ನೀವಂದುಕೊಂಡ ಹಾಗಲ್ಲ Gen-Zಗಳು : ಈ ಮೂವರನ್ನು ನೋಡಿದರೆ ಜನರೇಶನ್‌ ಬಗೆಗಿನ ದೃಷ್ಟಿಕೋನವೇ ಬದಲಾಗುವುದು

ನಮ್ಮ ಯುವಕರು ಯೋಚನೆ ಮಾಡೋ ರೀತಿ, ಖರ್ಚು ಮಾಡೋ ಬಗೆ ಮತ್ತು ಅವರ ಲೈಫ್‌ ಸ್ಟೈಲನ್ನು ನೋಡಿ ಅವರಿಗೆ ಒಂದೊಂದು ಜನರೇಶನ್‌ನ ಲೇಬಲ್‌ ಹಾಕಲಾಗ್ತಿದೆ. ಆದ್ರೆ, ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಪ್ರಕಾರ ಜನರೇಶನ್‌ ಯಾವುದೇ ಆಗಿರಲಿ, ಅಲ್ಲಿ ಬದಲಾಗದೆ ಉಳಿಯುವಂಥಹ ಒಂದು ಮೌಲ್ಯ ಇರುತ್ತದೆ. ಆ ಜನರೇಶನ್‌ , ಈ ಜನರೇಶನ್‌ ಎಂದು ಡಿವೈಡ್‌ ಮಾಡುವ ಭರಾಟೆಯಲ್ಲಿ ನಾವು ಆ ಮೌಲ್ಯವನ್ನು ಕಡೆಗಣಿಸಿ ಬಿಡ್ತಾ ಇದ್ದೇವೆ.

Gen-Zಗಳ ಬಗೆಗಿನ ಕಲ್ಪನೆಯೇ ಸರಿಯಲ್ಲ

ಇತ್ತೀಚೆಗೆ ನೀಟ್‌ ವಿಚಾರವಾಗಿ ನಡೆದ ಪ್ರತಿಭಟನೆಯ ನಂತರವಂತೂ Gen-Zಗಳನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಈ ಜನರೇಶನ್‌ನವರು ಹೀಗೆಯೇ ಎನ್ನುವ ನಿರ್ಧಾರಕ್ಕೆ ಬಹುತೇಕರು ಬಂದಾಗಿದೆ. ಆದರೆ ನಿಜಕ್ಕೂ ಅವರು ಹುಟ್ಟಿದ ಅವಧಿಗೂ ಅವರ ನಡವಳಿಕೆಗಳಿಗೂ ಸಂಬಂಧ ಇದೆಯಾ? ಖಂಡಿತಾ ಇಲ್ಲ ಎನ್ನುತ್ತಾರೆ ಶ್ರೀಧರ್ ವೆಂಬು.

Gen Z

ತಮ್ಮ ಸೋಶಿಯಲ್‌ ಮಿಡಿಯಾ X ಪೋಸ್ಟ್‌ನಲ್ಲಿ, ಮೂವರು Gen-Zಗಳ ಬಗ್ಗೆ ಅವರು ಮಾತನಾಡಿದ್ದಾರೆ. ಈ ಜೆನ್‌ ಜೀಗಳು ಯಾವ ರೀತಿ ತಮ್ಮ ಕುಟುಂಬದ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಿದ್ದಾರೆ, ಹಣವನ್ನು ಉಳಿಸುವ ಅವರ ಪರಿ ಮತ್ತು ತಮ್ಮ ಜೀವನವನ್ನು ಸರಳವಾಗಿ ಹೇಗೆ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನುವುದನ್ನು ವೆಂಬು ಶೇರ್‌ ಮಾಡಿದ್ದಾರೆ. ಈ ಮೂವರು ಯುವಕರನ್ನು ನೋಡುವಾಗ ಇಂದಿನ ಯುವಕರ ಅಗತ್ಯ, ಸ್ಥಾನಮಾನ ಅಥವಾ ದುಬಾರಿ ಜೀವನಶೈಲಿ ಎನ್ನುವ ಪರಿಕಲ್ಪನೆಯನ್ನು ಪ್ರಶ್ನೆ ಮಾಡುವಂತೆ ಇದೆ ಎಂದು ಹೇಳಿದ್ದಾರೆ.

