ಹಿಂಡನ್ ಬರ್ಗ್ ವರದಿಯಿಂದ ಗೌತಮ್ ಅದಾನಿಗೆ ಶಾಕ್; ವರದಿಯಲ್ಲಿ ಏನಿದೆ
ಹಿಂಡನ್ ಬರ್ಗ್ ಹೆಸರು ಕೇಳುತ್ತಿದ್ದಂತೆ ಎಲ್ಲರ ಕಿವಿ ಚುರುಕಾಗುತ್ತವೆ. ಮತ್ತೇನು ಸುದ್ದಿಯನ್ನು ಹೊರ ತರಲಿದೆ ಈ ಕಂಪನಿ ಎಂದು ಭಯ ದೊಡ್ಡ ದೊಡ್ಡ ಕಂಪನಿಗಳಿಗೆ ಆರಂಭವಾಗುತ್ತದೆ. ಈ ಹಿಂದೆ ಈ ಕಂಪನಿಯ ಮೇಲೆ ಗಂಭೀರ ಆರೋಪವನ್ನು ಮಾಡಿತ್ತು. ಈಗ ಇದೇ ರೀತಿಯ ಆರೋಪವನ್ನು ಮಾಡಿ ಬಾರೀ ಸುದ್ದಿಯಲ್ಲಿದೆ.
ದೇಶದ ಖ್ಯಾತ ಉದ್ಯಮಿ ಗೌತಮ್ ಅದಾನಿ ಹಾಗೂ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಜ್ ಅವರ ಮೇಲೆ ಗಂಭೀರ ಆರೋಪವನ್ನು ಮಾಡಿದೆ. ಈ ಬಾರಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಗುರಿಯಾಗಿದ್ದಾರೆ. ತನ್ನ ವರದಿಯಲ್ಲಿ, ಹಿಂಡನ್ ಬರ್ಗ್ ಮಾಧವಿ ಪುರಿ ಮತ್ತು ಅದಾನಿ ಗ್ರೂಪ್ ನಡುವಿನ ಸಂಬಂಧದ ಬಗ್ಗೆ ವರದಿ ಮಾಡಿದ್ದು, ವೈಯಕ್ತಿಕ ಲಾಭಕ್ಕಾಗಿ ಅದಾನಿ ಗ್ರೂಪ್ ವಿರುದ್ಧ ಸೆಬಿ ಮುಖ್ಯಸ್ಥರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ.

ಹಿಂಡನ್ ಬರ್ಗ್ ಈ ಬಾರಿ ಬಿಡುಗಡೆ ಮಾಡಿದ ವರದಿಯಲ್ಲಿ ಗೌತಮ್ ಅದಾನಿ ಹಾಗೂ ಸೆಬಿ ಮುಖ್ಯಸ್ಥರನ್ನು ಗುರಿಯಾಗಿಸಿದೆ. ಈ ವರದಿಯಲ್ಲಿ ಸೆಬಿ ಮುಖ್ಯಸ್ಥರ ವಿರುದ್ಧ ಹಲವು ಆರೋಪಗಳ ಸುರಿಮಳೆಯನ್ನು ಮಾಡಲಾಗಿದೆ. ಅಲ್ಲದೆ ಇವರು ಅದಾನಿ ಗ್ರೂಪ್‌ಗೆ ಲಾಭ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಗೌತಮ್ ಅದಾನಿ ಅವರ ಆಸ್ತಿಯ ಮೇಲೆ ನೇರ ಪರಿಣಾಮ ಬೀರಿದ್ದು, ಆಸ್ತಿ ಕುಸಿತ ಕಂಡಿದೆ.
ವರದಿ ಬಹಿರಂಗವಾಗುತ್ತಿದ್ದಂತೆ, ಅದಾನಿ ಮೌಲ್ಯ ಕುಸಿದಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಸಂಪತ್ತು 104 ಶತಕೋಟಿ ಡಾಲರ್‌ಗೆ ಕುಸಿದಿದೆ ಎಂದು ತಿಳಿಸಿದೆ.
ಅದಾನಿ ಗ್ರೂಪ್ ಟಾರ್ಗೆಟ್
ಈ ಹಿಂದೆಯೂ ಹಿಂಡನ್ ಬರ್ಗ್ ವರದಿಯಿಂದ ಮಾರುಕಟ್ಟೆಯಲ್ಲಿ ಕೋಲಾಹಲ ಎದ್ದಿತ್ತು. ಜನವರಿ 24, 2023 ರಂದು, ಮೊದಲ ಬಾರಿಗೆ, ಹಿಂಡನ್ ಬರ್ಗ್ ಅದಾನಿ ಕಂಪನಿಗಳಲ್ಲಿನ ಲೆಕ್ಕಪತ್ರ ವಂಚನೆ ಮತ್ತು ಷೇರುಗಳ ಹೆಚ್ಚಿನ ಬೆಲೆಯ ಬಗ್ಗೆ ವಿವರವಾದ ವರದಿಯನ್ನು ಬಿಡುಗಡೆ ಮಾಡಿತ್ತು. ಆಗ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿತ್ತು. ಅಲ್ಲದೆ ಅದಾನಿ ಗ್ರೂಪ್‌ನ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿತ ಕಂಡಿದ್ದವು.
ಕಳೆದ ಬಾರಿಯ ವರದಿ ಬಹಿರಂಗವಾದಾಗ ವಿಶ್ವದ ಎರಡನೇ ಶ್ರೀಮಂತ ಕೈಗಾರಿಕೋದ್ಯಮಿಯಾಗಿದ್ದ ಅದಾನಿ ಮೌಲ್ಯದಲ್ಲಿ ಭಾರೀ ಕುಸಿತ ಕಂಡಿತ್ತು. ಈ ಬಾರಿಯ ವರದಿ ಷೇರುಪೇಟೆ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಮಾಧವಿ ಮೇಲಿನ ಆರೋಪ ಏನು?
ಸದ್ಯ ಹಿಂಡನ್ ಬರ್ಗ್ ವರದಿಯ ಅನ್ವಯ ಅದಾನಿ ಹಾಗೂ ಮಾಧವಿ ಪುರಿ ಬುಚ್ ಸಂಬಂಧವನ್ನು ಬಹಿರಂಗ ಪಡಿಸಿದೆ. ಸೆಬಿ ಅಧ್ಯಕ್ಷರು, ಅದಾನಿ ಗ್ರೂಪ್ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದೆ. ಮಾಧವಿ ಪುರಿ ಬುಚ್ ಮತ್ತು ಆಕೆಯ ಪತಿ ಧವಲ್ ಬುಚ್ ಅವರು ಅದಾನಿಯ ಆಫ್‌ಶೋರ್ ಕಂಪನಿಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಹಿಂಡನ್ ಬರ್ಗ್ ತಿಳಿಸಿದೆ.












Click it and Unblock the Notifications