ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಾಲದಲ್ಲಿ ದಾಖಲೆ ಬರೆದ ಡೋಲೋ 650 ಮಾತ್ರೆ

|
Google Oneindia Kannada News

ನವದೆಹಲಿ, ಜನವರಿ 17: ಕೊರೊನಾ ಕಾಲದಲ್ಲಿ ಡೋಲೋ 650 ಮಾತ್ರೆ ದಾಖಲೆ ಸೃಷ್ಟಿಸಿದೆ. ಕಳೆದ ಒಂದು ವರ್ಷದಲ್ಲಿ ತಲೆನೋವು, ಮೈಕೈ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ?. ಸಾಮಾನ್ಯವಾಗಿ ಕ್ರೋಸಿನ್ ಅಥವಾ ಡೋಲೋ 650 ಮಾತ್ರೆಯನ್ನು ಬಳಸಿದ್ದೀರಿ. ಯಾಕೆಂದರೆ ಡೋಲೊ 650 ಮಾತ್ರೆ ಒಂದು ವರ್ಷದಲ್ಲಿ ಹೆಚ್ಚು ಬಳಕೆಯಾದ ಟ್ಯಾಬ್ಲೆಟ್ ಆಗಿದೆ.

ವರದಿಯೊಂದರ ಪ್ರಕಾರ, ಬೆಂಗಳೂರು ಮೂಲದ ಮೈಕ್ರೊ ಲ್ಯಾಬ್ಸ್ ಲಿ. ತಯಾರಿಸುವ ಡೋಲೋ-650, ಜನವರಿ 2020 ರಿಂದ ಬೃಹತ್ ಪ್ರಮಾಣದ ಮಾರಾಟವನ್ನು ಕಂಡಿದೆ. ತನ್ನ ಹತ್ತಿರದ ಇತರೆ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತಯಾರಿಸುವ ಪ್ರತಿಸ್ಪರ್ಧಿ ಸಂಸ್ಥೆಗಳಾದ ಜಿಎಸ್‌ಕೆ ಫಾರ್ಮಾದ 'ಕ್ಯಾಲ್ಪಾಲ್,' 'ಸುಮೊ ಎಲ್,' ಹಾಗೂ ಇನ್ನಿತರೆ ಸುಮಾರು40 ಇತರೆ ಬ್ರ್ಯಾಂಡ್‌ಗಳ ಮೇಲೆ ಮೈಲುಗೈ ಸಾಧಿಸಿ ಬರೋಬ್ಬರಿ ದಾಖಲೆಯ ರೂ.560 ಕೋಟಿ ಮಾರಾಟ ಕಂಡಿದೆ.

ಕೋವಿಡ್ 3ನೇ ಅಲೆ: ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಕಡಿಮೆಕೋವಿಡ್ 3ನೇ ಅಲೆ: ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಕಡಿಮೆ

ಪ್ರಸ್ತುತ ಭಾರತ ಕೋವಿಡ್19 ಸಾಂಕ್ರಾಮಿಕದ ಮೂರನೇ ಅಲೆಗೆ ಸಾಕ್ಷಿಯಾಗಿದೆ. ದೇಶದಾದ್ಯಂತ ಪ್ರತಿ ದಿನದ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದ್ದು, ಪ್ಯಾರಾಸಿಟಮಾಲ್ ಮಾತ್ರೆಗಳ ಬೇಡಿಕೆ ಏರುತ್ತಲೇ ಇದೆ.

How Made-In-India Pill Dolo 650 Became India’s ‘Favourite Snack’ In Covid Waves

ಡಿಸೆಂಬರ್ 2021ರಲ್ಲಿ ಡೋಲೋ-650 ರೂ.28.9 ಕೋಟಿ ಮೊತ್ತದ ಮಾರಾಟವನ್ನು ಕಂಡಿದ್ದು, ಇದು ಕಳೆದ ವರ್ಷಕ್ಕಿಂತ ಶೇ.60%ರಷ್ಟು ಹೆಚ್ಚಿನ ಪ್ರಮಾಣದ ಮಾರಾಟವಾಗಿದೆ. ಏಪ್ರಿಲ್ ಹಾಗೂ ಮೇ 2021ರಲ್ಲಿ ಸಾಂಕ್ರಾಮಿಕದ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಈ ಮಾತ್ರೆಗಳ ಬೇಡಿಕೆ ಹಾಗೂ ಮಾರಾಟ ಅತೀ ಹೆಚ್ಚಾಗಿತ್ತು ಎನ್ನಲಾಗಿದೆ.

