ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆ: ಬೆಂಗಳೂರು ಸೇರಿ 4 ನಗರಗಳು ಆಯ್ಕೆ
ಬೆಂಗಳೂರು, ನವೆಂಬರ್ 18: ಗ್ಲೋಬಲ್ ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಆಯ್ಕೆಯಾಗಿದೆ.
ಆಧುನಿಕ ತಂತ್ರಜ್ಞಾನದದ ಮೂಲಕ ರಸ್ತೆ ಪ್ರಯಾಣವನ್ನು ಸುರಕ್ಷಿತಗೊಳಿಸುವ ಜಾಗತಿಕ ಮಟ್ಟದ ಯೋಜನೆಗೆ ಬೆಂಗಳೂರು, ಹೈದದರಾಬಾದ್, ಇಂದೋರ್, ಫರೀದಾಬಾದನ್ನು ಆಯ್ಕೆ ಮಾಡಲಾಗಿದೆ.
ಈ ಮೂಲಕ ಜಗತ್ತಿನ 36 ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಗೊಂಡಂತಾಗಿದೆ. ಮಾಸ್ಕೊ, ಲಂಡನ್, ಟೊರೊಂಟೊ, ಬ್ರೆಸಿಲಿಯಾ, ಮೆಲ್ಬೋರ್ನ್, ದುಬೈ ನಗರಗಳು ಇದರಲ್ಲಿ ಸೇರಿವೆ.
ವಿಶ್ವ ಆರ್ಥಿಕ ವೇದಿಕೆ 22 ದೇಶಗಳ 36 ನಗರಗಳನ್ನು ಯೋಜನೆಗೆ ಆಯ್ಕೆ ಮಾಡಿದೆ. ಬೆಳೆಯುತ್ತಿರುವ ನಗರಗಳು ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿವೆ. ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ.

ಜಿ20ಗ್ಲೋಬಲ್ ಸ್ಮಾರ್ಟ್ ಸಿಟಿ ಅಲಯನ್ಸ್ ನ ಭಾಗವಾಗಿ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾರತದ 4 ನಗರಗಳು ಆಯ್ಕೆಯಾಗಿವೆ.
ಖಾಸಗಿಕರಣದ ರಕ್ಷಣೆ, ನಿರ್ವಹಣೆ, ಆಧುನಿಕ ಸೈಬರ್ ತಂತ್ರಜ್ಞಾನದ ಮೂಲಕ ವಿಶೇಷ ಚೇತನರಿಗೆ ಉತ್ತಮ ಸೇವೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಯೋಜನೆ ನೆರವಾಗಲಿದೆ.












Click it and Unblock the Notifications