ಕಾಲೇಜು ದಿನಗಳಲ್ಲೇ ಫ್ರೀಲ್ಯಾನ್ಸಿಂಗ್‌ ಮೂಲಕ 25ಲಕ್ಷ ರೂ. ಶೈಕ್ಷಣಿಕ ಸಾಲ ತೀರಿಸಿದ IIM ಪದವೀಧರೆ: ಯುವಜನತೆಗೆ ಮಾದರಿ ಈಕೆ

ಉನ್ನತ ಶಿಕ್ಷಣಕ್ಕಾಗಿ ಮಾಡುವ ಲಕ್ಷಾಂತರ ರೂಪಾಯಿ ಸಾಲವನ್ನಾ ವಿದ್ಯಾಭ್ಯಾಸ ಮುಗಿದ ಎಷ್ಟೋ ವರ್ಷಗಳ ಕಾಲ ಇಎಂಐ ಕಟ್ಟುತ್ತಾ ಪರದಾಡುವವರನ್ನಾ ನಾವು ನೋಡಿರುತ್ತೇವೆ. ಅವರೆಲ್ಲರ ನಡುವೆ ಕೊಲ್ಕತ್ತಾ ಮೂಲದ ಐಐಎಂ ಪದವೀಧರೆ ಸ್ನೇಹಾ ಬೈದ್ಯ ಎನ್ನುವವರು ಇದಕ್ಕೆ ಒಂದು ಒಳ್ಳೆಯ ಪರಿಹಾರ ಕಂಡುಕೊಂಡಿದ್ದಾರೆ.

ಹೌದು, ಎಂಬಿಎ ವ್ಯಾಸಂಗಕ್ಕಾಗಿ ಮಾಡಿದ್ದ ಸುಮಾರು 28 ಲಕ್ಷ ರೂಪಾಯಿಗಳ ಶೈಕ್ಷಣಿಕ ಸಾಲವನ್ನ ಕಾಲೇಜಿನಲ್ಲಿ ಓದುತ್ತಿರುವಾಗಲೇ ವಿವಿಧ ಫ್ರೀಲ್ಯಾನ್ಸಿಂಗ್ ರೀತಿ ಬೇರೆ ಬೇರೆ ಕೆಲಸ ಮಾಡುವ ಮೂಲಕ ತೀರಿಸಿದ್ದಾರೆ. ಇದರಿಂದ ಇವತ್ತಿನ ಯುವಜನತೆಗೆ ಹಣ ನಿರ್ವಹಣೆ ಪಾಠ ಹೇಳಿಕೊಟ್ಟಿದ್ದಾರೆ.

IIM Graduate

2023-25ನೇ ಬ್ಯಾಚ್‌ನಲ್ಲಿ ಐಐಎಂನಿಂದ ಎಂಬಿಎ ಪೂರೈಸಿದ ಸ್ನೇಹಾ ಬೈದ್ಯ, ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಒಟ್ಟು 28 ಲಕ್ಷ ರೂಪಾಯಿ ವೆಚ್ಚವನ್ನ ಭರಿಸಬೇಕಾಗಿತ್ತು.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ವೆಚ್ಚದ ವಿವರವನ್ನ ಹಂಚಿಕೊಂಡಿರುವ ಅವರು, ಬೋಧನಾ ಶುಲ್ಕ 19.5 ಲಕ್ಷ ರೂಪಾಯಿ, ಮೆಸ್ ಶುಲ್ಕ 1.44 ಲಕ್ಷ ರೂಪಾಯಿ, ಪ್ರವೇಶ ಶುಲ್ಕ ಸೇರಿದಂತೆ ಇತರೆ ವೆಚ್ಚಗಳು 3ಲಕ್ಷ ರೂಪಾಯಿ ಹಾಗೂ ಬೇಸಿಗೆ ಇಂಟರ್ನ್‌ಶಿಪ್ ಮತ್ತು ದೈನಂದಿನ ಖರ್ಚುಗಳಿಗೆ 3 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 28 ಲಕ್ಷ ರೂಪಾಯಿ ವೆಚ್ಚವಾಗಿತ್ತು ಎಂದು ತಿಳಿಸಿದ್ದಾರೆ. ಆದರೆ, ವ್ಯಾಸಂಗ ಮುಗಿಸಿ ಹೊರಬರುವಷ್ಟರಲ್ಲಿಯೇ ತಮ್ಮ ಸಾಲದ ಮೊತ್ತವನ್ನು 5 ಲಕ್ಷ ರೂಪಾಯಿಗಿಂತ ಕೆಳಗೆ ಇಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

