School Holiday: 11 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

School Holiday: ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕಾರಣಾಂತರಗಳಿಂದ ಶಾಲಾ-ಕಾಲೇಗಳಿಗೆ ಸಾಲು ರಜೆಗಳನ್ನು ಘೋಷಣೆ ಮಾಡಲಾಗಿದೆ. ಹಾಗೆಯೇ ಇದೀಗ ಜುಲೈ 29ರ ಮಂಗಳವಾರ 11 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳು, ಹವಾಮಾನ ವೈಪರಿತ್ಯದಂತಹ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಜೊತೆಗೆ ಈ ರಜೆಗಳನ್ನು ಸರಿದೂಗಿಸುವ ಕಾರ್ಯಗಳು ಸಹ ನಡೆಯುತ್ತಿವೆ. ಯಾಕಂದ್ರೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆನ್ನುವ ಕಾರಣದಿಂದ.

Holiday declared for schools in these 11 districts on July 29

ಈ ನಡುವೆಯೂ ಭಾರೀ ಮಳೆಯಾದಂತಹ ಭಾಗಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ಹಾಗೆಯೇ ಇದೀಗ ಈ 11 ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದ ಕಾರಣ ಜುಲೈ 29ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಇದೇ ಕಾರಣದಿಂದ ಜುಲೈ 28ರ ಸೋಮವಾರದಂದು ರಜೆ ಘೋಷಣೆ ಮಾಡಲಾಗಿತ್ತು.

ನಿನ್ನೆಯಿಂದಲೂ ರಾಜಸ್ಥಾನದಲ್ಲಿ ಬಿಟ್ಟುಬಿಡದೇ ಮಳೆರಾಯ ಅಬ್ಬರಿಸುತ್ತಿರುವ ಪರಿಣಾಮ ಹಲವೆಡೆ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಜುಲೈ 28ರ ಸೋಮವಾರ ತಿಳಿಸಿದ್ದಾರೆ ಅತಾ ವರದಿ ಆಗಿದೆ.

ಜುಲೈ 29ರ ಮಂಗಳವಾರ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಜಸ್ಥಾನದ 11 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈಗಾಗಲೇ ಇಂದು ಅಂದ್ರೆ ಸೋಂವಾರ ಕೂಡ ಭಾರೀ ಮಳೆ ಮುಂದುವರೆದ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿತ್ತು.

ಹಾಗೆಯೇ ಮಂಗಳವಾರ 29, 2025ರಂದು ರಜೆಗಳು ಮುಂದುವರೆಯಲಿವೆ. ಭಾರೀ ಮಳೆಯಿಂದ ರಸ್ತೆ ಸಂಪರ್ಕಗಳು ಕಡಿತಗೊಂಡು ವಾಹನ ಸವಾರರು ಪರದಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಪ್ರಯಾಣಿಸದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲ್ಲಿನ ಅಧಿಕಾರಿಗಳಿ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದ ಕೋಟಾ, ಭಿಲ್ವಾರಾ, ಝಲಾವರ್, ಚಿತ್ತೋರ್‌ಗಢ, ಪ್ರತಾಪ್‌ಗಢ, ಟೋಂಕ್, ಸಿರೋಹಿ, ರಾಜ್‌ಸಮಂದ್, ಪಾಲಿ, ಬುಂಡಿ, ಬರನ್, ಬನ್ಸ್‌ವಾರಾ ಮತ್ತು ಅಜ್ಮೀರ್ ಜಿಲ್ಲೆಗಳಲ್ಲಿ ರಣಭೀಕರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇನ್ನು ಇಂದು ಕೂಡ ಈ ಭಾಗಗಳಲ್ಲಿ ಭಾರೀ ಮಳೆ ಮುಂದುವರೆದ ಪರಿಣಾಮ ಇಲ್ಲಿನ 11 ಜಿಲ್ಲೆಗಳಲ್ಲಿನ ಶಾಲೆಗಳಿಗೆ ರಜೆ ಘೋಷಣೆ ಮಾಲಾಗಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ?: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ರಾಜ್ಯದ ಜಲಾವರ್, ಕೋಟಾ, ಚಿತ್ತೋರ್‌ಗಢ, ಟೋಂಕ್, ಭಿಲ್ವಾರ, ಬರನ್, ಡುಂಗರ್‌ಪುರ್, ಧೋಲ್‌ಪುರ್, ಸಲಂಬರ್, ಬನ್ಸ್‌ವಾರಾ, ಅಜ್ಮೀರ್ ಜಿಲ್ಲೆಗಳಲ್ಲಿ ಜುಲೈ 29ರಂದು ಶಾಲೆಗಳಿಗೆ ರಜೆ ಮುಂದುವರೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ಪೂರ್ವ ರಾಜಸ್ಥಾನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಕೋಟಾದ ರಾಮಗಂಜ್ ಮಂಡಿಯಲ್ಲಿ 242 ಮಿ.ಮೀ ಮತ್ತು ಭಿಲ್ವಾರಾದ ಜೈತುರಾದಲ್ಲಿ 235 ಮಿ.ಮೀ. ಮಳೆಯಾಗಿದೆ. ಪಶ್ಚಿಮ ರಾಜಸ್ಥಾನ, ಪಾಲಿ ಜಿಲ್ಲೆಯ ಬಾಲಿಯಲ್ಲಿ ಅತೀ ಹೆಚ್ಚು 88 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ, ಇಂದು (ಜುಲೈ 28) ಸಹ ಈ ಭಾಗಗಳಲ್ಲಿ ರಣಭೀಕರ ಮಳೆ ಮುಂದುವರೆದಿದೆ. ಈ ಹಿನ್ನೆಲೆ ಇಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+