ಜನರೇಶನ್‌ನ ಹಣೆಪಟ್ಟಿ ಅನಾವಶ್ಯಕ

ಇವರನ್ನು ನೋಡಿದ ಮೇಲೆ ಯುವಕರಿಗೆ ಜರೇಶನ್‌ನ ಹಣೆಪಟ್ಟಿ ನೀಡುವ ಅಗತ್ಯತೆಯನ್ನು ಪ್ರಶ್ನಿಸಿದ್ದಾರೆ. ಜನರನ್ನು ವಯಸ್ಸಿನ ಆಧಾರದ ಮೇಲೆ ವಿಭಜಿಸುವ ಅಗತ್ಯವಿಲ್ಲ ಎನ್ನುವುದು ಶ್ರೀಧರ್ ವೆಂಬು ವಾದ. ಶ್ರೀಧರ್‌ ವೆಂಬು ಬೇರೆ ಬೇರೆ ವಯಸ್ಸಿನವರನ್ನು ಭೇಟಿಯಾಗ್ತಾರೆ. ಇವರೆಲ್ಲರ ಜೊತೆ ಬೆರೆತ ನಂತರ ಅವರನ್ನು ಅರಿತುಕೊಂಡ ನಂತರ ವಯಸ್ಸಿನ ಆಧಾರದ ಮೇಲೆ ಜನರೇಶನ್‌ ಅನ್ನು ವರ್ಗೀಕರಿಸುವುದು ಅಷ್ಟೊಂದು ಅರ್ಥಪೂರ್ಣವಲ್ಲ ಎನ್ನುವುದು ಅವರ ಅಭಿಪ್ರಾಯ. ವೆಂಬು ಪ್ರಕಾರ, ಜನರ ಆದ್ಯತೆಗಳು ಹೆಚ್ಚಾಗಿ ಅವರು ಯಾವ ಜನರೇಶನ್‌ಗೆ ಸೇರಿದ್ದಾರೆ ಎನ್ನುವುದರ ಬದಲು ಎದುರಾಗುವ ಸಂದರ್ಭಗಳು, ಜವಾಬ್ದಾರಿಗಳು ಮತ್ತು ಮೌಲ್ಯಗಳಿಂದ ರೂಪುಗೊಳ್ಳುತ್ತವೆ. ಅವರು ತಮ್ಮ ಈ ವಾದವನ್ನು ಮೂರು ಯುವ ಜೊಹೊ ಉದ್ಯೋಗಿಗಳ ಮೂಲಕ ವಿವರಿಸಿದ್ದಾರೆ.

ಜೆನ್‌ ಜೀಗಳಲ್ಲೂ ಇದೆ ಈ ಮೌಲ್ಯಗಳು

19 ವರ್ಷದ ಜೊಹೊ ಉದ್ಯೋಗಿ ತನ್ನ ಕುಟುಂಬಕ್ಕಾಗಿ ಒಂದೊಂದು ರೂಪಾಯಿಯನ್ನು ಉಳಿಸುತ್ತಾಳೆ. ತನ್ನ ಹೆತ್ತವರ ಸಾಲವನ್ನು ತೀರಿಸುವುದಕ್ಕಾಗಿ ಮತ್ತು ತನ್ನ ಸಣ್ಣ ತಮ್ಮನಿಗಾಗಿ ಹಗಲು ರಾತ್ರಿ ಕಷ್ಟ ಪಟ್ಟು ದುಡಿಯುತ್ತಿದ್ದಾಳೆ. ಈಕೆಯ ಜೀವನದ ಮೊದಲ ಆದ್ಯತೆಯೇ ಅವರ ಕುಟುಂಬ. ತನ್ನ ಆದಾಯವನ್ನು ದುಬಾರಿ ಬಟ್ಟೆಗಳಿಗೆ ಖರ್ಚು ಮಾಡುವುದಿಲ್ಲ. ಬೇಡದ ವಸ್ತುಗಳನ್ನು ಖರೀದಿಸುವುದಿಲ್ಲ, ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಬೇಕು ಎನ್ನುವುದರ ಮೇಲೆಯೇ ಈಕೆಯ ಗಮನ ಇರುತ್ತದೆ. ಒಂದೊಂದು ರೂಪಾಯಿಯನ್ನು ಉಳಿಸುವುದು ಅವಳಿಗೆ ಮುಖ್ಯ ಹಾಗಾಗಿ ಚಪ್ಪಲಿ ತುಂಡಾದರೂ ಮತ್ತೆ ಮತ್ತೆ ಅದನ್ನೇ ಸರಿಮಾಡಿಕೊಂಡು ಧರಿಸುತ್ತಾಳೆ.

