Weekly express train: ಹುಬ್ಬಳ್ಳಿಯಿಂದ ಮತ್ತೊಂದು ಎಕ್ಸ್‌ಪ್ರೆಸ್‌ ರೈಲು ಸಂಚಾರ ಆರಂಭ, ಎಲ್ಲಿಗೆ? ವೇಳಾಪಟ್ಟಿ ಹೀಗಿದೆ

ಹುಬ್ಬಳ್ಳಿ, ನವೆಂಬರ್ 27: ಪ್ರಯಾಣಿಕರ ಬೇಡಿಕೆ ಮೇರೆಗೆ ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮತ್ತೊಂದು ವಿಶೇಷ ಎಕ್ಸ್‌ಪ್ರೆಸ್‌ ರೈಲನ್ನು ಪರಿಚಯಿಸುತ್ತಿದೆ. ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಯಾವಾಗ, ದಿನಾಂಕ, ಸಮಯದ ವಿವರ ಇಲ್ಲಿ ತಿಳಿಯಿರಿ.

ಶ್ರೀ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಕೊಟ್ಟಾಯಮ್ (Hubli-Kottayam Weekly Special Express Train)ನಿಲ್ದಾಣಗಳ ಮಧ್ಯೆ ವಾರಕ್ಕೊಮ್ಮೆ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ. ಡಿಸೆಂಬರ್ 2 ರಿಂದ 2024 ಜನವರಿ 20ರವರೆಗೆ ಈ ರೈಲು ಸೇವೆ ಲಭ್ಯವಿರಲಿದೆ.

Hubli-Kottayam Weekly Special Express Train travel Start Form Dec 2, Check schedule List, timings

ವಿಶೇಷ ರೈಲಿನ ವೇಳಾಪಟ್ಟಿ ಮಾಹಿತಿ

ಡಿಸೆಂಬರ್ 2ರಿಂದ ಜನವರಿ 20ರವರೆಗೆ ಬೆಳಗ್ಗೆ 10.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ. ಡಿ.3 ರಿಂದ ಜನವರಿ 21 ರವರೆಗೆ ಬೆಳಗ್ಗೆ 11ಕ್ಕೆ ಕೊಟ್ಟಾಯಮ್ಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಇದರೊಂದಿಗೆ ಮತ್ತೊಂದು ರೈಲು ಸಹ ಸೇವೆ ನೀಡಲಿದೆ. ಮತ್ತೊಂದು ರೈಲು ಡಿಸೆಂಬರ್ 5 ರಿಂದ 2024ರ ಜನವರಿ 16ರವರೆಗೆ ಬೆಳಗ್ಗೆ 11 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ.

Hubli-Kottayam Weekly Special Express Train travel Start Form Dec 2, Check schedule List, timings

ಇದೇ ರೈಲು ಗಾಡಿಯು ಡಿಸೆಂಬರ್ 6 ರಿಂದ 2024ರ ಜನವರಿ 17ರವರೆಗೆ ಬೆಳಗ್ಗೆ 11 ಗಂಟೆಗೆ ಕೊಟ್ಟಾಯಮ್ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ ಎಂದು ದಕ್ಷಿಣ ನೈರುತ್ಯ ರೈಲು ವಿಭಾಗ ತಿಳಿಸಿದೆ.

ಬೆಂಗಳೂರು-ಹುಬ್ಬಳ್ಳಿ ರೈಲು ಪುನಾರಂಭ, ಯಾವಾಗ?

ಇತ್ತೀಚೆಗೆ ಬೆಂಗಳೂರಿನಿಂದ ಹುಬ್ಬಳ್ಳಿ ಸಂಪರ್ಕಿಸುವ ಸೂಪರ್‌ಫಾಸ್ಟ್ ರೈಲು ಸೇವೆಯನ್ನು ಹಲವು ದಿನಗಳ ಹಿಂದೆ ಪ್ರಯಾಣಿಕ ಕೊರತೆಯ ಕಾರಣ ಹೇಳಿ ರೈಲ್ವೆ ಅಧಿಕಾರಿಗಳು ರದ್ದು ಮಾಡಿದ್ದರು. ಹೀಗಾಗಿ ಕೇವಲ ತಡರಾತ್ರಿ ಒಂದೇ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕಿಸುತ್ತಿತ್ತು.

ಈ ಸಂಬಂಧ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಮತ್ತಿತರರು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಕೆಲವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಮನವಿ ಮಾಡಿದ್ದರು.

ಇದರ ಬೆನ್ನಲ್ಲೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸೂಪರ್ ಫಾಸ್ಟ್ ರೈಲನ್ನು ಇಲಾಖೆ ಮತ್ತೆ ಆರಂಭಿಸಿದೆ. ಇದೆ ತಿಂಗಳ ನವೆಂಬರ್ 30 ರಿಂದ ಆರಂಭವಾಗಲಿದೆ. ಈ ರೈಲು ಮುಂದಿನ ವರ್ಷ ಫೆಬ್ರುವರಿ 29ರವರೆಗೆ ಓಡಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+