Himachal Pradesh Exit Poll Result 2022; ಬಿಜೆಪಿಗೆ ಗೆಲುವು
ನವದೆಹಲಿ, ಡಿಸೆಂಬರ್ 05; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ವಿವಿಧ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಸೋಮವಾರ ಪ್ರಕಟಗೊಂಡಿವೆ. ಚುನಾವಣೆ ಫಲಿತಾಂಶ ಡಿಸೆಂಬರ್ 8ರಂದು ಪ್ರಕಟವಾಗಲಿದೆ.
ನವೆಂಬರ್ 12ರಂದು ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶೇ 75.6ರಷ್ಟು ಮತದಾನವಾಗಿತ್ತು, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 35.

Times Now Navbharat ETG Exit Poll ಸಮೀಕ್ಷೆಯ ವರದಿಯಂತೆ ಹಿಮಾಚಲ ಪ್ರದೇಶದ ಒಟ್ಟಾರೆ ಫಲಿತಾಂಶ ಹೀಗಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ 38 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆಯಲಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ 2022ರ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 38, ಕಾಂಗ್ರೆಸ್ 28, ಎಎಪಿ 0, ಇತರರು 2 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಯಾರಿಗೆ ಎಷ್ಟು ಮತಗಳು?; ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿಯ ಮತಗಳಿಕೆ ಶೇ 45.1, ಕಾಂಗ್ರೆಸ್ 40.1 ಆಗಿದೆ. ಎಎಪಿ ಪಕ್ಷ ಯಾವುದೇ ಸ್ಥಾನದಲ್ಲಿ ಜಯಗಳಿಸದಿದ್ದರೂ ಶೇ 5.3ರಷ್ಟು ಮತಗಳನ್ನು ಪಡೆಯಲಿದೆ. ಅಲ್ಲದೇ ಇತರರು ಶೇ 8.7ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಮೋದಿ ಹೆಸರಿನಲ್ಲಿ ಮತ ಚಲಾವಣೆ; Times Now Navbharat ETG ಎಕ್ಸಿಟ್ ಪೋಲ್ ಪ್ರಕಾರ ರಾಜ್ಯದ ಶೇ 41ರಷ್ಟು ಜನರು ಪ್ರಧಾನಿ ನರೇಂದ್ರ ಹೆಸರಿನಿಂದಾಗಿ ಮತದಾನ ಮಾಡಿದ್ದಾರೆ. ಶೇ 25ರಷ್ಟು ಜನರು ಅಭಿವೃದ್ಧಿ ಮತ್ತು ಪ್ರಧಾನಿ ಮೋದಿ ಹೆಸರಿನಲ್ಲಿ ಮತ್ತು ಶೇ 18ರಷ್ಟು ಜನರು ನರೇಂದ್ರ ಮೋದಿ ಮತ್ತು ಸಿಎಂ ಜೈರಾಂ ಠಾಕೂರ್ ಹೆಸರಿನಲ್ಲಿ ಮತದಾನ ಮಾಡಿದ್ದಾರೆ.
ಕಳೆದ ಎರಡು ಚುನಾವಣೆಗಳ ಫಲಿತಾಂಶವನ್ನು ನೋಡುವುದಾದರೆ 2012ರ ಚುನಾವಣೆಯಲ್ಲಿ ಬಿಜೆಪಿ 26, ಕಾಂಗ್ರೆಸ್ 36 ಮತ್ತು ಇತರರು 6 ಸ್ಥಾನಗಳಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿತ್ತು.
ಇನ್ನು 2017ರ ಚುನಾವಣೆಯಲ್ಲಿ ಬಿಜೆಪಿ 44, ಕಾಂಗ್ರೆಸ್ 21 ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. 2022ರ ಚುನಾವಣೆಯಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.












Click it and Unblock the Notifications