ಈಕೆಯ ಆಯ್ಕೆಗಳು Gen-Z ಖರ್ಚು ಅಭ್ಯಾಸಗಳ ಬಗ್ಗೆ ಬೇರೆಯದ್ದೇ ಚಿತ್ರಣವನ್ನು ನೀಡುತ್ತದೆ. ವೈಯಕ್ತಿಕ ಆಸೆಗಳಿಗಿಂತ ಆರ್ಥಿಕ ಮತ್ತು ಕುಟುಂಬದ ಜವಾಬ್ದಾರಿಗಳು ಹೇಗೆ ಮುಖ್ಯವಾಗಬಹುದು ಎಂಬುದನ್ನು ತೋರಿಸುತ್ತದೆ.

ಸರಳ ವಿವಾಹವನ್ನು ಆರಿಸಿಕೊಂಡ ಇಬ್ಬರು Gen-Z ಉದ್ಯೋಗಿಗಳು

ಇತ್ತೀಚೆಗೆ ವಿವಾಹವಾದ ಇಬ್ಬರು ಜೊಹೊ ಉದ್ಯೋಗಿಗಳನ್ನು ಒಳಗೊಂಡ ಮತ್ತೊಂದು ಉದಾಹರಣೆಯನ್ನು ವೆಂಬು ಹಂಚಿಕೊಂಡಿದ್ದಾರೆ. ಇವರದ್ದು ಆಡಂಬರವಿಲ್ಲದ ಸರಳ ವಿವಾಹ. ತಮ್ಮ ಮದುವೆಗೆ ಹೆಚ್ಚು ಹಣ ಖರ್ಚಾಗಬಾರದು ಎನ್ನುವ ಉದ್ದೇಶದಿಂದಲೇ ಇವರು ಈ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಇವೆಲ್ಲವನ್ನೂ ನೋಡಿದ ಮೇಲೆ ಮಿತವ್ಯಯ, ಜವಾಬ್ದಾರಿ ಮತ್ತು ಸರಳತೆಯಂತಹ ಮೌಲ್ಯಗಳು ಜನರೇಶನ್‌ ಆಧರಿಸಿ ನಿರ್ಧಾರ ಆಗುವುದೂ ಇಲ್ಲ, ಬದಲಾಗುವುದೂ ಇಲ್ಲ ಎನ್ನುವುದು ಶ್ರೀಧರ್‌ ವೆಂಬು ಅಭಿಪ್ರಾಯ. ಇಂಥಹ ನಡವಳಿಕೆಯು ಜೆನ್-ಜೀಯಲ್ಲಿ ಕಾಣ ಸಿಗುವುದಿಲ್ಲ ಎನ್ನುವ ಕಲ್ಪನೆಯನ್ನು ತಳ್ಳಿ ಹಾಕಿದ್ದಾರೆ.

ಇವರ ಈ ಪೋಸ್ಟ್‌ಗೆ ನೆಟ್ಟಿಗರು ಬೇರೆ ಬೇರೆ ರೀತಿಯಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ಒಬ್ಬ ಬಳಕೆದಾರರು ವೆಂಬು ಅವರ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದಾರೆ. ಸರಳ ಮದುವೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ಕಡ್ಡಾಯ ಧಾರ್ಮಿಕ ಚಟುವಟಿಕೆಗಳನ್ನು ನಿರ್ವಹಿಸುವುದರಲ್ಲಿ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದಾರೆ. ಅದ್ದೂರಿ ಮದುವೆಯ ಬದಲು ಆ ಹಣವನ್ನು ದಂಪತಿ ಹೆಸರಿನಲ್ಲಿ ಫೀಕ್ಸ್ಡ್‌ ಡೆಪಾಸಿಟ್‌ ಮಾಡಿದರೆ ಹಣವಾದರೂ ಉಳಿಯುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+