• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಗೆ 'ಡಿಫರೆಂಟ್' ಆಗಿ ಧನ್ಯವಾದ ಸಲ್ಲಿಸಿದ ನವಜೋತ್ ಸಿಧು

|
Google Oneindia Kannada News

ನವದೆಹಲಿ, ನ 10: ಕರ್ತಾರ್ ಪುರ ಕಾರಿಡಾರ್ ಯೋಜನೆಯ ಉದ್ಘಾಟನೆಯ ವೇಳೆ, ಕಾಂಗ್ರೆಸ್ ಮುಖಂಡ, ನವಜೋತ್ ಸಿಂಗ್ ಸಿಧು, ಪ್ರಧಾನಿ ನರೇಂದ್ರ ಮೋದಿಗೆ ವಿಭಿನ್ನವಾಗಿ ಧನ್ಯವಾದವನ್ನು ಹೇಳಿದ್ದಾರೆ.

"ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಮ್ಮಿಬ್ಬರ ನಡುವೆ ರಾಜಕೀಯವಾಗಿ ಭಿನ್ನಾಭಿಪ್ರಾಯ ಇರಬಹುದು. ನನ್ನ ಜೀವನ ಗಾಂಧಿ ಕುಟುಂಬಕ್ಕೆ ಮುಡುಪಾಗಿರಬಹುದು. ಮುನ್ನಾಭಾಯಿ ಎಂಬಿಬಿಎಸ್ ಶೈಲಿನಲ್ಲಿ ಮೋದಿಗೆ ಅಪ್ಪುಗೆಯನ್ನು ಕಳುಹಿಸುತ್ತೇನೆ" ಎಂದು ಸಿಧು ಹೇಳಿದ್ದಾರೆ.

ಮೋದಿ ಸರ್ಕಾರದ ಮೇಲೆ ಸಿಧು ಕೋಪಮೋದಿ ಸರ್ಕಾರದ ಮೇಲೆ ಸಿಧು ಕೋಪ

ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿಯನ್ನು ಸಿಧು ಮುಕ್ತಕಂಠದಿಂದ ಹೊಗಳಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ, ಸಿಧುಗೆ ಪ್ರೀತಿಯ ಸ್ವಾಗತವನ್ನು ಕೋರಿದ್ದಾರೆ. ಕಾರಿಡಾರ್ ಉದ್ಘಾಟನೆಗೆ ಆಗಮಿಸುತ್ತಿದ್ದಾಗ, " ಹಮಾರ ಸಿಧು ಕಿದರ್ ಹೇ" ಎಂದು ಇಮ್ರಾನ್, ಅಧಿಕಾರಿಗಳನ್ನು ಕೇಳಿದ್ದಾರೆ.

ಪಾಕಿಸ್ತಾನದ ಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಧು, "ಇಮ್ರಾನ್ ಖಾನ್ ಕಿಂಗ್ ಆಫ್ ಹರ್ಟ್" ಎಂದು ಹೊಗಳಿದ್ದಾರೆ. ಈ ಕಾರ್ಯಕ್ರಮದಲ್ಲಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡಾ ಭಾಗವಹಿಸಿದ್ದರು.

"ಇಮ್ರಾನ್ ನೀವು, ಕಿಂಗ್ ಆಫ್ ಹರ್ಟ್ಸ್, ನಿಮಗೆ ಧನ್ಯವಾದಗಳು. ಸಿಕಂದರ್ (ಅಲೆಕ್ಸಾಂಡರ್) ಭಯದಿಂದ ಜಗತ್ತನ್ನು ಗೆದ್ದರೆ, ನೀವು ಪ್ರಪಂಚದಾದ್ಯಂತ ಹೃದಯಗಳನ್ನು ಗೆದ್ದಿದ್ದೀರಿ" ಎಂದು ಸಿಧು, ಹೊಗಳಿದ್ದಾರೆ.

ಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ನಮೋ ಹಸಿರು ನಿಶಾನೆಕರ್ತಾರ್ ಪುರ್ ಕಾರಿಡಾರ್ ಯೋಜನೆಗೆ ನಮೋ ಹಸಿರು ನಿಶಾನೆ

ಅಮರೀಂದರ್ ಸಿಂಗ್ ಮಾತನಾಡುತ್ತಾ, "ಇದೇ ಮೊದಲ ಬಾರಿಗೆ ಗಡಿಬೇಲಿಯನ್ನು ತೆಗೆಯಲಾಗಿದೆ. ಯಾರೊಬ್ಬರೂ, ನನ್ನ ಸ್ನೇಹಿತ ಇಮ್ರಾನ್ ಖಾನ್ ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಪ್ರಧಾನಿ ಮೋದಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ" ಎಂದು ಸಿಂಗ್ ಹೇಳಿದರು.

English summary
I AM Sending Mummabhai Style Hug To PM Modi: Congress Leader and Former Cricketer Navjot Singh Sidhu At Kartarpur Corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X