Sengol Scepter: ಐತಿಹಾಸಿಕ ರಾಜದಂಡ ನೆಹರು ಅವರ 'ಚಿನ್ನದ ವಾಕಿಂಗ್ ಸ್ಟಿಕ್' ಆಗಿದ್ದೇಗೆ?; ಬಿಜೆಪಿ ಪ್ರಶ್ನೆ

ಇದೇ ಮೇ 28ರಂದು ಹೊಸ ಸಂಸತ್ ಭವನ ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಇನ್ನು ಐತಿಹಾಸಿಕ ರಾಜದಂಡ ಸೆಂಗೋಲ್ ಅನ್ನು ಹೊಸ ಸಂಸತ್ ಭವನದ ಸ್ಪೀಕರ್ ಕುರ್ಚಿ ಬಳಿ ಇರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುವವರೆಗೂ, ಬಹುತೇಕ ಜನರಿಗೆ ದೇಶದ ಇತಿಹಾಸದಲ್ಲಿ ರಾಜದಂಡ ಇತ್ತು ಎನ್ನುವುದು ಗೊತ್ತಿರಲಿಲ್ಲ.

How Did Historical Sengol Become Nehrus Golden Walking Stick?

ಭಾರತಕ್ಕೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವ ನೆನಪಿನಲ್ಲಿ ಅತ್ಯಂತ ಮಹತ್ವದ ಸ್ಮರಣಿಕೆಯಾಗಿದ್ದ ಸೆಂಗೋಲ್ ಅಥವಾ ರಾಜದಂಡ ಈವರೆಗೆ ಎಲ್ಲಿತ್ತು ಎನ್ನುವ ಪ್ರಶ್ನೆ ದೇಶದ ಜನರನ್ನು ಕಾಡುತ್ತಿದೆ.

ಸೆಂಗೋಲ್ ಮೂಲಕ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರ
ದೇಶದಲ್ಲಿ ರಾಜಪ್ರಭುತ್ವ ಕಾಲದಿಂದಲೂ ಅಧಿಕಾರ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್ ಮೂಲಕ ಮಾಡಲಾಗುತ್ತಿತ್ತು. ಚೋಳರ ಕಾಲದ ಈ ರಾಜದಂಡ ಭಾರತ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ನೀಡಲಾಗಿತ್ತು.

How Did Historical Sengol Become Nehrus Golden Walking Stick?

ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆ ಈವರೆಗೆ ಅಲಹಾಬಾದ್‌ನ ಆನಂದ ಭವನದ ಮ್ಯೂಸಿಯಂನಲ್ಲಿ ಬಂಧಿಯಾಗಿತ್ತು. ಗಾಜಿನ ಶೋಕೇಸ್‌ನಲ್ಲಿಟ್ಟು, ಅದರ ಕೆಳಗೆ ಹೀಗೆ ಬರೆಯಲಾಗಿತ್ತು "ಗೋಲ್ಡನ್ ಸ್ಟಿಕ್ ಗಿಫ್ಟೆಡ್ ಟು ಪಂಡಿತ ಜವಹರಲಾಲ್ ನೆಹರು'. ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಉಡುಗೊರೆಯಾಗಿ ನೀಡಲಾದ ಚಿನ್ನದ ಊರುಗೋಲು ಎಂದರ್ಥ.

ಚಿನ್ನದ ವಾಕಿಂಗ್ ಸ್ಟಿಕ್ ಆಗಿ ಬದಲಾಗಿದ್ದೇಗೆ?

ಇದೀಗ ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಬಿಜೆಪಿ ಹಾಗೂ ಇತಿಹಾಸಕಾರರು ವಾಗ್ದಾಳಿ ನಡೆಸುತ್ತಿದ್ದು, ದೇಶದ ಸ್ವಾತಂತ್ರ್ಯದ ಸಂಕೇತವಾಗಿದ್ದ ಸೆಂಗೋಲ್ ಅಥವಾ ರಾಜದಂಡ ನೆಹರು ಅವರ ಚಿನ್ನದ ವಾಕಿಂಗ್ ಸ್ಟಿಕ್ ಆಗಿ ಬದಲಾಗಿದ್ದೇಗೆ? ಎನ್ನುವ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ.

ಸೆಂಗೋಲ್‌ನ ಇತಿಹಾಸ ಹಾಗೂ ಮಹತ್ವವನ್ನು ಕಾಂಗ್ರೆಸ್ ಅತ್ಯಂತ ಪ್ರಬುದ್ಧವಾಗಿ ಮುಚ್ಚಿಟ್ಟಿತ್ತು. ದೇಶದ ಇತಿಹಾಸ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್‌ಗೆ ಯಾವಾಗಲೂ ಕೀಳಿರಿಮೆ ಇದ್ದೇ ಇದೆ ಎಂದು ಕಿಡಿಕಾರುತ್ತಿದ್ದಾರೆ.

ಇತಿಹಾಸದ ಘಟನೆಯನ್ನು ಕಾಂಗ್ರೆಸ್ ಮುಚ್ಚಿಟ್ಟಿದೆ

ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಟ್ವೀಟ್ ಮಾಡಿದ್ದು, "ಸೆಂಗೋಲ್ ಅನ್ನುವುದು ಭಾರತದ ಸ್ವಾತಂತ್ರ್ಯದ ಅವಿಭಾಜ್ಯ ಅಂಗ. ಈವರೆಗೆ ಮ್ಯೂಸಿಯಂನಲ್ಲಿ ವಾಕಿಂಗ್ ಸ್ಟಿಕ್‌ ಆಗಿತ್ತು. ಇಡೀ ವ್ಯವಸ್ಥೆಯಲ್ಲಿ ಪ್ರಾಚೀನ ಭಾರತ ಮತ್ತು ಹಿಂದೂ ಆಚರಣೆಗಳನ್ನು ವೈಭವೀಕರಿಸುವ ಯಾವುದೇ ಘಟನೆಯನ್ನು ಹೇಗೆ ಮುಚ್ಚಿಟ್ಟಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ," ಎಂದು ವ್ಯಂಗ್ಯವಾಡಿದ್ದಾರೆ.

