Hyundai Exter SUV: ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ

ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಇಂದು ಬಿಡೆಗಡೆಯಾಗಿದೆ. ಭಾರತದ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸ ಮಾಡಲಾಗಿದ್ದು, ಟಾಟಾ ಮೋಟಾರ್ಸ್‌ಗೆ ಸಡ್ಡು ಹೊಡೆಯಲು ಮುಂದಾಗಿದೆ.

ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಬೆಲೆ 5,99,900 ರೂಪಾಯಿಯಿಂದ ಆರಂಭವಾಗಲಿದೆ. ಐದಯ ವಿವಿಧ ರೂಪಾಂತರಗಳಲ್ಲಿ ಇದು ಲಭ್ಯವಿರಲಿದೆ. EX, S, SX, SX(O) ಮತ್ತು SX(O) ಕನೆಕ್ಟ್ ಎನ್ನುವ ವೇರಿಯಂಟ್‌ಗಳನ್ನು ಪರಿಚಯಿಸಿದೆ. ಕೈಗೆಟುಕುವ ದರದಲ್ಲಿ ಈ ಎಸ್‌ಯುವಿ ಲಭ್ಯವಿದ್ದು, ಮಧ್ಯಮ ವರ್ಗದವರ ಮನೆ ಗೆಲ್ಲುವ ವಿಶ್ವಾಸದಲ್ಲಿದೆ ಹ್ಯುಂಡೈ.

Hyundai Exter SUV

ಇನ್ನು ಹ್ಯುಂಡೈ ಎಕ್ಸಟೈರ್ ಕಾರಿಗೆ 3 ವರ್ಷ ಅನಿಯಮಿತ ಕಿಲೋಮೀಟರ್ ವಾರಂಟಿ ಕೂಡ ಸಿಗುತ್ತದೆ. ಗ್ರಾಹಕರು 7 ವರ್ಷಗಳ ವಿಸ್ತೃತ ವಾರಂಟಿಯನ್ನು ಕೂಡ ಪಡೆಯಲು ಅವಕಾಶ ಇದೆ. ಹ್ಯುಂಡೈ ಗ್ರ್ಯಾಂಡ್‌ ಐ10, ಔರಾ ಸೆಡಾನ್‌ನಂತೆಯೇ ಇದನ್ನು ಸಿದ್ದಪಡಿಸಲಾಗಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಕಾರುಗಳು ಲಭ್ಯವಿದೆ.

11 ಸಾವಿರಕ್ಕೂ ಹೆಚ್ಚು ಅಡ್ವಾನ್ಸ್ ಬುಕಿಂಗ್

ಮಾರುಕಟ್ಟೆಗೆ ಬರುವ ಮುನ್ನವೇ ಹ್ಯುಂಡೈ ಎಕ್ಸಟೈರ್ ಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ 11 ಸಾವಿರಕ್ಕೂ ಹೆಚ್ಚು ಬುಕಿಂಗ್ ಸ್ವೀಕರಿಸಿರುವುದಾಗಿ ಕಂಪನಿ ಹೇಳಿದೆ. ಇದರಲ್ಲಿ ಶೇಕಡಾ 38 ರಷ್ಟು ಎಎಂಟಿ ಆವೃತ್ತಿಯಾಗಿದ್ದರೆ. 20 ಪ್ರತಿಶತ ಸಿಎನ್‌ಜಿ ಕಾರುಗಲು ಬುಕ್ ಆಗಿವೆ.

