ಇಷ್ಟ ಬಂದವರನ್ನು ರಾಷ್ಟ್ರಪತಿಯಾಗಿಸಲು ಬಿಜೆಪಿಗಿಲ್ಲ ಕಷ್ಟ

ನಮ್ಮ ಆಯ್ಕೆಯ ಅಭ್ಯರ್ಥಿಗಳು ರಾಷ್ಟ್ರಪತಿ ಸ್ಥಾನದಲ್ಲಿ ಆಸೀನರಾಗಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು 'ಒನ್ಇಂಡಿಯಾ'ಗೆ ಮಾಹಿತಿ ನೀಡಿವೆ. ಜುಲೈನಲ್ಲಿ ಮುಖರ್ಜಿ ಅವಧಿ ಮುಗಿಯಲಿದ್ದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನವದೆಹಲಿ, ಮೇ 12: ತನ್ನ ಆಯ್ಕೆಯ ಅಭ್ಯರ್ಥಿಗಳನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಿಸಲು ಬಿಜೆಪಿಗೆ ಸರಳ ಅವಕಾಶವಿದೆ. ಬಿಜೆಪಿಗೆ ಬೆಂಬಲ ನೀಡಿ ವೈಎಸ್ಆರ್ ಕಾಂಗ್ರೆಸ್, ಟಿಆರ್ ಎಸ್, ಎಐಎಡಿಎಂಕೆ ಪಕ್ಷಗಳು ಮುಂದೆ ಬಂದಿರುವುದರಿಂದ ಸರಳ ಆಯ್ಕೆಗೆ ಬೇಕಾದ ಮತಗಳನ್ನು ಸುಲಭವಾಗಿ ಪಡೆಯಲಿದೆ.

ನಮ್ಮ ಆಯ್ಕೆಯ ಅಭ್ಯರ್ಥಿಗಳು ರಾಷ್ಟ್ರಪತಿ ಸ್ಥಾನದಲ್ಲಿ ಆಸೀನರಾಗಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು 'ಒನ್ಇಂಡಿಯಾ'ಗೆ ಮಾಹಿತಿ ನೀಡಿವೆ. ಇದೇ ಜುಲೈನಲ್ಲಿ ಪ್ರಣಬ್ ಮುಖರ್ಜಿ ಅವಧಿ ಮುಗಿಯಲಿದ್ದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಈಗಾಗಲೇ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಹೇಳಿದೆ. ಎಐಎಡಿಎಂಕೆ ಕೂಡಾ ಬಿಜೆಪಿಯನ್ನು ಬೆಂಬಲಿಸುವ ಎಲ್ಲಾ ಸಾಧ್ಯತೆ ಇದೆ. ಆದರೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಮಾತ್ರ ಇನ್ನೂ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ.

How BJP will easily elect its candidate as next President of India with ease

ಇನ್ನು ಬಿಜೆಪಪಿಯ ಮೂಲಗಳ ಪ್ರಕಾರ ಪಕ್ಷದೊಳಗಿನವರೇ ರಾಷ್ಟ್ರಪತಿಯಾಗಲಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳಿಗೆ ಮಣೆ ಹಾಕುವುದಿಲ್ಲ ಎನ್ನಲಾಗಿದೆ.

ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯದ ನಂತರವೂ ತನ್ನ ಆಯ್ಕೆಯ ರಾಷ್ಟ್ರಪತಿ ಆರಿಸಲು 17,500 ಮತಗಳ ಕೊರತೆ ಉಂಟಾಗುತ್ತಿತ್ತು.ಆದರೆ ಟಿಆರ್ಎಸ್, ವೈಎಸ್ಆರ್ ಕಾಂಗ್ರೆಸ್, ಮತ್ತು ಎಐಎಡಿಎಂಕೆಗಳು ಮುಂದೆ ಬಂದು ತಮ್ಮ ಬೆಂಬಲ ಸೂಚಿಸಿರುವುದರಿಂದ ಸದ್ಯ ಮತಗಳ ಕೊರತೆಯ ಭಯ ಇಲ್ಲ.

ಚರ್ಚೆಗೆ ಬಂದು ಹೋಗುತ್ತಿರುವ ಹೆಸರುಗಳು
ಮುಂದಿನ ರಾಷ್ಟ್ರಪತಿ ಯಾರಾಗಬೇಕು ಎಂಬ ಚರ್ಚೆ ದೇಶದಾದ್ಯಂತ ಜಾರಿಯಲ್ಲಿದೆ. ಬಿಜೆಪಿಯಿದ ಈಗಾಗಲೇ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ರಜನೀಕಾಂತ್, ದ್ರೌಪದಿ ಮುರ್ಮು ಮತ್ತು ಉಮಾ ಭಾರತಿಯ ಹೆಸರು ದೇಶದ ಪರಮೋಚ್ಛ ಹುದ್ದೆಗೆ ಕೇಳಿ ಬಂದಿದೆ.

ಇದೇ ವೇಳೆ ವಿಪಕ್ಷಗಳಿಂದ ಶರದ್ ಪವಾರ್, ಮೀರಾ ಕುಮಾರ್, ಗೋಪಾಲ ಕೃಷ್ಣ ಗಾಂಧಿ ಮತ್ತು ಶರದ್ ಯಾದವ್ ಹೆಸರುಗಳನ್ನೂ ಆಗಾಗ ತೇಲಿ ಬಿಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+