ಚಿನ್ನದ 'ನಿಧಿ'ಗಾಗಿ ಬರೋಬ್ಬರಿ 1,00,00,000 ರೂಪಾಯಿ ಕಳೆದುಕೊಂಡ 11 ಮಂದಿ

ಇತ್ತೀಚಿನ ದಿನಗಳಲ್ಲಿ ಅಮಾಯಕರಿಗೆ ಆಮಿಷವೊಡ್ಡಿ ನಂಬಿಸಿ ಅವರ ಬಳಿಯ ಹಣ, ಒಡವೆಗಳನ್ನ ಪೀಕುತ್ತಿರುವ ವಂಚಕರ ಸಂಖ್ಯೆ ಹೆಚ್ಚಾಗುತ್ತಲಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 11 ಮಂದಿ ಬರೋಬ್ಬರಿ ಒಂದು ಕೋಟಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದಿಢೀರನೆ ಶ್ರೀಮಂತರಾಗಬೇಕು, ಸುಲಭವಾಗಿ ಸಂಪತ್ತು ಗಳಿಸಬೇಕು ಎಂಬ ದುರಾಸೆಗೆ ಬಿದ್ದು ವಂಚಕರ ಜಾಲಕ್ಕೆ ಸಿಲುಕಿ ಜೇಬು ಖಾಲಿ ಮಾಡಿಕೊಳ್ಳುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇದಕ್ಕೆ ಗುಪ್ತನಿಧಿಯ ಆಸೆಗೆ ಬಿದ್ದು 11 ಮಂದಿ ಹೈದರಾಬಾದ್‌ನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಕಳೆದುಕೊಂಡಿರುವ ಈ ಘಟನೆಯೇ ಸೂಕ್ತ ಉದಾಹರಣೆಯಾಗಿದೆ.

Hyderabad Treasure Scam 11 People Lose 1 Crore in Fake Gold Coin Fraud Viral on Social media

ನಿಧಿ ತೆಗೆಸಲು ಒಪ್ಪಿಕೊಂಡ 11 ಮಂದಿ

ಮೂಲಗಳ ಪ್ರಕಾರ, ವಂಚಕರ ತಂಡವೊಂದು ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಜಾಲ ಬೀಸಿತ್ತು. 'ನಿಮ್ಮ ಮನೆಗಳ ಅಡಿಯಲ್ಲಿ ಅಪಾರ ಪ್ರಮಾಣದ ಪ್ರಾಚೀನ ನಿಧಿಯಿದೆ. ಅದನ್ನು ಹೊರತೆಗೆಯುವ ಹಾಗೂ ಹುಡುಕಿ ಕೊಡುವ ವಿಶೇಷ ವಿದ್ಯೆ ಮತ್ತು ಜ್ಞಾನ ನಮಗಿದೆ,' ಎಂದು ವಂಚಕರು ಈ 11 ಮಂದಿಗೆ ನಂಬಿಸಿದ್ದರು. ಸುಲಭವಾಗಿ ಅಪಾರ ಸಂಪತ್ತು ಸಿಗುತ್ತದೆ ಎಂಬ ಮಾತುಗಳನ್ನು ನಂಬಿದ ಇವರು ಆ ನಿಧಿಯನ್ನು ತೆಗೆಸಲು ಒಪ್ಪಿಕೊಂಡಿದ್ದರು.

ನಕಲಿ ನಾಣ್ಯಗಳನ್ನ ತೋರಿಸಿ ಒಂದು ಕೋಟಿ ಲೂಟಿ

11 ಮಂದಿಯನ್ನ ಪೂರ್ಣವಾಗಿ ನಂಬಿಸಲು ವಂಚಕರು ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದ್ದ ಮಾಸ್ಟರ್ ಪ್ಲಾನ್ ಪ್ರಕಾರ ಕಾರ್ಯನಿರ್ವಹಿಸಿದ್ದಾರೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಗುಂಡಿಗಳನ್ನು ಅಗಿದು, ಅಲ್ಲಿ ಮುಂಚಿತವಾಗಿಯೇ ಇಟ್ಟಿದ್ದ ಚಿನ್ನದ ಲೇಪನವಿದ್ದ ನಕಲಿ ನಾಣ್ಯಗಳನ್ನು ಹೊರತೆಗೆದು ತೋರಿಸಿದ್ದಾರೆ. 'ಇದೇ ನಿಮ್ಮ ಮನೆ ಕೆಳಗಿದ್ದ ನಿಧಿ' ಎಂದು ನಂಬಿಸಿ, ನಿಧಿಯನ್ನು ಹಸ್ತಾಂತರಿಸಲು ಹಾಗೂ ಪೂಜೆ-ಪುನಸ್ಕಾರಗಳ ನೆಪದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಸತ್ಯ ತಿಳಿಯುತ್ತಿದ್ದಂತೆ ಕಂಗಾಲಾದ ಸಂತ್ರಸ್ತರು

ವಂಚಕರು ನೀಡಿದ್ದ ನಿಧಿಯ ನಾಣ್ಯಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಅವು ಚಿನ್ನದ ನಾಣ್ಯಗಳಲ್ಲ, ಬದಲಿಗೆ ಕೇವಲ ಚಿನ್ನದ ಬಣ್ಣ ಬಳಿದಿದ್ದ ನಕಲಿ ನಾಣ್ಯಗಳು ಎಂಬ ಕಹಿ ಸತ್ಯ ಹೊರಬಿದ್ದಿದೆ. ತಕ್ಷಣವೇ ತಾವು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪೊಲೀಸರ ಕಾರ್ಯಚರಣೆ, ನಾಲ್ವರ ಬಂಧನ

ಘಟನೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ವಂಚನೆ ಎಸಗಿದ ಜಾಲದಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಾರ್ವಜನಿಕರಿಗೆ ಪೊಲೀಸರಿಂದ ಎಚ್ಚರಿಕೆ

ಗುಪ್ತನಿಧಿ, ವಾಮಾಚಾರ ಅಥವಾ ಸುಲಭವಾಗಿ ಹಣವನ್ನು ದ್ವಿಗುಣಗೊಳಿಸುವ ಆಮಿಷಗಳನ್ನು ಒಡ್ಡುವ ಅಪರಿಚಿತ ವ್ಯಕ್ತಿಗಳ ಮಾತುಗಳನ್ನು ನಂಬಬಾರದು. ಯಾವುದೇ ವೈಜ್ಞಾನಿಕ ಆಧಾರ ಇಲ್ಲದ ಇಂತಹ ಮೂಢನಂಬಿಕೆಗಳು ಮತ್ತು ಆಸೆಗಳು ಅಂತಿಮವಾಗಿ ದೊಡ್ಡ ಮಟ್ಟದ ಆರ್ಥಿಕ ನಷ್ಟಕ್ಕೆ ಹಾದಿ ಮಾಡಿಕೊಡುತ್ತವೆ ಎಂದು ಪೊಲೀಸರಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಒಟ್ಟಿನಲ್ಲಿ ಜನರು ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದೇ ಒಳಿತು ಎನ್ನುವ ಕಿವಿಮಾತನ್ನೂ ಕೂಡ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+