ಅದೇ ತಿಂಗಳಲ್ಲಿ ತನ್ನ ಪ್ರತಿಸ್ಪರ್ಧಿ ಕಂಪನಿ ತಯಾರಿಸುವ ಕ್ಯಾಲ್ಪಾಲ್ (Calpol) ಮಾತ್ರೆಗಳ ಮಾರಾಟವೂ ಸಹ ರೂ.28 ಕೋಟಿಗಳಷ್ಟು ವಹಿವಾಟನ್ನು ದಾಖಲಿಸಿದ್ದು, ಹಿಂದಿನ ವರ್ಷದ ಹೋಲಿಕೆಯಲ್ಲಿ ಶೇ.56ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಅತೀ ಹೆಚ್ಚಿನ ಸಂಖ್ಯೆಯ ವೈದ್ಯರು ಡೋಲೋ-650 ಮಾತ್ರೆಗಳನ್ನು ಶಿಫಾರಸ್ಸು ಮಾಡುತ್ತಾರೆ. ಆದ್ದರಿಂದ ಇದರ ಮಾರಾಟ ಪ್ರಮಾಣ ಮುಗಿಲು ಮುಟ್ಟಿದೆ. "ಡೊಲೊ-650ಪ್ಯಾರಾಸಿಟಮಾಲ್‌ ನ ಒಂದು ಬ್ರ್ಯಾಂಡ್ ಆಗಿದ್ದು, ಜ್ವರಕ್ಕೆ ಅತೀ ಸೂಕ್ತವಾಗಿರುವಂತ ಗುಳಿಗೆಳಾಗಿವೆ.

ಇದೇ ರೀತಿಯ ಇತರೆ ಮಾತ್ರೆಗಳಾದ 'ಕ್ರೋಸಿನ್,' 'ಕ್ಯಾಲ್ಪಾಲ್,' 'ಪ್ಯಾಸಿಮಾ,' ಇತ್ಯಾದಿಗಳಿಗಿಂತ ಇದೇನೂ ಭಿನ್ನವಲ್ಲ. ಆದರೆ ಇತರೆ ಬ್ರ್ಯಾಂಡ್‌ ಗಳ ಪ್ಯಾರಾಸಿಟಮಾಲ್ ಮಾತ್ರೆಗಳ ಹೋಲಿಕೆಯಲ್ಲಿ, ಹೃದಯ ಸಂಬಂಧಿತ ಖಾಯಿಲೆಗಳಿರುವವರು, ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರು ಹಾಗೂ ಮಧುಮೇಹಿಗಳೂ ಸೇರಿದಂತೆ ಬಹುತೇಕ ಎಲ್ಲಾ ವಯೋಮಾನದವರಿಗೂ ಸಹ ಡೊಲೊ-650 ತೆಗೆದುಕೊಡರೆ ಸುರಕ್ಷಿತ ಎಂದು ಭಾವಿಸುತ್ತಾರೆ," ಎನ್ನುವುದು ದೆಹಲಿಯ ಫೋರ್ಟಿಸ್ ಸಿ-ಡಿಒಸಿ ಆಸ್ಪತ್ರೆಯ ರಿತೇಶ್ ಗುಪ್ತಾ ಅವರ ಅಭಿಪ್ರಾಯವಾಗಿದೆ.

