ICSE, ISC 2020 ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?
ನವದೆಹಲಿ, ಜುಲೈ 09: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಜುಲೈ 10ರಂದು ಮಧ್ಯಾಹ್ನ ಪ್ರಕಟವಾಗಲಿದೆ.
Recommended Video
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್ಸಿಇ) 2020 ರ ಜುಲೈ 10 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ 10, 12 ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸುವುದಾಗಿ ಟ್ವೀಟ್ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಐಸಿಎಸ್‌ಇ, ಐಎಸ್‌ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು

ಐಸಿಎಸ್‌ಇ / ಐಎಸ್‌ಸಿ ಫಲಿತಾಂಶಗಳನ್ನು ನೋಡುವುದು ಹೇಗೆ?
* CISCE, cice.org ಅಥವಾ examresults.net ವೆಬ್ಸೈಟ್ಗೆ ಭೇಟಿ ನೀಡಿ.
* ಐಸಿಎಸ್ಇ ಅಥವಾ ಐಎಸ್ಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳಿ, ಫಲಿತಾಂಶ 2020ರ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಪಠ್ಯಕ್ರಮ ವಿಷಯ ಆಯ್ಕೆ ಮಾಡಿಕೊಳ್ಳಿ, ಪ್ರವೇಶ ಸಂಖ್ಯೆ ಇತ್ಯಾದಿ ವಿವರ,ಯುಐಡಿ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ
* 'Submit' ಕ್ಲಿಕ್ ಮಾಡಿ. ಫಲಿತಾಂಶ ವಿವರ ಪಡೆಯಿರಿ, ನಂತರ ಪ್ರಿಂಟ್ ಔಟ್ ಪಡೆಯಿರಿ.
ಮಾರ್ಚ್ 19 ರಿಂದ 31ರ ಅವಧಿಯಲ್ಲಿ ನಡೆಯಬೇಕಿದ್ದ ಐಸಿಎಸ್‌ಇ ಹಾಗೂ ಐಎಸ್‌ಸಿ ಎಲ್ಲಾ ಪರೀಕ್ಷೆಗಳನ್ನು ಕೊರೊನಾವೈರಸ್ ಭೀತಿಯಿಂದ ಮುಂದೂಡಲಾಗಿತ್ತು. ಜೂನ್ ತಿಂಗಳಿನಲ್ಲಿ ಈ ಬಗ್ಗೆ ಕೋರ್ಟಿಗೆ ಸ್ಪಷ್ಟನೆ ನೀಡಿದ ಸಿಐಎಸ್ಸಿಇ ಬೋರ್ಡ್, ಪರೀಕ್ಷೆಗಳನ್ನು ರದ್ದುಪಡಿಸಲು ಸಿದ್ಧವಾಗಿದ್ದು, ವಿದ್ಯಾರ್ಥಿಗಳಿಗೆ ಆಂತರಿಕ ಮೌಲೀಕರಣದ ಮೂಲಕ ಗ್ರೇಡ್ ನಿರ್ಧರಿಸಲಾಗುತ್ತದೆ ಎಂದಿತ್ತು.












Click it and Unblock the Notifications