Himachal Pradesh Exit Poll Result 2022; ಎಲ್ಲಾ ಸಮೀಕ್ಷೆಗಳ ವರದಿ

ನವದೆಹಲಿ, ಡಿಸೆಂಬರ್ 05; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ಪೂರ್ಣಗೊಂಡಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ. ಚುನಾವಣೋತ್ತರ ಸಮೀಕ್ಷೆಗಳು ಸೋಮವಾರ ಪ್ರಕಟಗೊಂಡಿವೆ. ವಿವಿಧ ರಾಷ್ಟ್ರೀಯ ವಾಹಿನಿಗಳು ನಡೆಸಿದ ಸಮೀಕ್ಷೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿವೆ ಎಂದು ಹೇಳಿವೆ.

ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 12ರಂದು ಮತದಾನ ನಡೆದಿತ್ತು. ಶೇ 75.6ರಷ್ಟು ಮತದಾನವಾಗಿತ್ತು, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 35. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಅಧಿಕಾರ ಹಿಡಿದಿತ್ತು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಚುನಾವಣೆಯಲ್ಲಿ ವಿರೋಧ ಪಕ್ಷದಲ್ಲಿ ಕೂರಲಿದೆ ಎಂಬ ಮಾತಿದೆ. ಆದರೆ ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳನ್ನು ಗಮನಿಸಿದರೆ ಈ ಮಾತು ಸುಳ್ಳಾಗಲಿದೆ. ಎಲ್ಲಾ ಸಮೀಕ್ಷೆಗಳೂ ಬಿಜೆಪಿ ಅತಿದೊಡ್ಡ ಪಕ್ಷವಾಗಲಿದೆ ಎಂದು ಅಂದಾಜಿಸಿವೆ.

ಹಿಮಾಚಲ ಪ್ರದೇಶದಲ್ಲಿ 2017ರ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ಹಿಡಿದಿತ್ತು. ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.

Himachal Pradesh Exit Polls Results 2022; Poll Of Polls

2012ರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಬಿಜೆಪಿಗೆ 26, ಕಾಂಗ್ರೆಸ್‌ಗೆ 36 ಮತ್ತು ಇತರರು 6 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಹಿಮಾಚಲ ಪ್ರದೇಶ ಸಮೀಕ್ಷೆಗಳ ಸಮೀಕ್ಷೆ

* News 24-Today's Chanakya; ಬಿಜೆಪಿ 33, ಕಾಂಗ್ರೆಸ್ 33, ಇತರರು 2 ಸ್ಥಾನ

* Republic TV P-Marq; ಬಿಜೆಪಿ 34-39, ಕಾಂಗ್ರೆಸ್ 28-33 ಮತ್ತು ಎಎಪಿ 1 ಸ್ಥಾನ

* Times Now-ETG; ಬಿಜೆಪಿ 38, ಕಾಂಗ್ರೆಸ್ 28 ಮತ್ತು ಎಎಪಿ 0 ಸ್ಥಾನ

* Zee News-BARC; ಬಿಜೆಪಿ 35-40, ಕಾಂಗ್ರೆಸ್ 20-25 ಮತ್ತು ಎಎಪಿ 0-3 ಸ್ಥಾನ

* News X and Jan Ki Baat; ಬಿಜೆಪಿ 32-40, ಕಾಂಗ್ರೆಸ್ 27-34, ಎಎಪಿ 0

* Jan Ki Baat-India News; ಬಿಜೆಪಿ 34-40, ಕಾಂಗ್ರೆಸ್ 34-27, ಎಎಪಿ 0, ಇತರರು 2-1

* India Today-Axis My India; ಬಿಜೆಪಿ 24-34, ಕಾಂಗ್ರೆಸ್ 30-40, ಎಎಪಿ 0, ಇತರರು 4-8

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+