ನಕಲು ಪ್ರತಿಗಳೆಂದರೆ ಜೆರಾಕ್ಸ್ ಅಥವಾ ಮಿನರಲ್ ವಾಟರ್‌ನಲ್ಲಿ ಬಿಸ್ಲೇರಿ ಬ್ರ್ಯಾಂಡ್‌ಗಳಿದ್ದಂತೆ ಪ್ಯಾರಾಸಿಟಮಾಲ್ ಎಂದರೆ ಡೋಲೋ-650 ಎನ್ನುವಷ್ಟರ ಮಟ್ಟಿಗೆ ಈ ಮಾತ್ರೆಗಳು ಮನೆಮಾತಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಈ ಹೊಸ ವರ್ಷದಲ್ಲಿಯೂ ಸಹ ಸಾಂಕ್ರಾಮಿದಕ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಈ ಹಿನ್ನೆಲೆಯಲ್ಲಿ, ಅದರಲ್ಲೂ ಭಾರತದಲ್ಲಿ ಡೋಲೋ-650 ಜನರ ಅತ್ಯಂತ ನೆಚ್ಚಿನ "ಖಾದ್ಯ"ದಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಮಾತ್ರೆಯ ಕುರಿತು ಅನೇಕ ವಿನೋದಭರಿತ ಸಂದೇಶಗಳೂ ಟ್ರೋಲ್ ಆಗುತ್ತಿದೆ.

ಕೋವಿಡ್ -19 ಬಂದ 2020ರ ಬಳಿಕ ಭಾರತದಲ್ಲಿ ಏಕಾಏಕಿ ಜ್ವರ ವಿರುದ್ಧ ಔಷಧವಾದ ಡೋಲೋ 650 ಮಾತ್ರೆಗಳು ಬರೋಬ್ಬರಿ 350 ಕೋಟಿಗೂ ಹೆಚ್ಚು ಮಾರಾಟ ಆಗಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಕೋವಿಡ್ -19 ರ ಸಾಮಾನ್ಯ ಲಕ್ಷಣಗಳಲ್ಲಿ ಒಂದಾದ ಜ್ವರದಿಂದ ಕೂಡಿದೆ. ಅಂಡಾಕಾರದ ಆಕಾರದ ಬಿಳಿ ಮಾತ್ರೆಯು ಮಾರಾಟವು ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಆದರೆ ಪ್ಯಾರೆಸಿಟಮಾಲ್ ಮಾತ್ರೆಗಳು ಶೀತ ಮತ್ತು ಜ್ವರಕ್ಕೆ ಹೆಚ್ಚು ಸೇವಿಸುವ ಔಷಧಿಗಳಾಗಿವೆ.

ಔಷಧದ ವಾರ್ಷಿಕ ಮಾರಾಟವು 9.4 ಕೋಟಿ ಸ್ಟ್ರಿಪ್‌ಗಳಿಗೆ ಏರಿಕೆಯಾಯಿತು. ಒಂದು ಸ್ಟ್ರಿಪ್‌ನಲ್ಲಿ 15 ಮಾತ್ರೆಗಳು ಇರುತ್ತಾವೆ ಅಂದರೇ, 141 ಕೋಟಿ ಮಾತ್ರೆಗಳು ಮಾರಾಟವಾಗಿವೆ. 2020ರಲ್ಲಿ 2019 ಕ್ಕಿಂತ ಎರಡು ಪಟ್ಟು ಹೆಚ್ಚಿನ ಡೋಲೋ 650 ಮಾತ್ರೆಗಳು ಮಾರಾಟವಾಗಿವೆ. ನವೆಂಬರ್ 2021 ರ ವೇಳೆಗೆ 14.5 ಸ್ಟ್ರಿಪ್ಸ್ ಗಳು ಮಾರಾಟವಾದವು. ಅಂದರೇ, 217 ಕೋಟಿ ಟ್ಯಾಬ್ಲೆಟ್‌ಗಳು ಮಾರಾಟವಾದವು. 2020 ಹಾಗೂ 2021ರಲ್ಲಿ ಡೋಲಾ 650ಮಾತ್ರೆಗಳು ಬರೋಬ್ಪರಿ 358 ಕೋಟಿ ಟ್ಯಾಬ್ಲೆಟ್ ಗಳು ಮಾರಾಟವಾಗಿವೆ.

