ಐರ್ಲೆಂಡ್ ದೇಶದ ಮಡಿವಂತ ಕಾನೂನುಗಳನ್ನೇ ಬದಲಿಸಿದ ಸಲಿಂಗಿ ಪ್ರಧಾನಿ
Recommended Video

ಸಹಮತದ ಸಲಿಂಗ ಕಾಮ ಕಾನೂನು ಪ್ರಕಾರ ಅಪರಾಧವಲ್ಲ ಎಂಬ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್ ನೀಡಿದೆ. ಭಾರತ ಮೂಲದ- ಸದ್ಯಕ್ಕೆ ಐರ್ಲೆಂಡ್ ನಲ್ಲಿ ಪ್ರಧಾನಿ ಆಗಿರುವ ಲಿಯೋ ವರಡ್ಕರ್ ತಾನು ಸಲಿಂಗಿ ಎಂಬುದನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ.
38 ವರ್ಷಕ್ಕೆ ಪ್ರಧಾನಿ ಹುದ್ದೆಗೆ ಏರಿದವರು ಲಿಯೋ ವರಡ್ಕರ್. ಐರ್ಲೆಂಡ್ ನಲ್ಲಿ ತೀರಾ ಇತ್ತೀಚಿನ ವರ್ಷದವರೆಗೆ ಸಲಿಂಗ ಕಾಮ ಅಪರಾಧವಾಗಿತ್ತು. ಆದರೆ ಈಗ ಅಲ್ಲಿನ ಪ್ರಧಾನಿಯೇ ಸಲಿಂಗಿ. ಮೊದಲ ಬಾರಿಗೆ ಬಹಿರಂಗವಾಗಿ ತಾನು ಸಲಿಂಗಿ ಎಂದು ಘೋಷಿಸಿಕೊಂಡ ನಾಯಕ ಆತ.
ಬಹುಪಾಲು ಜನರ ಮತದಿಂದ ಸಲಿಂಗಿಗಳ ಮದುವೆಯನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ ಐರ್ಲೆಂಡ್. ಈ ವರ್ಷ ಗರ್ಭಪಾತದ ಮೇಲಿರುವ ನಿಷೇಧವನ್ನು ತೆರವು ಮಾಡುವ ಸಾಧ್ಯತೆ ಕೂಡ ಇದೆ. ತುಂಬ ಮಡಿವಂತ ಕ್ಯಾಥೋಲಿಕ್ ಕ್ರಿಶ್ಚಿಯನ್ ರ ಪ್ರಭಾವ ಇರುವ ದೇಶ ಐರ್ಲೆಂಡ್ ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣುತ್ತಿದೆ.

"ಮದುವೆಗಳೇ ಯಾವಾಗಲೂ ಸರಿ ಎನ್ನಲು ಸಾಧ್ಯವಿಲ್ಲ. ಮಹಿಳೆಯರು ತಮ್ಮದೇ ನಿರ್ಧಾರ ಮಾಡಬೇಕು. ಇನ್ನು ಕುಟುಂಬಗಳು ನಾನಾ ಬಗೆಯಲ್ಲಿ ಇರುತ್ತವೆ. ತಾತ-ಅಜ್ಜಿ ಮುನ್ನಡೆಸುವ ಕುಟುಂಬ, ಒಂಟಿ ಪೋಷಕರು ಅಥವಾ ಸಲಿಂಗಿ ಜೋಡಿ ಅಥವಾ ಪೋಷಕರು, ವಿಚ್ಛೇದನ ಪಡೆದವರು ಮತ್ತು ಮರು ಮದುವೆ ಮಾಡಿಕೊಂಡವರು ಹೀಗೆ ನಾನಾ ಬಗೆ" ಎಂದು ಪೋಪ್ ಎದುರೇ ಐರ್ಲೆಂಡ್ ಪ್ರಧಾನಿ ಲಿಯೋ ವರಡ್ಕರ್ ಮಾತನಾಡಿದ್ದರು.












Click it and Unblock the Notifications