ಸುರಕ್ಷತೆ ವಿಚಾರದಲ್ಲಿ ಕಂಪನಿ ಸಾಕಷ್ಟು ಜಾಗ್ರತೆ ವಹಿಸಿದ್ದು 6 ಏರ್ ಬ್ಯಾಗ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮಾಡೆಲ್ ಕಾರಿಗೆ ಭಾರತ ಟಿ20 ತಂಡದ ನಾಯಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

8 ಬಣ್ಣಗಳಲ್ಲಿ ಲಭ್ಯ

ಹುಂಡೈ ಎಕ್ಸ್‌ಟರ್ ಒಟ್ಟು 9 ಬಣ್ಣಗಳಲ್ಲಿ ಲಭ್ಯವಿದೆ. 6 ಮೊನೊಟೋನ್ ಮತ್ತು 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದೆ. ಕಾಸ್ಮಿಕ್ ಬ್ಲೂ, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ಕಾಸ್ಮಿಕ್ ಬ್ಲೂ ಮತ್ತು ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ರೇಂಜರ್ ಖಾಕಿ. ಹುಂಡೈ ಎಕ್ಸ್‌ಟರ್ ನ ಒಳಭಾಗವು ಲೈಟ್ ಸೇಜ್, ಕಾಸ್ಮಿಕ್ ನೀಲಿ ಮತ್ತು ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ.

ಕಾರಿನ ಒಳಗಿನ ವೈಶಿಷ್ಟ್ಯಗಳು

ಕಪ್ಪು ಬಣ್ಣದ ಕ್ಯಾಬಿನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಮಿ-ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ, ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ ಜೊತೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬಹು ಭಾಷೆಗಳಲ್ಲಿ ಧ್ವನಿ-ಸಕ್ರಿಯ ಆದೇಶಗಳನ್ನು ನೀಡಲಾಗಿದೆ.

ವೈರ್ ಲೆಸ್ ಚಾರ್ಜಿಂಗ್, ಡ್ಯಾಶ್ ಕ್ಯಾಮ್, ಹಿಲ್ ಅಸಿಸ್ಟ್ ಕಂಟ್ರೋಲ್, 6 ಏರ್ ಬ್ಯಾಗ್, ಸೀಟ್ ಬೆಲ್ಟ್ ರಿಮೈಂಡರ್, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಕ್ಯಾಮೆರಾಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ.

ಮೈಲೇಜ್ ವಿಚಾರಕ್ಕೆ ಬಂದರೆ ಹುಂಡೈ ಎಕ್ಸ್‌ಟರ್ ಪೆಟ್ರೋಲ್ ಎಂಟಿ: ಪ್ರತಿ ಲೀಟರ್ ಗೆ 19.4 ಕಿಲೋಮೀಟರ್ ಇದ್ದರೆ, ಹುಂಡೈ ಎಕ್ಸ್‌ಟರ್ ಪೆಟ್ರೋಲ್ ಎಎಮ್‌ಟಿ: 19.2 ಕಿಮೀ/ಲೀ ಇದೆ ಎಂದು ಹೇಳಿದೆ. ಇನ್ನು ಹುಂಡೈ ಎಕ್ಸ್‌ಟರ್ ಸಿಎನ್‌ಜಿ 27.10 ಕಿಮೀ/ಲೀ ಮೈಲೇಜ್ ಕೊಡಲಿದೆ.

ಹುಂಡೈ ಎಕ್ಸ್‌ಟರ್ ಬೆಲೆಗಳು

ಹುಂಡೈ ಎಕ್ಸ್‌ಟರ್ ಇಎಕ್ಸ್ ಎಂಟಿ: 5,99,900 ರೂ.
ಹುಂಡೈ ಎಕ್ಸ್‌ಟರ್ ಎಸ್ ಎಂಟಿ: 7,26,900 ರೂ.
ಹುಂಡೈ ಎಕ್ಸ್‌ಟರ್ ಎಎಮ್‌ಟಿ: 7,96,980 ರೂ.
ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್: 7,99,900 ರೂ.
ಹುಂಡೈ ಎಕ್ಸ್‌ಟರ್ ಸಿಎನ್‌ಜಿ: 8,23,990 ರೂ.
ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್(ಒ): 8,63,900 ರೂ.
ಹುಂಡೈ ಎಕ್ಸ್‌ಟರ್ ಎಸ್‌ಎಕ್ಸ್(ಒ) ಕನೆಕ್ಟ್: 9,31,990 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+