಗೂ ರಾಜಕೀಯಕ್ಕೆ ಬರೋಲ್ಲ: ನ್ಯಾ.ಚಲಮೇಶ್ವರ್
ನವದೆಹಲಿ, ಜೂನ್ 23: "ನಾನು ಎಂದಿಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜಕೀಯಕ್ಕೆ ಪ್ರವೇಶಿಸೋಲ್ಲ" ಎಂದು ನ್ಯಾ ಜಸ್ತಿ ಚಲಮೇಶ್ವರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಚಲಮೇಶ್ವರ್ ನಿನ್ನೆ(ಜೂನ್ 22) ತಮ್ಮ ಸೇವೆಯಿಂದ ಅಧಿಕೃತವಾಗಿ ನಿವೃತ್ತಿ ಪಡೆದರು. ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರಲ್ಲಿ ಎರಡನೇ ಸ್ಥಾನದಲ್ಲಿರುವ ಚಲಮೇಶ್ವರ್ ಕಳೆದ ಏಳು ವರ್ಷಗಳಲಿಂದ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಗಳು ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ತಾವು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ. ನನಗೆ ಅದು ಇಷ್ಟವಿಲ್ಲ. ಯಾವುದೇ ರೀತಿಯ ಚುನಾವಣೆಯಲ್ಲೂ ಭಾಗವಹಿಸೋಲ್ಲ ಎಂದಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಪ್ರಕರಣಗಳ ಹಂಚಿಕೆ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಹಾಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ತಿರುಗಿಬಿದ್ದಿದ್ದ ನಾಲ್ವರು ವಕೀಲರ ಪೈಕಿ ಚಲಮೇಶ್ವರ್ ಪ್ರಮುಖರು. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಅವರು ನೇರವಾಗಿ ದೂರಿದ್ದರು.












Click it and Unblock the Notifications