Gujarat & HP Elections Exit Polls Live: ಎಲ್ಲ ಸಮೀಕ್ಷೆಗಳಲ್ಲಿ ಅರಳಿದ ಕಮಲ
ನವದೆಹಲಿ, ಡಿಸೆಂಬರ್ 05: ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆ ಅಥವಾ ಅಭಿಪ್ರಾಯ ಸಂಗ್ರಹಣೆಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನಿಷೇಧಿಸಿದೆ.
ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ ಬಿಗಿ ಭದ್ರತೆಯ ನಡುವೆ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಎರಡು ರಾಜ್ಯಗಳ ಚುನಾವಣೆಯು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದ್ದರೆ ಪ್ರತಿಪಕ್ಷಗಳ ಪಾಲಿಗೆ ಅವಕಾಶದ ಬುತ್ತಿಯಂತೆ ತೋರುತ್ತಿದೆ.

ಪ್ರಧಾನಿ ತವರು ರಾಜ್ಯದಲ್ಲಿ ಗದ್ದುಗೆ ಹಿಡಿಯಲು ಎಎಪಿ ಸೆಡ್ಡು ಹೊಡೆದು ನಿಂತಿದೆ. ಗುಜರಾತ್ ರಾಜಕೀಯ ಅಂಗಳದಲ್ಲಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರ ಮಧ್ಯೆ ಮತದಾರರು ಬರೆದ ತೀರ್ಪು ಯಾವ ರೀತಿಯಾಗಿದೆ. ಖಾಸಗಿ ಮಾಧ್ಯಮಗಳು ಹಾಗೂ ಸಮೀಕ್ಷಾ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಮತದಾರರ ಅಭಿಪ್ರಾಯ ಯಾವ ರೀತಿಯಾಗಿದೆ ಎಂಬುದರ ಕುರಿತು ಕ್ಷಣಕ್ಷಣದ ಮಾಹಿತಿಗಾಗಿ ಮುಂದೆೆ ಓದಿ.
Explainer: ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ? ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು?
Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು?
Himachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿ


ಗುಜರಾತ್ ಎಕ್ಸಿಟ್ ಪೋಲ್ 2022
ಹಿಮಾಚಲ ಎಕ್ಸಿಟ್ ಪೋಲ್ 2022





















Click it and Unblock the Notifications