Holiday: ಮೇ 16ರಂದು ಶಾಲಾ-ಕಾಲೇಜು, ಬ್ಯಾಂಕ್‌ಗಳಿಗೆ ರಜೆ ಘೋಷಣೆ
Holiday: ಈ ವರ್ಷದ ಆರಂಭದಿಂದಲೂ ಶಾಲಾ-ಕಾಲೇಜುಗಳಿಗೆ ಅಷ್ಟೇ ಅಲ್ಲದೆ ಬ್ಯಾಂಕ್‌ಗಳಿಗೆ ಹಲವೆಡೆ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ಇದೀಗ ಇದೇ ಮೇ 16ರಂದು ಕೂಡ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದ್ದ ಕಾರಣ ಯಾವಾಗ ಪರೀಕ್ಷೆಗಳು ಮುಗಿಯುತ್ತವೆ? ಮಕ್ಕಳಿಗೆ ಯಾವಾಗ ಬೇಸಿಗೆ ರಜೆ ಯಾವಾಗ ಸಿಗುತ್ತದೆ? ಎಂದು ಪೋಷಕರು ಕಾಯುತ್ತಿದ್ದರು. ಅದರಂತೆಯೇ ಈ ಬಾರಿ ವಿದ್ಯರ್ಥಿಗಳ ಹಿತದೃಷ್ಟಿಯಿಂದ ಬೇಗನೇ ಪರೀಕ್ಷೆಗಳನ್ನು ಮುಗಿಸಿ ಅವಧಿಗೂ ಮುನ್ನ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.

ವರ್ಷದ ಆರಂಭದಿಂದ ಇಲ್ಲಿವರೆಗೂ ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳ ವೇಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಪರೀಕ್ಷೆಗಳೆಲ್ಲ ಮುಗಿದಿದ್ದು, ಬೇಸಿಗೆ ರಜೆಯನ್ನೂ ಕೂಡ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಕೆಲವು ರಾಜ್ಯಗಳಲ್ಲಿ ಈಗ ಬೇಸಿಗೆ ರಜೆಗಳನ್ನು ಘೋಷಿಸುತ್ತಿದ್ದಾರೆ. ಕೆಲವೆಡೆ ಇನ್ನೂ ಈ ಬೇಸಿಗೆ ರಜೆ ಆರಂಭ ಆಗಿಲ್ಲ.
ದೇಶದ ಹಲವೆಡೆ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೆ ವರ್ಷದ ಆರಂಭದಿಂದ ಇಲ್ಲಿಯವರೆಗೂ ಸ್ಥಳೀಯ ಹಬ್ಬಗಳು ಸೇರಿದಂತೆ ಹಲವು ಕಾರಣಗಳಿಂದ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದರಿಂದ ಈ ಬಾರಿ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವೇ ಬಡಿಸಿದಂತಾಗಿದೆ. ಮತ್ತೊಂದೆಡೆ ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ಹಬ್ಬಗಳು ಬಂದಿವೆ. ಹಾಗೆಯೇ ಈ ರಾಜ್ಯದಲ್ಲಿ ಮೇ 16ರಂದು ಶಾಲಾ-ಕಾಲೇಜು ಹಾಗೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೇ 12 ರಂದು ಬುದ್ಧ ಪೂರ್ಣಿಮ ಹಿನ್ನೆಲೆ ಅನೇಕ ಭಾಗಗಳಲ್ಲಿ ಬ್ಯಾಂಕುಗಳು, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಸಹ ಮುಚ್ಚಲ್ಪಟ್ಟಿದ್ದವು. ಮೇ 14 ಮತ್ತು 15ರಂದು ದೇಶಾದ್ಯಂತ ಬ್ಯಾಂಕುಗಳು ತೆರೆದಿರಲಿವೆ. ಆದರೆ ಮೇ 16ರ ಶುಕ್ರವಾರದಂದು ಹಲವೆಡೆ ಬ್ಯಾಂಕುಗಳು ಮುಚ್ಚಲ್ಪಡಲಿದ್ದು, ಗ್ರಾಹಕರು ಬ್ಯಾಂಕ್ ಕೆಲಸಗಳಿದ್ದರೆ ಈಗಲೇ ಮುಗಿಸಿಕೊಳ್ಳುವುದು ಉತ್ತಮ.
ಮೇ 16 ರಂದು ಸರ್ಕಾರಿ ರಜೆ ಏಕೆ?: ಮೇ 16ರ ಶುಕ್ರವಾರ ಸಿಕ್ಕಿಂ ರಾಜ್ಯ ದಿನ ಆಚರಣೆ ಮಾಡಲಾಗುತ್ತದೆ. ಸಿಕ್ಕಿಂ ಭಾರತದ 22ನೇ ರಾಜ್ಯವಾದ ದಿನದ ನೆನಪಿಗಾಗಿ ಸಿಕ್ಕಿಂ ರಾಜ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದು ಸಾರ್ವಜನಿಕ ರಜಾ ದಿನವಾಗಿದೆ. ಆದರೆ, ದೇಶದ ಇತರ ರಾಜ್ಯಗಳಲ್ಲಿ ಈ ದಿನ ಸಾರ್ವಜನಿಕ ರಜೆ ಇರುವುದಿಲ್ಲ.
ಮೇ 18ರಂದು ರಜೆ ಏಕೆ?: ಇನ್ನು ಮೇ 17 ಶನಿವಾರ ಆಗಿದ್ದು, ಈ ದಿನ ಹಲವೆಡೆ ಮಾತ್ರರ ಕೆಲವು ಕಚೇರಿಗಳು ಮುಚ್ಚಲ್ಪಡುತ್ತದೆ. ಆದರೆ, ಈ ದಿನ ದೇಶದ ಎಲ್ಲಾ ಬ್ಯಾಂಕು-ಶಾಲೆಗಳು ಮತ್ತು ಕಾಲೇಜುಗಳು ತೆರೆದಿರುತ್ತವೆ. ಬೇಸಿಗೆ ರಜೆ ನೀಡಿರುವ ಶಾಲಾ-ಕಾಲೇಜುಗಳನ್ನು ಹೊರತುಡಪಸಿ. ಮೇ 18 ಭಾನುವಾರ ಆಗಿದ್ದು, ಈ ದಿನ ದೇಶದ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.












Click it and Unblock the Notifications