ನಾವು ಎಲ್ಲಾ 350 ಕೋಟಿ ಟ್ಯಾಬ್ಲೆಟ್‌ಗಳನ್ನು ಎತ್ತರವಾಗಿ ಜೋಡಿಸಿದರೆ, ಅದು ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್‌ಗಿಂತ ಸುಮಾರು 6,000 ಪಟ್ಟು ಎತ್ತರವಾಗಲಿದೆ. ಅಥವಾ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾಕ್ಕಿಂತ 63,000 ಪಟ್ಟು ಎತ್ತರವಾಗಿರಲಿದೆ. ಹೌದು ಇದು ನಿಜ. ಡೋಲಾ 650, 1.5 ಸೆಂ.ಮೀ ಉದ್ದದ ಮಾತ್ರೆ, ಕಳೆದ ಎರಡು ವರ್ಷಗಳಲ್ಲಿ ಗೋ-ಟು ಪ್ಯಾರಸಿಟಮಾಲ್ ಟ್ಯಾಬ್ಲೆಟ್, ಕ್ರೋಸಿನ್‌ಗಿಂತ ಹೆಚ್ಚು ಮಾರಾಟವಾಗಿದೆ. ಸಂಶೋಧನಾ ಸಂಸ್ಥೆ IQVIA ದ ಮಾಹಿತಿಯ ಪ್ರಕಾರ, 2019 ರಲ್ಲಿ ಕೋವಿಡ್ -19 ನಿಂದಾಗಿ ಭಾರತವು ಸುಮಾರು 7.5 ಕೋಟಿ ಡೋಲೋ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಿದೆ.

ಕೋವಿಡ್ ಅಲ್ಲದ ವರ್ಷ 2019 ರಲ್ಲಿ, ಪ್ಯಾರಸಿಟಮಾಲ್ ವರ್ಗದ ಅಡಿಯಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಮಾರಾಟವು ಸುಮಾರು 530 ಕೋಟಿ ರೂ. ಇತ್ತು. ಆದರೇ, ಬಳಿಕ ಮಾರಾಟವು 70% ರಷ್ಟು ಹೆಚ್ಚಾಗಿದೆ ಮತ್ತು 2021 ರ ವೇಳೆಗೆ ಅವರು 924 ಕೋಟಿ ರೂ. ರೂಪಾಯಿಗೆ ಏರಿಕೆಯಾಗಿದೆ. ಜನರು ಕೇವಲ ಡೋಲೋವನ್ನು ಖರೀದಿಸುತ್ತಿಲ್ಲ, ಜನರು ಅದನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ.

Recommended Video

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಪಡೆದು ನೀವೂ ಪುನೀತರಾಗಿ | Oneindia Kannada

ಜನವರಿ 2020 ರಲ್ಲಿ ಕೋವಿಡ್ -19 ಏಕಾಏಕಿ ಪ್ರಾರಂಭವಾದಾಗಿನಿಂದ, 'ಡೋಲೋ 650' ಅನ್ನು ಸುಮಾರು 2 ಲಕ್ಷ ಹುಡುಕಾಟಗಳೊಂದಿಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾದ ಕೀವರ್ಡ್ ಆಗಿದೆ ಮತ್ತು 'ಕ್ಯಾಲ್ಪೋಲ್ 650' ಅನ್ನು ಸುಮಾರು 40,000 ಬಾರಿ ಸರ್ಚ್ ಮಾಡಲಾಗಿದೆ. ಎರಡನೇ ಅಲೆಯ ಸಮಯದಲ್ಲಿ ಕೀವರ್ಡ್‌ಗಾಗಿ ಹುಡುಕಾಟದ ಪ್ರಮಾಣವು ಹೆಚ್ಚಾಗಿದೆ.

English summary
If you believed the pandemic was finally over, you were mistaken.It has reared its ugly head by releasing Omicron, a new variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X