4 ಮೂಲಗಳಿಂದ ಗಳಿಕೆ

"ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಸಾಲವನ್ನು ಕಟ್ಟಲು ಆರಂಭಿಸಿದೆ. ಐಐಎಂನಲ್ಲಿ ಓದುತ್ತಿದ್ದಾಗ ನನ್ನ ಬಳಿ 4 ಆದಾಯ ಮೂಲಗಳಿದ್ದವು. ಬೇಸಿಗೆ ಇಂಟರ್ನ್‌ಶಿಪ್, ಫ್ರೀಲ್ಯಾನ್ಸಿಂಗ್ ಹಾಗೂ ಲೈವ್ ಪ್ರಾಜೆಕ್ಟ್‌ಗಳು ನನಗೆ ಎರಡನೇ ವರ್ಷದಲ್ಲಿ ನನ್ನ ಹಣಕಾಸಿನ ಅಗತ್ಯಗಳನ್ನ ಪೂರೈಸಲು ಸಹಾಯ ಮಾಡಿದವು. ಜೊತೆಗೆ ನನ್ನ ಪೋಷಕರು ಎರಡು ವರ್ಷಗಳಲ್ಲಿ 4 ಲಕ್ಷ ರೂಪಾಯಿ ನೀಡಿ ಬೆಂಬಲಿಸಿದರು. ಹೀಗಾಗಿ ಸಹಪಾಠಿಗಳಿಗೆ ಹೋಲಿಸಿದರೆ ನನ್ನ ಮೇಲಿದ್ದ ಸಾಲದ ಹೊರೆ ಬಹಳ ಕಡಿಮೆ" ಎಂದು ಸ್ನೇಹಾ ತಮ್ಮ ಯಶಸ್ಸಿನ ಗುಟ್ಟನ್ನ ಬಿಚ್ಚಿಟ್ಟಿದ್ದಾರೆ.

30 ಸಾವಿರಕ್ಕೆ ಇಳಿದ ಇಎಂಐ: 6 ತಿಂಗಳಲ್ಲಿ ಸಾಲಮುಕ್ತರಾಗುವ ಗುರಿ

ಪ್ರಸ್ತುತ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಸ್ನೇಹಾ, ಈಗ ತಿಂಗಳಿಗೆ ಸುಮಾರು 30,000 ರೂಪಾಯಿ ಇಎಂಐ ಪಾವತಿಸುತ್ತಿದ್ದಾರೆ. "ಸಾಲದ ಮೊತ್ತ ಈಗ 5 ಲಕ್ಷ ರೂಪಾಯಿಗಿಂತ ಕಡಿಮೆಯಿದೆ. ಜೀವನದಲ್ಲಿ ಹಲವು ಸಾಧನೆಗಳನ್ನ ಮಾಡಬೇಕೆಂಬ ಆಸೆ ನನಗಿದೆ. ಅದಕ್ಕಾಗಿ ಮೊದಲು ಸಾಲಮುಕ್ತಳಾಗಲು ಬಯಸುತ್ತೇನೆ. ಮುಂದಿನ ಆರು ತಿಂಗಳೊಳಗೆ ಸಂಪೂರ್ಣ ಸಾಲ ತೀರಿಸುವ ಗುರಿ ಹೊಂದಿದ್ದೇನೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಸೇವಿಂಗ್ಸ್ ಟಿಪ್ಸ್

ಸಾಲ ಕಡಿಮೆ ಮಾಡಲು ತಾವು ಫಾಲೋ ಮಾಡಿದ ಸರಳ ಉಳಿತಾಯ ಸೂತ್ರಗಳನ್ನ ಸ್ನೇಹಾ ಹಂಚಿಕೊಂಡಿದ್ದಾರೆ. "ಪ್ರತಿಯೊಂದು ರೂಪಾಯಿಯನ್ನಾ ಖರ್ಚು ಮಾಡುವಾಗ ಎಚ್ಚರಿಕೆಯಿಂದ ಮಾಡಿ. ನೀವು ಸಾಲ ಪಡೆಯುವ ಪ್ರತಿ ರೂಪಾಯಿಯೂ ಬಡ್ಡಿಯೊಂದಿಗೆ ವಾಪಸ್ ಬರುತ್ತದೆ ಎಂಬುದನ್ನು ಮರೆಯಬೇಡಿ. ಉದಾಹರಣೆಗೆ, ನಮ್ಮ ಕಾಲೇಜಿನ ಮೆಸ್ ಮತ್ತು ಕ್ಯಾಂಟೀನ್ ಶುಲ್ಕಗಳು ಸಾಲದ ಖಾತೆಗೆ ಲಿಂಕ್ ಆಗಿದ್ದವು. ಹೀಗಾಗಿ ಸಣ್ಣಪುಟ್ಟ ವಸ್ತುಗಳನ್ನ ಖರೀದಿಸಬೇಕಾದಾಗ ಕ್ಯಾಂಟೀನ್ ಬದಲು ಹತ್ತಿರದ ಕಿರಾಣಿ ಅಂಗಡಿಗಳಲ್ಲಿ ಖರೀದಿಸುತ್ತಿದ್ದೆ. ನನ್ನ ಮೆಸ್ ಶುಲ್ಕವನ್ನೂ ಫ್ರೀಲ್ಯಾನ್ಸಿಂಗ್‌ನಿಂದ ಬಂದ ಹಣದಿಂದ ಪಾವತಿಸಿದೆ. ಇಂತಹ ಸಣ್ಣ ನಿರ್ಧಾರಗಳು ದೀರ್ಘಕಾಲದಲ್ಲಿ ದೊಡ್ಡ ಉಳಿತಾಯಕ್ಕೆ ಕಾರಣವಾಗುತ್ತವೆ" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+