ಕಳ್ಳತನ ಮಾಡಲು ಸಹೋದರಿಯ ನೈಟಿ ಕದ್ದು ಧರಿಸಿದ ಸೆಕ್ಯುರಿಟಿ ಗಾರ್ಡ್
ಹೈದರಬಾದ್‌ನಲ್ಲಿ ವಿಶಿಷ್ಟ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರ ಬಗ್ಗೆ ತಿಳಿದರೆ ನೀವೂ ಅಚ್ಚರಿಪಡುತ್ತೀರಿ. ಇಲ್ಲಿ ಸೆಕ್ಯುರಿಟಿ ಗಾರ್ಡ್ ಅತ್ಯಂತ ವಿಭಿನ್ನ ಶೈಲಿಯಲ್ಲಿ ಕಳ್ಳತನ ಮಾಡಿದ್ದಾನೆ. ಸಾಕ್ಷಿಯನ್ನು ಮರೆ ಮಾಡಲು ಸಹೋದರಿಯ ನೈಟಿ ಕದ್ದು, ಅದನ್ನು ಧರಿಸಿ ಬಂದ ಸೆಕ್ಯುರಿಟಿ ಗಾರ್ಡ್ ಮೊಬೈಲ್ ಅಂಗಡಿ ದರೋಡೆ ಮಾಡಿದ್ದಾನೆ. ಇದು ಸ್ಪಷ್ಟವಾಗಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯೊಬ್ಬ ಮೊಬೈಲ್ ಅಂಗಡಿ ದರೋಡೆ ಮಾಡಲು ಸಹೋದರಿಯ ನೈಟ್ ಡ್ರೆಸ್ ಅನ್ನು ಹಾಕಿಕೊಂಡಿದ್ದಾನೆ. ಮೇ 28 ರಂದು ಭದ್ರತಾ ಸಿಬ್ಬಂದಿ ಸಹೋದರಿಯ ನೈಟ್ ಡ್ರೆಸ್ ಧರಿಸಿ ಮೊಬೈಲ್ ಅಂಗಡಿಗೆ ಬಂದು ಅಲ್ಲಿಂದ 8 ಲಕ್ಷ ರೂಪಾಯಿ ಮೌಲ್ಯದ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಕದ್ದೊಯ್ದಿದ್ದಾನೆ.

ವಿಷಯ ತಿಳಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಮಹಿಳೆಯರ ವಿಚಾರಣೆ ಆರಂಭಿಸಿದರು. ಪೊಲೀಸರು ಎಲ್ಲೆಂದರಲ್ಲಿ ಮಹಿಳೆಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೂ ಕಳ್ಳತನ ಮಾಡಿದ ಕಳ್ಳಿ ಪತ್ತೆಯಾಗಲೇ ಇಲ್ಲ. ಬಳಿಕ ಕಳ್ಳಿ ಮಹಿಳೆ ಅಲ್ಲ 28 ವರ್ಷದ ಸೆಕ್ಯುರಿಟಿ ಗಾರ್ಡ್ ಎಂದು ತಿಳಿದು ಬಂದಿದೆ. ಈ ಭದ್ರತಾ ಸಿಬ್ಬಂದಿಯನ್ನು ಮಂಕಾಳ ಯಾಕಯ್ಯ ಎಂದು ಗುರುತಿಸಲಾಗಿದೆ. ಇವರ ಮನೆಯಿಂದ ಕಳವು ಮಾಲು ಪತ್ತೆಯಾಗಿದೆ. ಇದಾದ ಬಳಿಕ ಪೊಲೀಸರು ಐಪಿಸಿ ಸೆಕ್ಷನ್ 457 ಮತ್ತು 380 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೊಬೈಲ್ ಅಂಗಡಿಯಿಂದ ಬೆಲೆಬಾಳುವ ವಸ್ತುಗಳು ಕಳವು
ಪೋಲೀಸರನ್ನು ದಾರಿತಪ್ಪಿಸಲು ಯಾಕಯ್ಯ ನೈಟ್ ಡ್ರೆಸ್ ಹಾಕಿಕೊಂಡು ಮೊಬೈಲ್ ಅಂಗಡಿಗೆ ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಅಂಗಡಿ ಪ್ರವೇಶಿಸಲು ಶಟರ್ ಹಾಗೂ ಪಕ್ಕದ ಗೋಡೆ ಒಡೆದಿದ್ದಾನೆ. ಇದಾದ ಬಳಿಕ ಅಂಗಡಿಯಲ್ಲಿದ್ದ 8.28 ಲಕ್ಷ ಮೌಲ್ಯದ ಫೋನ್ ಹಾಗೂ ವಿವಿಧ ಟ್ಯಾಬ್ಲೆಟ್ ಗಳನ್ನು ಕದ್ದೊಯ್ದಿದ್ದನು.
ಕಳ್ಳತನಕ್ಕೆ ಬಿಗ್ ಪ್ಲ್ಯಾನ್ ಮಾಡಿದ್ದ ಯಾಕಯ್ಯ
ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರಿಗೆ ವಿಷಯ ತಿಳಿದಾಗ ಮೊದಲಿಗೆ ಇದು ಮಹಿಳೆ ಎಂದು ಭಾವಿಸಲಾಗಿದೆ. ಇದರೊಂದಿಗೆ ಪೊಲೀಸರು ಕಳ್ಳ ಮಹಿಳೆಯ ವಿಚಾರಣೆ ಆರಂಭಿಸಿದರು. ಅಷ್ಟಕ್ಕೂ ಈ ಮಹಿಳೆ ಯಾರೆಂದು ಕಂಡುಹಿಡಿಯಲು ಪ್ರಾರಂಭಿಸಿದಾಗ ಮಹಿಳೆ ಗುರು ಪತ್ತೆಯಾಗಲೇ ಇಲ್ಲ. ಏಕೆಂದರೆ ಭದ್ರತಾ ಸಿಬ್ಬಂದಿ ಕಳ್ಳತನ ಮಾಡಲು ಸಹೋದರಿಯ ನೈಟಿಯನ್ನು ಧರಿಸಿದ್ದಲ್ಲದೆ, ಮುಖವನ್ನು ಮುಚ್ಚಿಕೊಂಡಿದ್ದನು. ಈ ಕಳ್ಳತನದ ಘಟನೆಯನ್ನು ಬಹಳ ಎಚ್ಚರಿಕೆಯಿಂದ ಯೋಜಿಸಿ ಕಾರ್ಯಗತಗೊಳಿಸಿದ್ದನು.
ಪೊಲೀಸ್ ಅಧಿಕಾರಿ ಹೇಳಿದ್ದೇನು?
ಈ ಕುರಿತು ಮಹಾಕಾಳಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿ ರಮೇಶ್ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಆರೋಪಿ ವ್ಯಕ್ತಿ ಅಂಗಡಿಯ ದೀಪಗಳನ್ನು ಆಫ್ ಮಾಡಿದ್ದಾನೆ ಎಂದು ಅವರು ಹೇಳಿದರು. ಹೀಗಾಗಿ ಅವನಿಗೆ ಅಂಗಡಿಯ ಬಗ್ಗೆ ಜ್ಞಾನವಿತ್ತು ಎಂದು ತಿಳಿದು ಬಂದಿದೆ. ಇದಾದ ಬಳಿಕ ಕಾಂಪ್ಲೆಕ್ಸ್‌ನ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಹೇಳಿದರು.











Click it and Unblock the Notifications