Human Finger found in Ice Cream: ಐಸ್ ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆ- ವೈದ್ಯ ಶಾಕ್!
ಮುಂಬೈ ಜೂನ್ 13: ಮುಂಬೈನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆಯ ಬಗ್ಗೆ ಕೇಳಿದರೆ ನೀವು ಐಸ್ ಕ್ರೀಂ ತಿನ್ನುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಪಕ್ಕಾ.
ಕಳೆದ ದಿನ ಮುಂಬೈನ ಮಲಾಡ್‌ನಲ್ಲಿ ಐಸ್ ಕ್ರೀಂ ಕೋನ್‌ನಲ್ಲಿ ತುಂಡಾದ ಮಾನವನ ಬೆರಳು ಪತ್ತೆಯಾಗಿದೆ. ಆನ್‌ಲೈನ್‌ನಲ್ಲಿ ಈ ಐಸ್ ಕ್ರೀಂ ಆರ್ಡರ್ ಮಾಡಲಾಗಿತ್ತು. ಐಸ್ ಕ್ರೀಂ ತಿನ್ನುವಾಗ ಅದರಲ್ಲಿ ಮಾನವನ ಬೆರಳಿನ ತುಂಡು ಕಂಡು ಬಂದಿದೆ.

ಐಸ್ ಕ್ರೀಂ ಆರ್ಡರ್ ಮಾಡಿದ್ದ ಬ್ರಾಂಡನ್ ಫೆರಾ ಎಂಬುವವರಿಗೆ ಕತ್ತರಿಸಿದ ಬೆರಳು ಸಿಕ್ಕಿದೆ. ಈ ಘಟನೆಯ ಬಳಿಕ ಅವರಿಗೆ ಭಯವಾಗಿದ್ದು ಏನೂ ಕೂಡ ತಿನ್ನಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಐಸ್ ಕ್ರೀಮ್ ಪತ್ತೆಯಾಗಿದ್ದು ಹೇಗೆ?
ಬ್ರಾಂಡನ್ ಫೆರಾ ಈ ಘಟನೆ ಬಗ್ಗೆ ವಿವರಿಸುತ್ತಾ, 'ನಿನ್ನೆ ನಾನು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದೇನೆ. ನಾನು ಐಸ್ ಕ್ರೀಮ್ ತಿನ್ನುತ್ತಿದ್ದಾಗ ನನ್ನ ಬಾಯಿಗೆ ದೊಡ್ಡ ಬೆರಳಿನ ತುಂಡು ಸಿಕ್ಕಿತು. ಅದು ಬೀಜ ಇರಬೇಕು ಎಂದು ನಾನು ಭಾವಿಸಿದೆ.
ಆದರೆ ನನಗೆ ಏನೋ ವಿಚಿತ್ರ ಅನಿಸಿತು. ಅದನ್ನು ಹೊರತೆಗೆದಾಗ ಬೆರಳಿನ ತುಂಡು ಇರುವುದು ಕಂಡಿತು. ನಾನು ವೈದ್ಯನಾಗಿದ್ದೇನೆ. ಹಾಗಾಗಿ ಮನುಷ್ಯನ ಮಾಂಸದ ತುಂಡು ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ತಕ್ಷಣ ಆ ತುಂಡನ್ನು ಐಸ್ ನಲ್ಲಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದೆ.
ಐಸ್ ಕ್ರೀಂನಲ್ಲಿ ಆ ವ್ಯಕ್ತಿಯ ರಕ್ತ ಎಷ್ಟು ಸೇರಿರಬಹುದು ಎಂಬುದು ಗೊತ್ತಿಲ್ಲ. ಇದರಿಂದ ಮನುಷ್ಯನಿಗೆ ಯಾವ ರೋಗಗಳು ಬರುತ್ತವೋ ಏನೋ ಗೊತ್ತಿಲ್ಲ. ಹೀಗಾಗಿ ನಾನು ನನ್ನನ್ನು ಮೊದಲು ಪರೀಕ್ಷಿಸಿಕೊಳ್ಳಬೇಕು. ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಐಸ್ ಕ್ರೀಂ ಬಗ್ಗೆ ಯೋಚಿಸಿದಾಗಗಲೆಲ್ಲಾ, ಈ ರೀತಿಯಾಗಿರುವುದು ನೆನಪಾಗಿ ನನಗೆ ಭಯವಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.
ಐಸ್ ಕ್ರೀಮ್ ಯಾವ ಕಂಪನಿಯದ್ದು?
ಸದ್ಯ ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಬ್ರಾಂಡನ್ ಫೆರಾ Zepto ಅಪ್ಲಿಕೇಶನ್ ಮೂಲಕ ಐಸ್ ಕ್ರೀಮ್ ಅನ್ನು ಆರ್ಡರ್ ಮಾಡಲಾಗಿದೆ. ಐಸ್ ಕ್ರೀಮ್ ಕಂಪನಿಯ ಹೆಸರು ಯಮ್ಮೋ ಐಸ್ ಕ್ರೀಮ್. 102 ರೂಪಾಯಿ ಬೆಲೆಯ ಯಮ್ಮೋ ಅಲ್ಫೋನ್ಸೋ ಮ್ಯಾಂಗೋ ಐಸ್ ಕ್ರೀಮ್ ಆರ್ಡರ್ ಮಾಡಲಾಗಿತ್ತು. ಇದರೊಂದಿಗೆ ಬೇರೆಯದನ್ನೂ ಆರ್ಡರ್ ಮಾಡಲಾಗಿತ್ತು. ಒಟ್ಟು ಬಿಲ್ 253 ರೂಪಾಯಿ ಆಗಿದೆ.
ಪೊಲೀಸ್ ಕ್ರಮ
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಈ ಘಟನೆಯ ಬಗ್ಗೆಯೂ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಐಸ್ ಕ್ರೀಮ್ ಕಂಪನಿ ವಿರುದ್ಧ ಮಲಾಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಲಾಡ್ ಪೊಲೀಸರು ಸೆಕ್ಷನ್ 272, 273 ಮತ್ತು 336 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಐಸ್‌ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದೆ ಎಂದು ದೂರುದಾರರು ಹೇಳಿರುವ ಪ್ರಕರಣ ನಿನ್ನೆ ಬಂದಿದೆ ಎಂದು ಮಲಾಡ್ ಪೊಲೀಸ್ ಠಾಣೆಯ ಹಿರಿಯ ಪಿಐ ರವಿ ಮದನೆ ತಿಳಿಸಿದ್ದಾರೆ. ಐಸ್ ಕ್ರೀಂ ಕಂಪನಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ನಾವು ತನಿಖೆ ನಡೆಸುತ್ತಿದ್ದೇವೆ.












Click it and Unblock the Notifications