ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Himachal Pradesh Exit Poll Result 2022; ಯಾರಿಗೆ ಎಷ್ಟು ಸೀಟು?

|
Google Oneindia Kannada News

ನವದೆಹಲಿ, ಡಿಸೆಂಬರ್ 05; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022ರ ಚುನಾವಣೋತ್ತರ ಸಮೀಕ್ಷೆಗಳು ಸೋಮವಾರ ಪ್ರಕಟಗೊಂಡಿವೆ. ವಿವಿಧ ವಾಹಿನಿಗಳು ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿವೆ ಎಂದು ಅಂದಾಜಿಸಿವೆ.

ಸೋಮವಾರ News X and Jan Ki Baat ನಡೆಸಿದ ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 32-40 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದೆ.

Himachal Pradesh Exit Poll Result 2022; ಬಿಜೆಪಿಗೆ ಗೆಲುವು Himachal Pradesh Exit Poll Result 2022; ಬಿಜೆಪಿಗೆ ಗೆಲುವು

Himachal Pradesh Exit Polls Results 2022 Released; BJP May Get 32 To 40 Seats

ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ 27-34 ಸ್ಥಾನಗಳಲ್ಲಿ ಜಯಗಳಿಸಲಿದೆ. ಎಎಪಿ ಪಕ್ಷ ಯಾವುದೇ ಸ್ಥಾನದಲ್ಲಿ ಜಯಗಳಿಸುವುದಿಲ್ಲ. ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಡಿಸೆಂಬರ್ 8ರ ಗುರುವಾರ ಪ್ರಕಟವಾಗಲಿದೆ.

Himachal Pradesh Exit Poll Result 2022; ಬಿಜೆಪಿಯೇ ಬಹುದೊಡ್ಡ ಪಕ್ಷ Himachal Pradesh Exit Poll Result 2022; ಬಿಜೆಪಿಯೇ ಬಹುದೊಡ್ಡ ಪಕ್ಷ

ಹಿಮಾಚಲ ಪ್ರದೇಶದಲ್ಲಿ ಪ್ರತಿ ಚುನಾವಣೆಯಲ್ಲಿಯೂ ರಾಜ್ಯದ ವಿರೋಧ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳನ್ನು ಗಮನಿಸಿದರೆ ಈ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಇದೆ.

ಗುಜರಾತ್, ಹಿಮಾಚಲ ಚುನಾವಣೆ: ಶೀಘ್ರ, ನಿಖರ ಫಲಿತಾಂಶಕ್ಕೆ Dailyhunt ನೋಡಿಗುಜರಾತ್, ಹಿಮಾಚಲ ಚುನಾವಣೆ: ಶೀಘ್ರ, ನಿಖರ ಫಲಿತಾಂಶಕ್ಕೆ Dailyhunt ನೋಡಿ

ಹಿಮಾಚಲ ಪ್ರದೇಶದ ವಿವಿಧ ಚುನಾವಣೋತ್ತರ ಫಲಿತಾಂಶಗಳು

* Republic TV P-Marq ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 34-39, ಕಾಂಗ್ರೆಸ್ 28-33 ಮತ್ತು ಎಎಪಿ 1 ಸ್ಥಾನದಲ್ಲಿ ಜಯಗಳಿಸಲಿದೆ.

* Times Now-ETG ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 38, ಕಾಂಗ್ರೆಸ್ 28 ಮತ್ತು ಎಎಪಿ 0 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

* Zee News-BARC ಸಮೀಕ್ಷೆಗಳ ಪ್ರಕಾರ ಬಿಜೆಪಿ 35-40, ಕಾಂಗ್ರೆಸ್ 20-25 ಮತ್ತು ಎಎಪಿ 0-3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

* News X and Jan Ki Baat ಸಮೀಕ್ಷೆಗಳ ಪ್ರಕಾರ ಬಿಜೆಪಿ 32-40, ಕಾಂಗ್ರೆಸ್ 27-34 ಕ್ಷೇತ್ರದಲ್ಲಿ ಗೆದ್ದರೆ, ಎಎಪಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ.

ಹಿಂದಿನ ಚುನಾವಣೆ ಫಲಿತಾಂಶ; ಹಿಮಾಚಲ ಪ್ರದೇಶದಲ್ಲಿ ಒಮ್ಮೆ ಅಧಿಕಾರ ನಡೆಸಿದ ಪಕ್ಷ ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರುತ್ತವೆ ಎಂಬ ಮಾತಿದೆ. ಹಿಂದಿನ ಚುನಾವಣೆಯಲ್ಲಿ ಇದು ಸಾಬೀತಾಗಿದೆ.

2017ರ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ಹಿಡಿದಿತ್ತು.

2012ರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಬಿಜೆಪಿಗೆ 26, ಕಾಂಗ್ರೆಸ್‌ಗೆ 36 ಮತ್ತು ಇತರರು 6 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಅಧಿಕಾರ ಹಿಡಿದಿತ್ತು.

English summary
Himachal Pradesh Assembly Election Exit Poll Results 2022 Released : All top media organizations have released their exit poll results for Himachal Pradesh; Know who will win. News X and Jan Ki Baat exit poll predicted 32-40 seats. News X and Jan Ki Baat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X