ಹೊಸ ಸಂಸತ್‌ ಭವನದಲ್ಲಿ ಇರಿಸುವ ವ್ಯವಸ್ಥೆ

ಐತಿಹಾಸಿಕ ರಾಜದಂಡ ಸೆಂಗೋಲ್ ಅನ್ನು ಭಾರತದ ಇತಿಹಾಸದಿಂದ ಮರೆಮಾಚಿದ್ದಲ್ಲದೆ, ಇನ್ನು ಕೆಲವು ವರ್ಷ ಕಳೆದಿದ್ದರೆ ಅದು ಬಹುಶಃ ನೆಹರು ಅವರ ಚಿನ್ನದ ಊರುಗೋಲಾಗಿಯೇ ಶಾಶ್ವತವಾಗಿ ಉಳಿಯುವ ಅಪಾಯವಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ವಿಚಾರ ಬಂದಾಗ ಇದರ ಇತಿಹಾಸವನ್ನು ವಿಚಾರಣೆ ಮಾಡಿ ಅದನ್ನು ಹೊಸ ಸಂಸತ್‌ ಭವನದಲ್ಲಿ ಇರಿಸುವ ವ್ಯವಸ್ಥೆ ಮಾಡಿದ್ದಾರೆ.

ನಾಚಿಕೆಗೇಡಿನ ಸಂಗತಿಯೆಂದರೆ, ಅಧಿಕಾರ, ಶಕ್ತಿ ಮತ್ತು ನ್ಯಾಯವನ್ನು ಪ್ರತಿನಿಧಿಸಿದ್ದ ಐತಿಹಾಸಿಕ ಚಿನ್ನದ ಸೆಂಗೋಲ್ ಅನ್ನು 'ಗೋಲ್ಡನ್‌ ವಾಕಿಂಗ್ ಸ್ಟಿಕ್‌' ಎಂದು ಮ್ಯೂಸಿಯಂನಲ್ಲಿ ಬರೆದಿಟ್ಟಿದ್ದು, ಸ್ವತಃ ಭಾರತೀಯ ಇತಿಹಾಸಕಾರರೇ ತಲೆತಗ್ಗಿಸುವ ಸ್ಥಿತಿ ಎದುರಾಗಿದೆ.

ಹಿಂದು ಆಚರಣೆಗಳ ಬಗ್ಗೆ ಕಾಂಗ್ರೆಸ್‌ ತಿರಸ್ಕಾರ:

ಇನ್ನು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು, "ಭಾರತದ ಸ್ವಾತಂತ್ರ್ಯ ಮುನ್ನಾದಿನದಂದು ಜವಹರಲಾಲ್ ನೆಹರುಗೆ ಚಿನ್ನದ ಸೆಂಗೋಲ್ ರಾಜದಂಡವನ್ನು ಹಸ್ತಾಂತರಿಸಲಾಯಿತು. ಬ್ರಿಟಿಷರಿಂದ ಭಾರತಕ್ಕೆ ಅಧಿಕೃತವಾಗಿ ಅಧಿಕಾರನ್ನು ವರ್ಗಾಯಿಸಿದ್ದರೆ ಪ್ರಮುಖ ಕ್ಷಣ ಹಾಗೂ ಸಂಕೇತ. ಇದಕ್ಕೆ ಮಹತ್ವದ ಸ್ಥಾನವನ್ನು ನೀಡುವ ಬದಲು ಆನಂದ ಭವನದ ಮ್ಯೂಸಿಯಂನಲ್ಲಿ ಇರಿಸಿದ್ದು ಮಾತ್ರವಲ್ಲದೇ, ನೆಹರುಗೆ ನೀಡಲಾದ ಚಿನ್ನದ ಊರುಗೋಲು ಎಂದು ಬರೆದಿಟ್ಟಿದ್ದು, ಕಾಂಗ್ರೆಸ್ ಭಾರತೀಯ ಆಚರಣೆ ಮತ್ತು ಇತಿಹಾಸದ ಮೇಲೆ ತಿರಸ್ಕಾರ ಹೊಂದಿರುವುದನ್ನು ತೋರಿಸುತ್ತದೆ," ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ನಾಯಕ ಸಂಜು ವರ್ಮಾ ಎಂಬುವವರು, "1947ರಲ್ಲಿ ದೊರೆತಿದ್ದ ದೇಶದ ಇತಿಹಾಸದ ಭಾಗವಾಗಿರುವ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಲಿದ್ದು, ಸ್ಪೀಕರ್‌ ಸ್ಥಾನದ ಬಳಿ ಇರಲಿದೆ ಎಂದಿದ್ದಾರೆ. ಇಡೀ ರಾಷ್ಟ್ರ ನೋಡುವಂತೆ ಇದನ್ನು ಇಡಲಾಗುತ್ತದೆ. ವಿಶೇಷ ಸಂದರ್ಭದಲ್ಲಿ ಇದನ್ನು ಹೊರತೆಗೆಯಲಾಗುತ್ತಿದೆ," ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+