Get Updates
Get notified of breaking news, exclusive insights, and must-see stories!

ಕುಟುಂಬದ ಸಲುವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಆ ಹುಡುಗ ಮುಸ್ಲಿಂ, ಈ ಹುಡುಗಿ ಹಿಂದೂ. ಪರಸ್ಪರ ಪ್ರೀತಿಸಿದ್ದರು. ತಮ್ಮ ಕುಟುಂಬದವರಿಗೆ ತೊಂದರೆಯಾಗುತ್ತದೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ನಡೆದಿರುವುದು ಉತ್ತರಪ್ರದೇಶದ ಷಹಜಹಾನ್ ಪುರ್ ನಲ್ಲಿ.

ಲಖನೌ, ಮಾರ್ಚ್ 22: ಉತ್ತರಪ್ರದೇಶದ ಷಹಜಹಾನ್ ಪುರ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ದುರ್ಘಟನೆಯೊಂದರ ವರದಿಯಿದು. ಪ್ರೀತಿ ಮಾಡುತ್ತಿರುವವರಿಗೆ ಇಡೀ ಜಗತ್ತೇ ಕಾಣಲ್ಲ ಎಂಬರ್ಥ ಬರುವ ಮಾತುಗಳನ್ನು ಕೇಳಿರುತ್ತೀರಿ. ಆದರೆ ಈ ಇಬ್ಬರು ತಮ್ಮ ಕುಟುಂಬದವರ ಸಲುವಾಗಿ ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬದಗಾಂವ್ ನ 19 ವರ್ಷದ ಫಿರೋಜ್ ಅಹ್ಮದ್ ಹಾಗೂ 18 ವರ್ಷದ ಗುಂಜಾ ಶರ್ಮಾ ಪರಸ್ಪರ ಪ್ರೀಯಿಸುತ್ತಿದ್ದರು. ಇಬ್ಬರೂ ತಮ್ಮ ಹಳ್ಳಿಯ ಸಮೀಪದಲ್ಲಿರುವ ಬಂತಾರಾ ರೈಲು ನಿಲ್ದಾಣದಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇಬ್ಬರ ಮೇಲೆ ಬಹಳ ಒತ್ತಡವಿತ್ತು.[ವಿಜಯನಗರ: ಯುವಕನ ಮೇಲೆ ಯುವತಿಯಿಂದ Acid ದಾಳಿ]

Hindu-Muslim Couple Commit Suicide To Save Their Families From 'Trouble'

ಏಕೆಂದರೆ ಅಹ್ಮದ್ ಮುಸ್ಲಿಂ ಮತ್ತು ಶರ್ಮಾ ಹಿಂದೂ. ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಇಬ್ಬರು ಮೊದಲಿಗೆ ಅಪ್ಪಿಕೊಂಡಿದ್ದಾರೆ. ಆ ನಂತರ ಅಹ್ಮದ್ ಪಿಸ್ತೂಲಿನಿಂದ ಶರ್ಮಾ ಹಣೆಗೆ ಗುಂಡು ಹಾರಿಸಿದ್ದಾನೆ. ಆ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮೋಹನ್ ಸಿಂಗ್ ಎಂಬ ಪ್ರತ್ಯಕ್ಷದರ್ಶಿ ಮಾತನಾಡಿದ್ದಾರೆ.[ಆಕೆ ಬದುಕು ಕೊಟ್ಟಳು, ಆತ ಪ್ರೀತಿಯನ್ನೇ ಮರೆತು ಕೈಕೊಟ್ಟ!]

"ಏನಾಗುತ್ತಿದೆ ಎಂದು ಗೊತ್ತಾಗುವ ಮುಂಚೆಯೇ ಎಲ್ಲ ಮುಗಿದು ಹೋಯಿತು. ರೈಲು ನಿಲ್ದಾಣದ ಹತ್ತಿರ ಇಬ್ಬರೂ ನಿಂತುಕೊಂಡರು. ಆಮೇಲೆ ಅಪ್ಪಿಕೊಂಡರು. ನಂತರ ನಮಗೆ ಎರಡು ಬಾರಿ ಗುಂಡಿನ ಶಬ್ದ ಕೇಳಿಸಿತು" ಎಂದು ಅವರು ಹೇಳಿದ್ದಾರೆ. ಯುವಕ-ಯುವತಿಯ ಪೋಷಕರು ಶವವನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+